ಜ.1ರಿಂದ ಶಾಲೆ ಪುನರಾರಂಭ, ಆದರೆ ಕಂಡೀಷನ್ ಅಪ್ಲೇ!

ತಾಂತ್ರಿಕ ಸಲಹಾ ಸಮಿತಿಯು ಜನವರಿ 1ರಿಂದ 10 (SSLC) ಮತ್ತು 12ನೇ (II PUC) ತರಗತಿಗಳನ್ನು ಆರಂಭಿಸುವುದರ ಜೊತೆಗೆ ಇದರ ಅನುಭವವನ್ನು ಆಧರಿಸಿ ಜನವರಿ 15ರಿಂದ 11ನೇ ತರಗತಿ (I PUC) ಯನ್ನೂ ಆರಂಭಿಸಬಹುದೆಂದು ಹೇಳಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯು ಮಾರ್ಗಸೂಚಿ ಪ್ರಕಟಿಸಿದೆ.

Written by - Yashaswini V | Last Updated : Dec 24, 2020, 08:24 AM IST
  • ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಕೊವಿಡ್ ಪರೀಕ್ಷೆ ಮಾಡಿಸುವುದು ಕಡ್ಡಾಯ
  • ವಸತಿ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಕೊವಿಡ್ ವರದಿ ಸಲ್ಲಿಸಬೇಕು
  • ಶಾಲೆಗೆ ಬಾರದ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಮುಂದುವರಿಸಬೇಕು
ಜ.1ರಿಂದ ಶಾಲೆ ಪುನರಾರಂಭ, ಆದರೆ ಕಂಡೀಷನ್ ಅಪ್ಲೇ! title=
Schools Reopen- Education department guidelines

ಬೆಂಗಳೂರು: ಕಡೆಗೂ ರಾಜ್ಯ ಸರ್ಕಾರ ಶಾಲೆಗಳನ್ನು ತೆರೆಯಲು ಒಪ್ಪಿಗೆ ಸೂಚಿಸಿದ್ದು 2021ರ ಜನವರಿ 1ರಿಂದ ಶಾಲೆಗಳು ಆರಂಭವಾಗುತ್ತಿವೆ. ಈಗ ಶಿಕ್ಷಣ ಇಲಾಖೆ ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ (Education department guidelines) ಬಿಡುಗಡೆ ಮಾಡಿದೆ.

COVID-19 ವೈರಸ್ ಹರಡುವಿಕೆ ತಡೆಗಾಗಿ ರಾಜ್ಯ ಸರ್ಕಾರ ರಚಿಸಿರುವ ತಾಂತ್ರಿಕ ಸಲಹಾ ಸಮಿತಿಯು ಜನವರಿ1ರಿಂದ 10 (SSLC) ಮತ್ತು 12ನೇ (II PUC) ತರಗತಿಗಳನ್ನು ಪ್ರಾರಂಭ ಮಾಡಬಹುದೆಂದು ಶಿಫಾರಸು ಮಾಡಿದೆ. ತಾಂತ್ರಿಕ ಸಲಹಾ ಸಮಿತಿಯ ಶಿಫಾರಸು ಆಧರಿಸಿ ರಾಜ್ಯ ಸರ್ಕಾರ ಶಾಲೆಗಳ ಆರಂಭಕ್ಕೆ ಅನುಮತಿ ನೀಡಿದೆ. ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ಶಿಕ್ಷಣ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ತಾಂತ್ರಿಕ ಸಲಹಾ ಸಮಿತಿಯು ಜನವರಿ 1ರಿಂದ 10 (SSLC) ಮತ್ತು 12ನೇ (II PUC) ತರಗತಿಗಳನ್ನು ಆರಂಭಿಸುವುದರ ಜೊತೆಗೆಇದರ ಅನುಭವವನ್ನು ಆಧರಿಸಿ ಜನವರಿ 15ರಿಂದ 11ನೇ ತರಗತಿ (I PUC) ಯನ್ನೂ ಆರಂಭಿಸಬಹುದೆಂದು ಹೇಳಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆಯು ಮಾರ್ಗಸೂಚಿ ಪ್ರಕಟಿಸಿದೆ. ಅದರ ವಿವರಗಳು ಈ ಕೆಳಕಂಡಂತಿವೆ.

ಇದನ್ನೂ ಓದಿ: ದುಬಾರಿ ಶುಲ್ಕ ಪಾವತಿ ಬಗ್ಗೆ ಫೇಸ್‌ಬುಕ್‌ನಲ್ಲಿ ಅಳಲು ತೋಡಿಕೊಂಡ ಶಿಕ್ಷಣ ಸಚಿವ ಸುರೇಶ್ ಕುಮಾರ್

* ಶಾಲೆಗಳಲ್ಲಿ ಅಗತ್ಯ ಭೌತಿಕ ಸೌಲಭ್ಯವನ್ನು ಖಚಿತಪಡಿಸಿಕೊಳ್ಳಬೇಕು.

* ಎಲ್ಲಾ ರೀತಿಯ ಕೋವಿಡ್ 19 (Covid 19) ಮುನ್ನಚ್ಚರಿಕೆ ಕ್ರಮ ವಹಿಸಬೇಕು

* ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ಕೊವಿಡ್ ಪರೀಕ್ಷೆ ಮಾಡಿಸುವುದು ಕಡ್ಡಾಯ

* ವಸತಿ ಶಾಲೆಯ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಕೊವಿಡ್ ವರದಿ ಸಲ್ಲಿಸಬೇಕು

* ಶಾಲೆಗೆ ಬಾರದ ವಿದ್ಯಾರ್ಥಿಗಳಿಗೆ ಆನ್ ಲೈನ್ ಕ್ಲಾಸ್ ಮುಂದುವರಿಸಬೇಕು

ಇದನ್ನೂ ಓದಿ: 'ಮಾರ್ಚ್-2021ರಲ್ಲಿ SSLC-PUC ಪರೀಕ್ಷೆಗಳು ನಡೆಯುವುದಿಲ್ಲ'

* ಶಾಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಕಡ್ಡಾಯ

* ಶಾಲೆಗಳಲ್ಲಿ (Schools) ಥರ್ಮಲ್‌ ಸ್ಕ್ಯಾನಿಂಗ್ ವ್ಯವಸ್ಥೆ ಮಾಡುವುದು ಕಡ್ಡಾಯ

* ಶಾಲೆಗಳಲ್ಲಿ ಕೈ ತೊಳೆಯಲು ಸೋಪು ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು

* 50 ಮೇಲ್ಪಟ್ಟವರು ಫೇಸ್ ಶೀಲ್ಡ್ ಧರಿಸುವುದು ಕಡ್ಡಾಯ

* ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ಊಟ ಮಾಡುವಂತಿಲ್ಲ

ಇದನ್ನೂ ಓದಿ: Schools Reopen: 'ಜನವರಿ 1ರಿಂದಲೇ ರಾಜ್ಯದಲ್ಲಿ ಶಾಲೆಗಳ ಆರಂಭ ಖಚಿತ'

* ವಿದ್ಯಾರ್ಥಿಗಳಿಗೆ ನೆಗಡಿ, ಜ್ವರ, ಶೀತ ಕಂಡುಬಂದರೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು

* ಶಾಲೆ ಆರಂಭಕ್ಕೂ ಮುನ್ನವೇ ಕೊವಿಡ್ ಟೆಸ್ಟ್ ಮಾಡಿಸುವುದು ಕಡ್ಡಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News