2023-24 ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿ : ಈ ವರ್ಷ ಇಷ್ಟು ದಿನ ಶಾಲೆಗೆ ರಜೆ

school holiday list 2023-24 : 2022- 23 ನೇ  ಸಾಲಿನ ಪರೀಕ್ಷೆಗಳು ಈಗಾಗಲೇ ಮುಕ್ತಾಯವಾಗಿವೆ.  ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿದ್ದು, ಮೇ 28 ರವೆರೆಗೆ ವಿದ್ಯಾರ್ಥಿಗಳಿಗೆ ರಜೆ ಇರಲಿದೆ. 

Written by - Ranjitha R K | Last Updated : Apr 6, 2023, 10:39 AM IST
  • 2023-24 ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ
  • ಮೇ.29ರಿಂದ ಶಾಲೆಗಳು ಆರಂಭ
  • ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ
 2023-24 ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿ  : ಈ ವರ್ಷ ಇಷ್ಟು ದಿನ ಶಾಲೆಗೆ ರಜೆ  title=

ಬೆಂಗಳೂರು :  2023-24 ನೇ ಸಾಲಿನ ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟವಾಗಿದೆ. ಈ ವೇಳಾಪಟ್ಟಿಯ ಪ್ರಕಾರ ಮೇ.29ರಿಂದ ಶಾಲೆಗಳು ಆರಂಭವಾಗಲಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. 

ಬೇಸಿಗೆ ರಜೆಯ  ಶಾಲೆ ಆರಂಭ :
2022- 23 ನೇ  ಸಾಲಿನ ಪರೀಕ್ಷೆಗಳು ಈಗಾಗಲೇ ಮುಕ್ತಾಯವಾಗಿವೆ. ಮಕ್ಕಳಿಗೆ ಬೇಸಿಗೆ ರಜೆ ಆರಂಭವಾಗಿದ್ದು, ಮೇ 28 ರವೆರೆಗೆ ವಿದ್ಯಾರ್ಥಿಗಳಿಗೆ ರಜೆ ಇರಲಿದೆ.  ಮೇ.29ರಿಂದ  2023-24 ನೇ ಸಾಲಿನ
ಶೈಕ್ಷಣಿಕ ವರ್ಷ ಆರಂಭವಾಗಲಿದೆ. 

ಇದನ್ನೂ ಓದಿ : ಚಾಮರಾಜನಗರ: 70-80 ಫೈಲ್ ಪೆಂಡಿಂಗ್ ಇಟ್ಟು 2.5 ಲಕ್ಷ ಲಂಚಕ್ಕೆ ಬೇಡಿಕೆ- ಅಧಿಕಾರಿಗಳು ಲೋಕಾ ಬಲೆಗೆ!!

ಈ ಬಾರಿ ಶಾಲಾ ಕರ್ತವ್ಯ ದಿನಗಳು :
29-5-2023 ರಿಂದ ಅಕ್ಟೋಬರ್ 7 ರವರೆಗೆ ಮೊದಲನೇ ಅವಧಿ ಎಂದು ನಿಗದಿ ಮಾಡಲಾಗಿದೆ. ನನತರ ಎರಡನೇ ಅವಧಿ ಅಕ್ಟೋಬರ್ 25 ರಿಂದ ಆರಂಭವಾಗಲಿದ್ದು, ಏಪ್ರಿಲ್  10, 2024ರವರೇ ನಡೆಯಲಿದೆ.   

ದಸರಾ ರಜೆ :
ಈ ಬಾರಿ ಅಕ್ಟೋಬರ್ 8, 2023ರಿಂದ ಅಕ್ಟೋಬರ್ 24, 2023ರವರೆಗೆ ದಸರಾ ರಜೆ ಘೋಷಿಸಲಾಗಿದೆ. ಅಂದರೆ ವಿದ್ಯಾರ್ಥಿಗಳಿಗೆ 16 ದಿನಗಳವರೆಗೆ ದಸರಾ ರಜೆ ಇರಲಿದೆ.  

ಬೇಸಿಗೆ ರಜೆ ದಿನಾಂಕ :
ಏಪ್ರಿಲ್ 11, 2024 ರಿಂದ ಮೇ 28, 2024 ರವರೆಗೆ ಬೇಸಿಗೆ ರಜೆ ಇರಲಿದೆ. ಅಂದರೆ ಒಟ್ಟು 47 ದಿನ ಬೇಸಿಗೆ ರಜೆ ಇರಲಿದೆ. 

ಇದನ್ನೂ ಓದಿ : ಲಂಚ ಪ್ರಕರಣ: ಸಮಾಜ ಕಲ್ಯಾಣ ಇಲಾಖೆ ಎಸ್ಡಿಎ ಲೋಕಾಯುಕ್ತ ಬಲೆಗೆ

5,8 ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ : 
ಇನ್ನು  ಐದು ಮತ್ತು ಎಂಟನೇ ಪರೀಕ್ಷೆಯಲ್ಲಿ ಯಾವುದೇ ವಿದ್ಯಾ ರ್ಥಿಯನ್ನು ಫೇಲ್ ಮಾಡುವಂತಿಲ್ಲ ಎಂದು  ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.   40 ಅಂಕಗಳ ಲಿಖಿತ ಮೌಲ್ಯಂಕನವಿರುತ್ತದೆ. ಶಾಲಾ ಹಂತದಲ್ಲಿ 10 ಅಂಕಗಳನ್ನೂ ನೀಡಲಾಗುತ್ತದೆ. ಒಂದು ವೇಳೆ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಲ್ಲಿ 20 ಅಂಕಗಳಿಗೆ ಪರಿವರ್ತಿಸಿ ಗ್ರೇಡ್ ನೀಡಲಾಗುವುದು. 2024 ರ ಮಾರ್ಚ್ 27 ರಿಂದ ಏಪ್ರಿಲ್ 1ರವರೆಗೆ  5,8 ನೇ ತರಗತಿಯ ಮೌಲ್ಯಂಕನ ನಡೆಯಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News