Lingayat leader of BJP : ಬಿಜೆಪಿಯ ಪ್ರಬಲ ಲಿಂಗಾಯತ ನಾಯಕ ಸೋಮಣ್ಣ ಸ್ವಪಕ್ಷೀಯರ ವಿರುದ್ಧವೇ ಮೊದಲ ಬಾರಿಗೆ ಅಪಸ್ವರ ಹೊರಡಿಸಿದ್ದಾರೆ.. ವಿಧಾನಸಭಾ ಚುನಾವಣೆಯ ಸೋಲಿಗೆ ತಮ್ಮವರೇ ಕಾರಣ ಎಂಬ ಸತ್ಯವನ್ನ ಹೊರಹಾಕಿದ್ದಾರೆ.. ದೊಡ್ಡವರ ಮಾತುನಂಬಿಯೇ ನಾನುಕೆಟ್ಟೆ,ಈಗಲೇ ಅಲ್ಸರ್ ಆಗಿದೆ ಅಂತ ಪರೋಕ್ಷ ಅಸಮಾಧಾನ ಹೊರಹಾಕಿದ್ದಾರೆ..
ನಮ್ಮವರೇ ನಮಗೆ ತೊಂದ್ರೆ ಕೊಡ್ತಿದ್ದಾರೆ ಅದಕ್ಕೆ ನಾನೇ ಉದಾಹರಣೆ ಅಂತ ನೋವುತೋಡಿಕೊಂಡಿದ್ದಾರೆ.. ಯಾಕಂದ್ರೆ ಗೋವಿಂದರಾಜನಗರ ಕ್ಷೇತ್ರದಲ್ಲೇ ಸೋಮಣ್ಣ ಸೇಫ್ ಆಗಿದ್ರು.. ಆದ್ರೆ ಅವರನ್ನ ಚಾಮರಾಜನಗರ ಹಾಗೂ ವರುಣಾದಿಂದ ಕಣಕ್ಕಿಳಿಸಿದ್ದೇ ಅವರ ಸೋಲಿಗೆ ಕಾರಣ ಅನ್ನೋದು ಸತ್ಯ.. ಅದನ್ನೇ ಸೋಮಣ್ಣ ಇಂದು ಹೊರಹಾಕಿದ್ದಾರಷ್ಟೇ...
ಇನ್ನು ಎರಡು ಕ್ಷೇತ್ರಗಳಸೋಲಿನ ಗುಂಗಿನಿಂದ ಸೋಮಣ್ಣ ಹೊರಬಂದಂತೆ ಕಾಣ್ತಿಲ್ಲ.. ಸೋಲಿನ ನೋವು ಒಳಗಿದ್ರೂ ಬಹಿರಂಗವಾಗಿ ಪಕ್ಷದ ವಿರುದ್ಧ ಮಾತನಾಡುವ ಧೈರ್ಯ ಮಾಡಿರ್ಲಿಲ್ಲ.. ಆದ್ರೆ ಸೋಲಿನ ನೋವು ಅವರ ಎದೆಯೊಳಗಿದ್ದ ನೋವನ್ನ ಇಂದು ಹೊರಹಾಕುವಂತೆ ಮಾಡಿದೆ..
ಇದನ್ನೂ ಓದಿ-ಸಿಎಂ, ಡಿಸಿಎಂ ಕಿತ್ತಾಟದಲ್ಲಿ ಕಾಂಗ್ರೆಸ್ ಶಾಸಕರು ಅನಾಥರಾಗಿದ್ದಾರೆ: ಬಿಜೆಪಿ ಟೀಕೆ
ಇದರ ಹಿಂದೆ ಬೇರೆ ಲೆಕ್ಕಾಚಾರವೂ ಇದೆ ಅನ್ನೋ ಮಾತಿದೆ..ಸೋಮಣ್ಣ ಈಗಾಗ್ಲೇ ಕಾಂಗ್ರೆಸ್ ನಾಯಕರ ಮನೆ ಬಾಗಿಲು ಬಡಿದಿದ್ದಾರೆ ಎನ್ನಲಾಗ್ತಿದೆ.. ಪರಮೇಶ್ವರ್,ಡಿಕೆಶಿ ಜೊತೆ ಮಾತುಕತೆಯನ್ನೂ ಮುಗಿಸಿದ್ದಾರೆ.. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸ್ತಾರೆ ಎಂಬ ಮಾತುಗಳಿವೆ.. ಹೀಗಾಗಿಯೇ ಈಗಿನಿಂದಲೇ ತಯಾರಿಯನ್ನೂ ನಡೆಸಿದ್ದಾರೆ.. ತಮ್ಮ ಪುತ್ರನ ರಾಜಕೀಯ ಕೆರಿಯರ್ ಗಾಗಿ ಅವರು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ತಾರೆಂಬ ಮಾತು ಹೊರಬಿದ್ದಿದೆ..
ಒಟ್ನಲ್ಲಿ ಮಾಜಿ ಸಚಿವ ಸೋಮಣ್ಣ ಇದೇ ಮೊದಲ ಬಾರಿಗೆ ಸೋಲಿನ ಬಗ್ಗೆ ಧ್ವನಿಎತ್ತಿದ್ದಾರೆ.. ತಮ್ಮ ಸೋಲಿಗೆ ಸ್ವಪಕ್ಷೀಯ ನಾಯಕರು ಕಾರಣ ಅಂತ ಹೇಳಿದ್ದಾರೆ.. ಆದ್ರೆ ಯಾವ ನಾಯಕರುಅನ್ನೋದನ್ನ ಮಾತ್ರ ಹೇಳಿಲ್ಲ.. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಲಿದ್ದಾರೆಂಬ ಮಾತುಗಳಿವೆ.. ಈಗಾಗಲೇ ಕಾಂಗ್ರೆಸ್ ಟಿಕೆಟ್ ಬಗ್ಗೆ ಡಿಕೆಶಿ,ಪರಮೇಶ್ವರ್ ಜೊತೆ ಮಾತುಕತೆ ನಡೆಸಿದ್ದಾರೆಂಬ ಮಾತುಗಳಿವೆ..
ಇದನ್ನೂ ಓದಿ-ಬಿಜೆಪಿ ʼಪೇ ಸಿಎಂ ಅಭಿಯಾನʼ ಕಾಂಗ್ರೆಸ್ ಕಾಪಿ, ಇದನ್ನು ಜನ ನಂಬಲ್ಲ : ಶೆಟ್ಟರ್ ವ್ಯಂಗ್ಯ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.