ಸಿದ್ದರಾಮಯ್ಯನವರೇ ಕೆಲವು ದಿನಗಳ ಮಟ್ಟಿಗೆ ನಿಮ್ಮ ಕಲೆಕ್ಷನ್ ವ್ಯವಹಾರ ನಿಲ್ಲಿಸಿ: ಬಿಜೆಪಿ ಟೀಕೆ

BJP Vs Congress: ಮುಂಗಾರು ವಿಳಂಬವಾಗುತ್ತಿದೆ ಎಂಬ ಸೂಚನೆ ಸಿಕ್ಕಿದಾಗ ಕಾಂಗ್ರೆಸ್ ಸರ್ಕಾರ ಲೋಲುಪತೆಯಲ್ಲಿ ಮಲಗಿತ್ತು. ಮಳೆ ಕೊರತೆ ಉಂಟಾಗಿ ಬರದ ಸೂಚನೆ ಸಿಕ್ಕಾಗಲೂ #ATMSarkaraಕ್ಕೆ ಇದ್ದಿದ್ದು ಕಲೆಕ್ಷನ್‌ ಒಂದೇ ಚಿಂತೆ ಎಂದು ಬಿಜೆಪಿ ಆರೋಪಿಸಿದೆ

Written by - Puttaraj K Alur | Last Updated : Jul 17, 2023, 04:18 PM IST
  • ಮುಂಗಾರು ವಿಳಂಬವಾಗುತ್ತಿದೆ ಎಂಬ ಸೂಚನೆ ಸಿಕ್ಕಿದಾಗ ಕಾಂಗ್ರೆಸ್ ಸರ್ಕಾರ ಲೋಲುಪತೆಯಲ್ಲಿ ಮಲಗಿತ್ತು
  • ಮಳೆ ಕೊರತೆ ಉಂಟಾಗಿ ಬರದ ಸೂಚನೆ ಸಿಕ್ಕಾಗಲೂ #ATMSarkaraಕ್ಕೆ ಇದ್ದಿದ್ದು ಕಲೆಕ್ಷನ್‌ ಒಂದೇ ಚಿಂತೆ
  • ಸಿದ್ದರಾಮಯ್ಯನವರೇ ಕೆಲ ದಿನಗಳ ಮಟ್ಟಿಗೆ ನಿಮ್ಮ ಕಲೆಕ್ಷನ್‌ ವ್ಯವಹಾರ ನಿಲ್ಲಿಸಿ, ಜನರ ಕಷ್ಟಗಳಿಗೆ ಸ್ಪಂದಿಸಿ
ಸಿದ್ದರಾಮಯ್ಯನವರೇ ಕೆಲವು ದಿನಗಳ ಮಟ್ಟಿಗೆ ನಿಮ್ಮ ಕಲೆಕ್ಷನ್ ವ್ಯವಹಾರ ನಿಲ್ಲಿಸಿ: ಬಿಜೆಪಿ ಟೀಕೆ title=
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ!

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಕಲೆಕ್ಷನ್‌ ವ್ಯವಹಾರಗಳನ್ನು ಕೆಲವು ದಿನಗಳ ಮಟ್ಟಿಗಾದರೂ ನಿಲ್ಲಿಸಿ, ಜನರ ಕಷ್ಟಗಳಿಗೆ ಸ್ಪಂದಿಸುವತ್ತ ಗಮನ ಹರಿಸಿ ಎಂದು ಬಿಜೆಪಿ ಟೀಕಿಸಿದೆ. ರಾಜ್ಯದ ಜನರ ವಿವಿಧ ಸಮಸ್ಯೆಗಳನ್ನು ಮುಂದಿಟ್ಟು ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ.

ಮುಂಗಾರು ವಿಳಂಬವಾಗುತ್ತಿದೆ ಎಂಬ ಸೂಚನೆ ಸಿಕ್ಕಿದಾಗ ಕಾಂಗ್ರೆಸ್ ಸರ್ಕಾರ ಲೋಲುಪತೆಯಲ್ಲಿ ಮಲಗಿತ್ತು. ಮಳೆ ಕೊರತೆ ಉಂಟಾಗಿ ಬರದ ಸೂಚನೆ ಸಿಕ್ಕಾಗಲೂ #ATMSarkaraಕ್ಕೆ ಇದ್ದಿದ್ದು ಕಲೆಕ್ಷನ್‌ ಒಂದೇ ಚಿಂತೆ. ಈಗ 100 ತಾಲೂಕುಗಳಿಗೆ ಕುಡಿಯುವ ನೀರೂ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳ ಪಾಲಿಗೆ ಶುದ್ಧತೆಯ ಭಾಗ್ಯವೇ ಇಲ್ಲ’ವೆಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಟೊಮ್ಯಾಟೋ ಬೆಲೆ ಏರಿಕೆ: ಲಕ್ಷ ಲಕ್ಷ ಲೆಕ್ಕದಲ್ಲಿ ಹಣ ಸಂಪಾದನೆ

‘ತುಷ್ಟೀಕರಣ Vs ಸಂತುಷ್ಟೀಕರಣ. ಕಾಂಗ್ರೆಸ್ ನಿರಂತರವಾಗಿ ಕಾಶ್ಮೀರದಲ್ಲಿ ಒಡೆದು ಆಳುವ ನೀತಿಯನ್ನು ತನ್ನದಾಗಿಸಿಕೊಂಡಿತ್ತು. ಪ್ರಧಾನಿ ಮೋದಿ ಸರ್ಕಾರ 370ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ಕಾಶ್ಮೀರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗುವಂತೆ ಮಾಡಿದೆ. ಕಾಂಗ್ರೆಸ್ ಒಂದು ಸಮುದಾಯದ ಒಲೈಕೆ ಮಾಡುವ ಮೂಲಕ ತುಷ್ಟೀಕರಣ ಮಾಡುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ.

‘10 ಕೆಜಿ ಅಕ್ಕಿ ಗ್ಯಾರಂಟಿ ಎಂಬ ತ್ರಿಕಾಲ ಸುಳ್ಳು ಹೇಳುತ್ತಾ ಬಂದ  ಕಾಂಗ್ರೆಸ್ ಈಗ ಯೋಜನೆ ಜಾರಿಗೆ ಕುಂಟು ನೆಪ ಹುಡುಕಿ ಬಡ ಜನರಿಗೆ ಅನ್ಯಾಯ ಮಾಡುತ್ತಿದೆ. ಅಕ್ಕಿ ಬದಲು 170 ರೂ. ಕೊಡುವುದಾಗಿ ಹೇಳಿದ #ATMSarkara ಈಗ ಅದನ್ನೂ ಸಾಧ್ಯವಾದಷ್ಟೂ ಮಂದಿಗೆ ಕೊಡದಿರಲು ವಿವಿಧ ಸೂತ್ರಗಳನ್ನು ಹೆಣೆಯುತ್ತಿದೆ. ಇದರ ಪರಿಣಾಮವಾಗಿ 23 ಲಕ್ಷ ಜನರಿಗೆ ಯೋಜನೆ ಗಗನಕುಸುಮವಾಗಿದೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: "ದೇಶದ ಹಿತಾಸಕ್ತಿ ಕಾಯಲು ವಿರೋಧ ಪಕ್ಷಗಳು ಒಂದುಗೂಡುತ್ತಿರುವುದು ಉತ್ತಮ ಆರಂಭ"

ಬದಲಾಗುತ್ತಿರುವ ‘ಗ್ಯಾರಂಟಿ’ ವರಸೆ!

‘ಚುನಾವಣೆಗೂ ಮುನ್ನ "10 ಕೆಜಿ ಅಕ್ಕಿ ನೀಡುತ್ತೇವೆ" ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯನವರ ಸರ್ಕಾರದ ಬದಲಾಗುತ್ತಿರುವ ವರಸೆಗಳು. 1) 10 ಕೆಜಿ ಅಕ್ಕಿ ನಮ್ಮ ಸರ್ಕಾರವೇ ನೀಡಲಿದೆ 2)ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಗೆ, ನಮ್ಮ 5 ಕೆಜಿ ಅಕ್ಕಿ ಸೇರಿಸಿ ಒಟ್ಟು 10 ಕೆಜಿ ಅಕ್ಕಿ ನೀಡುತ್ತೇವೆ. 3) 10 ಕೆಜಿ ಅಕ್ಕಿ ಬದಲು, ಪಡಿತರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 170 ರೂ. ಜಮಾ ಮಾಡುತ್ತೇವೆ. 4) ಬ್ಯಾಂಕ್ ಖಾತೆ ಇರುವ ಫಲಾನುಭವಿಗಳಿಗೆ ಮಾತ್ರ 170 ರೂ. ಜಮಾ ಮಾಡುತ್ತೇವೆ. 5) ಬ್ಯಾಂಕ್ ಖಾತೆ ಇಲ್ಲದ ಪಡಿತರ ಫಲಾನುಭವಿಗಳಿಗೆ ಹಣ ಹಾಕುವುದರ ಬಗ್ಗೆ ಇನ್ನೂ ಚಿಂತಿಸಿಲ್ಲ’ ಎಂದು ಬಿಜೆಪಿ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News