ಅನರ್ಹ ಶಾಸಕರ ತೀರ್ಪು ಹಿನ್ನಲೆ: ಸಿಎಂ ಯಡಿಯೂರಪ್ಪಗೆ ಟೆನ್ಷನ್

ಬೆಳಿಗ್ಗೆ ವಾಕ್ ಮಾಡಿ ಬಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಧ್ಯಾಹ್ನ 3 ಗಂಟೆವರೆಗೂ ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ.

Last Updated : Nov 13, 2019, 09:44 AM IST
ಅನರ್ಹ ಶಾಸಕರ ತೀರ್ಪು ಹಿನ್ನಲೆ: ಸಿಎಂ ಯಡಿಯೂರಪ್ಪಗೆ ಟೆನ್ಷನ್  title=

ಬೆಂಗಳೂರು: ಸುಪ್ರೀಂ ಕೋರ್ಟ್ ಇಂದು ಅನರ್ಹ ಶಾಸಕರ ತೀರ್ಪು ಪ್ರಕಟಿಸುವ ಹಿನ್ನಲೆಯಲ್ಲಿ  ಟೆನ್ಷನ್ ಮಾಡಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿನ ಬಹುತೇಕ ಕಾರ್ಯಕ್ರಮಗಳನ್ನು ರದ್ದು ಪಡಿಸಿದ್ದಾರೆ. ಬೆಳಿಗ್ಗೆ ವಾಕ್ ಮಾಡಿ ಬಂದ ಯಡಿಯೂರಪ್ಪ ಮಧ್ಯಾಹ್ನ 3 ಗಂಟೆವರೆಗೂ ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ.

ಮಧ್ಯಾಹ್ನ ಮೂರು ಗಂಟೆಗೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು ಅಲ್ಲಿಯವರೆಗೂ ಸಿಎಂ ತಮ್ಮ ನಿವಾಸದಲ್ಲೆ ಇರಲಿದ್ದಾರೆ. ಅನರ್ಹ ಶಾಸಕರ ಕುರಿತು ತೀರ್ಪಿನಿಂದ ಬೆಳಿಗ್ಗೆ ನಿಯೋಜನೆಗೊಂಡ ಕಾರ್ಯಕ್ರಮಗಳೆಲ್ಲಾ ರದ್ದು ಮಾಡಿದ್ದಾರೆ. ಬೆಳಿಗ್ಗೆ 10 ಕ್ಕೆ ಅಶೋಕ್ ಹೋಟೆಲ್ ನಲ್ಲಿ ಕಾರ್ಯಕ್ರಮ ನಿಗಧಿ ಆಗಿತ್ತು ಇದೀಗ ಅದು ರದ್ದಾಗಿದೆ. ಸಂಜೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

Trending News