ಶಿವಮೊಗ್ಗ ಪೊಲೀಸ್ ಠಾಣೆಯ ಫೋಟೊಕಾಪಿ ಯಂತ್ರದೊಳಗೆ ಹಾವು ಪತ್ತೆ!

ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಫೋಟೊಕಾಪಿ ಯಂತ್ರದೊಳಗೆ ಹಾವು ಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ. 

Last Updated : Sep 14, 2019, 04:20 PM IST
ಶಿವಮೊಗ್ಗ ಪೊಲೀಸ್ ಠಾಣೆಯ ಫೋಟೊಕಾಪಿ ಯಂತ್ರದೊಳಗೆ ಹಾವು ಪತ್ತೆ! title=

ಶಿವಮೊಗ್ಗ: ಇಲ್ಲಿನ ಜಯನಗರ ಪೊಲೀಸ್ ಠಾಣೆಯಲ್ಲಿ ಫೋಟೊಕಾಪಿ ಯಂತ್ರದೊಳಗೆ ಹಾವು ಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ. 

ಠಾಣೆಯ ಫೋಟೋಕಾಪಿ ಯಂತ್ರದೊಳಗೆ ಕಬ್ಬಿಣದ ವಸ್ತುವಿಗೆ ಸುತ್ತಿಕೊಂಡಿದ್ದ ಹಾವನ್ನು ಕಂಡ ಠಾಣೆ ಸಿಬ್ಬಂದಿ ಹೌಹಾರಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಬಳಿಕ ಅದನ್ನು ರಕ್ಷಿಸಿ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಎರಡು ದಿನಗಳ ಹಿಂದಷ್ಟೇ, ಮಹಿಳೆಯೊಬ್ಬರು ಪೋನಿನಲ್ಲಿ ಮಾತನಾಡುತ್ತಾ ಜೋಡಿ ಹಾವಿನ ಮೇಲೆ ಕುಳಿತ ಪರಿಣಾಮ ಹಾವುಗಳು ಕಚ್ಚಿ, ಅದರಿಂದ ಸಾವನ್ನಪ್ಪಿದ ಘಟನೆಯೊಂದು ಗೋರಖ್‌ಪುರದ ಗ್ರಾಮವೊಂದರಲ್ಲಿ ನಡೆದಿತ್ತು. 

ಮನೆಯೊಳಗೆ ಪ್ರವೇಶಿಸಿದ್ದ ಜೋಡಿ ಹಾವು ಹಾಸಿಗೆಯ ಮೇಲೆ ಆಡುತ್ತಿದ್ದು, ಅದರ ಮೇಲೆ ಬೆಡ್ ಶೀಟ್ ಇತ್ತು ಎನ್ನಲಾಗಿದೆ. ಆದರೆ, ಫೋನಿನಲ್ಲಿ ಮಾತನಾಡಿಕೊಂಡು ಬಂದ ಮಹಿಳೆ ಹಾವನ್ನು ಗಮನಿಸದೆ ಹಾವುಗಳ ಮೇಲೆ ಕುಳಿತ ಕೂಡಲೇ ಹಾವುಗಳು ಆಕೆಯನ್ನು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಆಕೆ ಸಾವನ್ನಪ್ಪಿದ್ದಳು.

Trending News