ಮೈಸೂರು ವಿವಿ: ದಲಿತ ವಿದ್ಯಾರ್ಥಿ ಬಹಿಷ್ಕಾರ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಮೈಸೂರು ವಿವಿಯಲ್ಲಿನ ಲೋಪದೋಷಗಳನ್ನು ಎತ್ತಿಹಿಡಿದಿದ್ದಕ್ಕೆ ಮಹೇಶ ಸೋಸಲೆ ಎನ್ನುವ ಸಂಶೋಧನಾ ವಿದ್ಯಾರ್ಥಿಯನ್ನು ಕಪ್ಪುಪಟ್ಟಿಗೆ ಸೇರಿಸಿ ವಸತಿ ನಿಲಯವನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಡೆಸಿದ್ದಾರೆ. 

Last Updated : Oct 6, 2018, 05:46 PM IST

Trending Photos

ಮೈಸೂರು ವಿವಿ: ದಲಿತ ವಿದ್ಯಾರ್ಥಿ ಬಹಿಷ್ಕಾರ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ  title=
Photo:facebook

ಮೈಸೂರು: ಮೈಸೂರು ವಿವಿಯಲ್ಲಿನ ಲೋಪದೋಷಗಳನ್ನು ಎತ್ತಿಹಿಡಿದಿದ್ದಕ್ಕೆ ಮಹೇಶ ಸೋಸಲೆ ಎನ್ನುವ ಸಂಶೋಧನಾ ವಿದ್ಯಾರ್ಥಿಯನ್ನು ಕಪ್ಪುಪಟ್ಟಿಗೆ ಸೇರಿಸಿ ವಸತಿ ನಿಲಯವನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ನಡೆಸಿದ್ದಾರೆ. 

ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಹೇಳುವಂತೆ ಮೈಸೂರು ವಿವಿಯಲ್ಲಿನ ಅಕ್ರಮ ನೇಮಕಾತಿ ಮತ್ತು ಭ್ರಷ್ಟಾಚಾರವನ್ನು ಪ್ರಶ್ನಿಸಿದ ಕಾರಣಕ್ಕಾಗಿ ವಿವಿಯ ಕುಲಸಚಿವರು ಸಂಶೋಧನಾ ವಿದ್ಯಾರ್ಥಿಗೆ ಹಾಸ್ಟೆಲ್ ಸೌಲಭ್ಯವನ್ನು ನಿರಾಕರಿಸಿದ್ದಾರೆ ಮತ್ತು ವಿವಿಯ ಡೀನ್ ಅವರ ಆದೇಶದ ಮೇರೆಗೆ ಅವರ ಮೇಲೆ ಸೆಕ್ಷನ್ 353ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಎಂದು ಆರೋಪಿಸಿದ್ದಾರೆ.

ಇತ್ತ ಕಡೆ ವಿದ್ಯಾರ್ಥಿಯು ವಿವಿಯಲ್ಲಿ ಪಿಎಚ್ಡಿ  ಪ್ರವೇಶ ಪಡೆದಿದ್ದರು ಸಹಿತ ವಿದ್ಯಾರ್ಥಿಗೆ ಹಾಸ್ಟೆಲ್ ಸೌಲಭ್ಯವನ್ನು ನಿರಾಕರಿಸಿ ಕಪ್ಪುಪಟ್ಟಿಯಲ್ಲಿ ವಿದ್ಯಾರ್ಥಿಯನ್ನು ಸೇರಿಸಿರುವುದು ಈಗ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕೆರಳಿಸಿದೆ.

ಆದ್ದರಿಂದ ಈಗ ವಿದ್ಯಾರ್ಥಿಗಳು ಮಹೇಶ್ ಸೋಸಲೆ ಯವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಿರುವ ಕುಲಸಚಿವರ ಆದೇಶವನ್ನು ರದ್ದು ಪಡಿಸಬೇಕು. ಮತ್ತು ಅವರಿಗೆ ನ್ಯಾಯ ಒದಗಿಸಿ ಅವರ ಸಂಶೋಧನಾ ಶಿಕ್ಷಣ ಪೊರೈಸಲು ಅವಕಾಶ ನೀಡಬೇಕು ಮತ್ತು  ರಾಜ್ಯ ಸರ್ಕಾರವು ವಿವಿಯಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಅಕ್ರಮ ನೇಮಕಾತಿ ವಿಚಾರವಾಗಿ ತಕ್ಷಣ ಕ್ರಮ ತಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮೂಲಕ ಒತ್ತಾಯಿಸಿದ್ದಾರೆ.

Trending News