ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ದಾರಿಯಲ್ಲಿ ಹೋಗುವ ಜನರ ಮೇಲೆ ದಾಳಿ ನಡೆಸುತ್ತಿವೆ. ಬೀದಿ ನಾಯಿಗಳ ಕಾಟ ದಿನೇ ದಿನೇ ಹೆಚ್ಚಾಗಿದ್ದು, ಮನೆಯಿಂದ ಹೊರಬರಲು ಜನ ಭಯಪಡುವಂತಾಗಿದೆ.
ಒಂದೇ ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡಿದ್ದು, ನಿತ್ಯ ಸರಾಸರಿ 70ಕ್ಕೂ ಹೆಚ್ಚು ಮಂದಿ ಮೇಲೆ ಅಟ್ಟಹಾಸ ಮೆರೆಯಿತ್ತಿದೆ. 2020ರಿಂದ ಇಲ್ಲಿಯವರೆಗೆ 52 ಸಾವಿರಕ್ಕೂ ಹೆಚ್ಚು ಜನರಿಗೆ ಬೀದಿ ನಾಯಿ ಕಚ್ಚಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Zodiac Sign: ಮಾತಿನಿಂದಲೇ ಹುಡುಗಿಯರ ಹೃದಯ ಗೆಲ್ಲುತ್ತಾರೆ ಈ ರಾಶಿಯ ಹುಡುಗರು
ಇನ್ನು ಪಾಲಿಕೆ ಲೆಕ್ಕಾಚಾರದ ಪ್ರಕಾರ ನಗರದಲ್ಲಿ 3 ಲಕ್ಷ ಬೀದಿ ನಾಯಿಗಳಿವೆ. ಜನವರಿ ತಿಂಗಳಲ್ಲಿ 1677 ಜನಕ್ಕೆ ಬೀದಿ ನಾಯಿ ಕಚ್ಚಿದೆ. ಫೆಬ್ರವರಿಯಲ್ಲಿ 1135, ಮಾರ್ಚ್‌ನಲ್ಲಿ 1800, ಏಪ್ರಿಲ್ ತಿಂಗಳಿನಲ್ಲಿ 1677, ಮೇ ತಿಂಗಳಲ್ಲಿ 1841, ಜೂನ್‌ನಲ್ಲಿ 1140 ಮತ್ತು ಜುಲೈ ತಿಂಗಳಲ್ಲಿ ಅಂದರೆ ಇಲ್ಲಿವರೆಗೆ 483 ಜನರಿಗೆ ಬೀದಿ ನಾಯಿ ಕಚ್ಚಿದೆ.
ಬೀದಿನಾಯಿ ಕಡಿತದ ವಲಯವಾರು ವಿವರ
ವಲಯ | 2020 | 2021 | 2022 |
ಬೊಮ್ಮನಹಳ್ಳಿ | 309 | 182 | 51 |
ದಾಸರಹಳ್ಳಿ | 10 | 18 | 01 |
ಪೂರ್ವ | 9312 | 6006 | 3271 |
ಮಹದೇವಪುರ | 508 | 434 | 387 |
ಆರ್.ಆರ್ ನಗರ | 412 | 316 | 136 |
ದಕ್ಷಿಣ | 8519 | 6949 | 3441 |
ಪಶ್ಚಿಮ | 5710 | 2770 | 2240 |
ಯಲಹಂಕ | 240 | 650 | 390 |
ಇದನ್ನೂ ಓದಿ: ಪ್ರಮಾಣ ವಚನ ಸಮಾರಂಭದಲ್ಲಿ ಹೀಗಿರುತ್ತೆ ನೂತನ ರಾಷ್ಟ್ರಪತಿ ಲುಕ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.