School Fees ಕಡಿತಕ್ಕೆ ಖಾಸಗೀ ಶಾಲೆಗಳ ತಕರಾರು.! ಸಭೆಯಲ್ಲಿ ನಡೆದಿದ್ದೇನು..?

ಶುಲ್ಕ ಕಡಿತ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಖಾಸಗೀ ಶಾಲೆಗಳ ಒಕ್ಕೂಟದ  ನಡುವೆ ಸಂಘರ್ಷ ಏರ್ಪಟ್ಟಿದೆ.  

Written by - Ranjitha R K | Last Updated : Feb 10, 2021, 12:18 PM IST
  • ಶುಲ್ಕ ಕಡಿತ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಖಾಸಗೀ ಶಾಲೆಗಳ ಒಕ್ಕೂಟದ ನಡುವೆ ಸಂಘರ್ಷ ಏರ್ಪಟ್ಟಿದೆ.
  • ಸರ್ಕಾರದ ನಿರ್ಧಾರದ ವಿರುದ್ಧ ಫೆ. 23 ರಂದು ಖಾಸಗೀ ಶಾಲೆಗಳ ಒಕ್ಕೂಟ ಪ್ರತಿಭಟನೆ ನಡೆಸಲಿದೆ
  • ಖಾಸಗೀ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನಿರ್ಧಾರವನ್ನು ರುಪ್ಸಾ ವಿರೋಧಿಸಿದೆ.
School Fees ಕಡಿತಕ್ಕೆ ಖಾಸಗೀ ಶಾಲೆಗಳ ತಕರಾರು.! ಸಭೆಯಲ್ಲಿ ನಡೆದಿದ್ದೇನು..? title=
ಫೆ. 23 ರಂದು ಖಾಸಗೀ ಶಾಲೆಗಳ ಒಕ್ಕೂಟ ಪ್ರತಿಭಟನೆ (file photo)

ಬೆಂಗಳೂರು : ಶುಲ್ಕ ಕಡಿತ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಖಾಸಗೀ ಶಾಲೆಗಳ ಒಕ್ಕೂಟದ (Private School Association) ನಡುವೆ ಸಂಘರ್ಷ ಏರ್ಪಟ್ಟಿದೆ. ಶೇ. 30ರಷ್ಟು ಶುಲ್ಕ ಕಡಿತ (School Fee Cut) ವಿಚಾರದಲ್ಲಿ, ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿರುವ ಖಾಸಗೀ ಶಾಲೆಗಳ ಒಕ್ಕೂಟ ಫೆ. 23 ರಂದು ಬೃಹತ್ ಪ್ರತಿಭಟನೆ (Massive Protest) ನಡೆಸಲು ನಿರ್ಧರಿಸಿದೆ. 

ಸಭೆಯಲ್ಲಾದ ನಿರ್ಧಾರಗಳೇನು..?
ರಾಜ್ಯ ಸರ್ಕಾರ ಶೇ. 30 ರಷ್ಟು ಸ್ಕೂಲ್ ಫೀಸ್ (School fees) ಕಡಿತ ಮಾಡಬೇಕು ಎಂದು ಹೇಳಿದೆ. ಆದರೆ ಆದೇಶದ ಪ್ರಕಾರ ನಡೆದುಕೊಂಡರೆ, ಶೇ. 65 ರಷ್ಟು ಶುಲ್ಕ ಕಡಿತ ಮಾಡಬೇಕಾಗುತ್ತದೆ ಎಂದು ಖಾಸಗೀ ಶಾಲೆಗಳ ಒಕ್ಕೂಟ (Private School Association)ಆಕ್ಷೇಪ ವ್ಯಕ್ತಪಡಿಸಿವೆ.  1 ರಿಂದ 5 ನೇ ತರಗತಿಗಳನ್ನು ಆರಂಭಿಸಬೇಕು ಎಂದು ಅದು ಒತ್ತಾಯಿಸಿದೆ. ಶಿಕ್ಷಣಾಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಹಿಂದಿನ ಶಾಲೆಗಳ ಕಟ್ಟಡ ಸುರಕ್ಷೆ ಪ್ರಮಾಣ ಪತ್ರವನ್ನು ಕೈಬಿಡಬೇಕು. ಈ ಎಲ್ಲಾ ಬೇಡಿಕೆಗಳ್ನು ಫೆ. 23ರ ಒಳಗೆ ಈಡೇರಿಸಬೇಕು. ಇಲ್ಲವಾದರೆ ಫೆ.23ರಂದು ಬೃಹತ್ ಪ್ರತಿಭಟನೆ (Protest) ನಡೆಸಲಾಗುವುದು ಎಂದು ಖಾಸಗೀ ಶಿಕ್ಷಣ ಸಂಸ್ಥೆಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. 

ಇದನ್ನೂ ಓದಿ : School: ಶಾಲಾ ಮಕ್ಕಳ ಬೇಸಿಗೆ ರಜೆ ಕುರಿತು ಮಹತ್ವದ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್

ಒಕ್ಕೂಟದ ನಿರ್ಧಾರಕ್ಕೆ `ರುಪ್ಸಾ' ವಿರೋಧ :
ಖಾಸಗೀ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನಿರ್ಧಾರವನ್ನು `ರುಪ್ಸಾ(RUPSA – Recognized Unaided Private Schools Association)'  ವಿರೋಧಿಸಿದೆ. ಜೊತೆಗೆ ಶುಲ್ಕ ಕಡಿತ ಮಾಡಬೇಕೆಂಬ ಸರ್ಕಾರದ (Karnataka Government) ನಿರ್ಧಾರವನ್ನು ಅದು ಸ್ವಾಗತಿಸಿದೆ. ಈ ಬಗ್ಗೆ ಮಾತಾಡಿರುವ ರುಪ್ಸಾ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಶೇ. 30 ರಷ್ಟು ಶುಲ್ಕ ಕಡಿತಕ್ಕೆ ನಮ್ಮ ತಕರಾರು ಏನೂ ಇಲ್ಲ. ನಮ್ಮ ಒಕ್ಕೂಟದಡಿಯಲ್ಲಿ 13 ಸಾವಿರಕ್ಕೂ ಹೆಚ್ಚು ಶಾಲೆಗಳಿವೆ. ಫೆ.23ರ  ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. 

ಸುರೇಶ್ ಕುಮಾರ್ ಕಚೇರಿಗೆ ಬೀಗಮುದ್ರೆ ಹಾಕುವ ಎಚ್ಚರಿಕೆ : 
ಫೆ. 23ರ ಖಾಸಗೀ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಾಗಿ ಎಂಎಲ್ಸಿ ಪುಟ್ಟಣ್ಣ (MLC Puttanna) ಹೇಳಿದ್ದಾರೆ. ``ಸರ್ಕಾರ ಪೋಷಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ.  ಫೆ.23 ರ ಪ್ರತಿಭಟನೆಗೆ ನಾನೂ ಬರುತ್ತೇನೆ.  ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಶಿಕ್ಷಣ ಸಚಿವ ಸುರೇಶ್ ಕುಮಾರ್ (Suresh Kumar) ಕಚೇರಿಗೆ ಬೀಗಮುದ್ರೆ ಹಾಕಿ ಹೋರಾಟ ಮಾಡಲಾಗುವುದು'' ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : Scholarship Application: ಹಿಂದುಳಿದ ವರ್ಗದ 'ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ' ನೀಡಿದ ರಾಜ್ಯ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News