ರೈತರಿಗೆ 2 ಲಕ್ಷ ರೂ.ವರೆಗೆ ಸಿಗಲಿದೆ ಮೇಲಾಧಾರ ರಹಿತ ಸಾಲ; ಈ ʼಸಾಲʼಕ್ಕೆ ಯಾವುದೇ ಜಾಮೀನು ಬೇಕಿಲ್ಲ!!

RBI Provides 2 Lakh Loan To Farmers: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮುಂದಿನ ವರ್ಷ ಜನವರಿ 1ರಿಂದ ರೈತರಿಗೆ 2 ಲಕ್ಷ ರೂ.ವರೆಗೆ ಮೇಲಾಧಾರ ರಹಿತ ಸಾಲ ನೀಡುವ ನಿರ್ಧಾರವನ್ನು ಜಾರಿಗೆ ತರಲು ನಿರ್ಧರಿಸಿದೆ. 

Written by - Puttaraj K Alur | Last Updated : Dec 17, 2024, 09:38 PM IST
  • ದೇಶದ ರೈತರಿಗೆ 2 ಲಕ್ಷ ರೂ.ವರೆಗೆ ಮೇಲಾಧಾರ ರಹಿತ ಸಾಲ ನೀಡಲು ನಿರ್ಧಾರ
  • ಮುಂದಿನ ವರ್ಷದ ಜನವರಿ 1ರಿಂದ ಜಾರಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನ
  • ಈ ನಿಟ್ಟಿನಲ್ಲಿ ದೇಶದಾದ್ಯಂತ ಬ್ಯಾಂಕ್‌ಗಳಿಗೆ ಈಗಾಗಲೇ RBI ಮಾರ್ಗಸೂಚಿಗಳನ್ನು ನೀಡಿದೆ
ರೈತರಿಗೆ 2 ಲಕ್ಷ ರೂ.ವರೆಗೆ ಸಿಗಲಿದೆ ಮೇಲಾಧಾರ ರಹಿತ ಸಾಲ; ಈ ʼಸಾಲʼಕ್ಕೆ ಯಾವುದೇ ಜಾಮೀನು ಬೇಕಿಲ್ಲ!! title=
ರೈತರಿಗೆ ಸಾಲ ಸೌಲಭ್ಯ

RBI Provides 2 Lakh Loan To Farmers: ದೇಶದ ರೈತರಿಗೆ 2 ಲಕ್ಷ ರೂ.ವರೆಗೆ ಮೇಲಾಧಾರ ರಹಿತ ಸಾಲವನ್ನು ನೀಡುವ ನಿರ್ಧಾರವನ್ನು ಮುಂದಿನ ವರ್ಷದ ಜನವರಿ 1ರಿಂದ ಜಾರಿಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಧರಿಸಿದೆ. 

ಇದನ್ನೂ ಓದಿ: ಒಂದೇ ಒಂದು ರೂಪಾಯಿ ಬಂಡವಾಳ ಹಾಕೋದು ಬೇಡ... ಈ ಬ್ಯುಸಿನೆಸ್‌ ಶುರು ಮಾಡಿದ್ರೆ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗ್ಯಾರಂಟಿ! ಯಾರು ಬೇಕಾದ್ರೂ ಪ್ರಾರಂಭಿಸಬಹುದು

ಈ ನಿಟ್ಟಿನಲ್ಲಿ ದೇಶದಾದ್ಯಂತ ಬ್ಯಾಂಕ್‌ಗಳಿಗೆ ಈಗಾಗಲೇ RBI ಮಾರ್ಗಸೂಚಿಗಳನ್ನು ನೀಡಿದೆ. ಹೊಸ ಸಾಲದ ನಿಯಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ಸಲಹೆ ಕೂಡ ನೀಡಲಾಗಿದೆ. ಹೂಡಿಕೆ ವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಾಲ ಸೌಲಭ್ಯ ಹೆಚ್ಚಿಸಲು ಕೃಷಿ ಇಲಾಖೆಯು ಈ ನಿರ್ಧಾರವನ್ನು ಕೈಗೊಂಡಿದೆ. 

ಇದನ್ನೂ ಓದಿ: Multibagger stocks: ಒಂದೇ ವಾರದಲ್ಲಿ 37% ಲಾಭ ನೀಡಿದ 8 ಷೇರುಗಳು; ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು!!

ದೇಶದಲ್ಲಿ ಶೇ.86ರಷ್ಟು ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು, ಸಾಲದ ಮಿತಿಯನ್ನು ಹೆಚ್ಚಿಸಿದರೆ ಅವರಿಗೆ ಅನುಕೂಲವಾಗಲಿದೆ ಎಂದು ಕೃಷಿ ಇಲಾಖೆ ಹೇಳಿದೆ. 2 ಲಕ್ಷ ರೂ.ವರೆಗೆ ಮೇಲಾಧಾರ ರಹಿತ ಸಾಲ ಸಿಗುವುದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಅನುಕೂಲವಾಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News