ಉಗ್ರ ಕೃತ್ಯದ ಶಂಕೆ ಹಿನ್ನಲೆ: ದಾವಣಗೆರೆಯಲ್ಲಿ ವ್ಯಕ್ತಿಯ ಬಂಧನ..!

Suspected Terrorist arrested: ಮೂಲತಃ ಬೆಂಗಳೂರಿನ ಮೂಲದವನಾಗಿರುವ ಫಯಾಜ್ ವುಲ್ಲಾ ವಿರುದ್ಧ ಈ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್ ಮತ್ತು ಆಯುಧ ಮಾರಾಟದ ಬಗ್ಗೆ 7 ಪ್ರಕರಣ ದಾಖಲಾಗಿದೆ.

Written by - Zee Kannada News Desk | Last Updated : Jul 20, 2023, 09:09 PM IST
  • ಉಗ್ರ ಕೃತ್ಯದ ಶಂಕೆ ಹಿನ್ನಲೆ ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬನ ಬಂಧನ
  • ದಾವಣಗೆರೆಗೆ ಅಜಾದ್ ನಗರದ ಮನೆಯಲ್ಲಿ ಫಯಾಜ್ ವುಲ್ಲಾ ವಶಕ್ಕೆ
  • ಬೆಂಗಳೂರಿನಿಂದ ಬಂದಿದ್ದ ಸಿಸಿಬಿ ಪೊಲೀಸರಿಂದ ಫಯಾಜ್ ಬಂಧನ
ಉಗ್ರ ಕೃತ್ಯದ ಶಂಕೆ ಹಿನ್ನಲೆ: ದಾವಣಗೆರೆಯಲ್ಲಿ ವ್ಯಕ್ತಿಯ ಬಂಧನ..! title=
ಶಂಕಿತ ಉಗ್ರನ ಬಂಧನ!

ದಾವಣಗೆರೆ: ಉಗ್ರ ಕೃತ್ಯದ ಶಂಕೆ ಹಿನ್ನಲೆ ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಫಯಾಜ್ ವುಲ್ಲಾ(32)  ಎಂಬ ವ್ಯಕ್ತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಗುರುವಾರ(ಜುಲೈ 20) ಬೆಳಗ್ಗೆ ದಾವಣಗೆರೆಗೆ ಆಗಮಿಸಿದ ಸಿಸಿಬಿ ಪೊಲೀಸರ ತಂಡ, ಅಜಾದ್ ನಗರದ ಅರಳಿಮರ ವೃತ್ತದ ಬಳಿಯ ಮನೆಯಲ್ಲಿ ಫಯಾಜ್ ವುಲ್ಲಾನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಕೆರೆಗಳ ಮೇಲೆ ಫ್ಲೋಟಿಂಗ್‌ ಸೋಲಾರ್‌ ಪ್ಯಾನೆಲ್‌ ಅಳವಡಿಸಲು ಚಿಂತನೆ : ಸಚಿವ ಎನ್‌.ಎಸ್‌ ಭೋಸರಾಜ್‌ 

ಮೂಲತಃ ಬೆಂಗಳೂರಿನ ಮೂಲದವನಾಗಿರುವ ಫಯಾಜ್ ವುಲ್ಲಾ ವಿರುದ್ಧ ಈ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್ ಮತ್ತು ಆಯುಧ ಮಾರಾಟದ ಬಗ್ಗೆ 7 ಪ್ರಕರಣ ದಾಖಲಾಗಿದೆ. ಇದೀಗ ಶಂಕಿತ ಉಗ್ರರ ಬಂಧನ ಹಿನ್ನೆಲೆ, ಫಯಾಜ್ ವುಲ್ಲಾ ವಶಕ್ಕೆ ಪಡೆದಿದ್ದು ಹಲವು ಸಂಶಯಕ್ಕೆ ಕಾರಣವಾಗಿದೆ.

ಜಾಮೀನು ಮೇಲೆ ಹೊರಗಿದ್ದ ಫಯಾಜ್ ವುಲ್ಲಾನನ್ನು ಇದೀಗ ಮತ್ತೆ ವಶಕ್ಕೆ ಪಡೆದು ಸಿಸಿಬಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ದಾವಣಗೆರೆಯಲ್ಲಿ 2ನೇ ಹೆಂಡತಿಯ ಮನೆಯಲ್ಲಿ ಫಯಾಜ್ ವುಲ್ಲಾ ವಾಸವಾಗಿದ್ದ.

ಇದನ್ನೂ ಓದಿ: ಸ್ಪೀಕರ್ ಹುದ್ದೆ ದುರುಪಯೋಗವಾಗುತ್ತಿದೆ : ಬಸವರಾಜ ಬೊಮ್ಮಾಯಿ ಆಕ್ರೋಶ

ಚಿತ್ರದುರ್ಗದಲ್ಲಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಫಯಾಜ್ ವುಲ್ಲಾ ಪ್ರತಿನಿತ್ಯ ದಾವಣಗೆರೆಯಿಂದ ಚಿತ್ರದುರ್ಗಕ್ಕೆ ಕೆಲಸಕ್ಕೆ ಹೋಗುತ್ತಿದ್ದ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News