School-College Open: ಇಂದಿನಿಂದ ಶಾಲಾ-ಕಾಲೇಜುಗಳು ಆರಂಭ

ಕಳೆದ ವಾರವೇ ಜನವರಿ 1ರಿಂದ ಶಾಲಾ-ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಿತ್ತು. ಆದರೆ ಈ ನಡುವೆ ಮ್ಯೂಟಂಟ್ ಕೊರೋನಾ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಮತ್ತೆ ಶಾಲಾ-ಕಾಲೇಜುಗಳ ಆರಂಭದ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕಾಯಿತು.

Written by - Yashaswini V | Last Updated : Jan 1, 2021, 07:25 AM IST
  • ಪೋಷಕರು ಮತ್ತು ವಿದ್ಯಾರ್ಥಿಗಳಿಂದ ವ್ಯಾಪಕವಾದ ವಿರೋಧ ನಡುವೆಯೂ ಆರಂಭ
  • ಇಂದಿನಿಂದ SSLC ಹಾಗೂ ದ್ವಿತೀಯ PUC ತರಗತಿಗಳು ಮಾತ್ರ ಆರಂಭ
  • 6, 7, 8 ಮತ್ತು 9ನೇ ತರಗತಿಗಳಿಗೆ 'ವಿದ್ಯಾಗಮ'ದ ಮೂಲಕವೇ ಪಾಠ
School-College Open: ಇಂದಿನಿಂದ ಶಾಲಾ-ಕಾಲೇಜುಗಳು ಆರಂಭ title=
: Schools colleges will be open from today

ಬೆಂಗಳೂರು: COVID-19 ಕಾರಣಕ್ಕೆ ಕಳೆದ 7 ತಿಂಗಳಿನಿಂದ ಮುಚ್ಚಿದ್ದ ಶಾಲಾ-ಕಾಲೇಜುಗಳು ಇಂದಿನಿಂದ ಆರಂಭವಾಗುತ್ತಿವೆ. ಕೊರೋನಾ ಸಂಪೂರ್ಣವಾಗಿ ಮಾಯವಾಗಿಲ್ಲದಿದ್ದರೂ, ಪೋಷಕರು ಮತ್ತು ವಿದ್ಯಾರ್ಥಿಗಳಿಂದ ವ್ಯಾಪಕವಾದ ವಿರೋಧ ವ್ಯಕ್ತವಾಗುತ್ತಿದ್ದರೂ ರಾಜ್ಯ ಸರ್ಕಾರ ಶಾಲೆಯನ್ನು ಆರಂಭಿಸಿದೆ.

COVID-19 ನಿಯಂತ್ರಣಕ್ಕೆಂದು ರಚಿಸಲಾಗಿರುವ ತಾಂತ್ರಿಕ ಸಮಿತಿ (Technical Committee) ನೀಡಿದ ಶಿಫಾರಸಿನ ಮೇರೆಗೆ ಕಳೆದ ವಾರವೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದ ಸಭೆ ರಾಜ್ಯದಲ್ಲಿ ಜನವರಿ 1ರಿಂದ ಶಾಲಾ-ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಿತ್ತು. ಆದರೆ ಈ ನಡುವೆ ಮ್ಯೂಟಂಟ್ ಕೊರೋನಾ ವೈರಸ್ (Mutant COVID Virus) ಪತ್ತೆಯಾದ ಹಿನ್ನಲೆಯಲ್ಲಿ ಮತ್ತೆ ಶಾಲಾ-ಕಾಲೇಜುಗಳ ಆರಂಭದ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕಾಯಿತು.

ಗುರುವಾರ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ (S Suresh Kumar) ಮಾಹಿತಿ ನೀಡಿದ್ದು, 2021ರ ಜನವರಿ 1 ಒಂದು ಹೊಸ ವರ್ಷ ಪ್ರಾರಂಭ ಆಗುತ್ತಿದೆ. ಅಂದೇ ಶಾಲಾ-ಕಾಲೇಜುಗಳೂ ಆರಂಭವಾಗಲಿವೆ. 7 ತಿಂಗಳಿಂದ ನಮ್ಮ ರಾಜ್ಯದಲ್ಲಿ ಶಾಲೆಗಳು (Schools) ತೆರೆದಿರಲಿಲ್ಲ. ಇದರಿಂದ ಗ್ರಾಮೀಣಾ ಭಾಗದ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ. ಅನಿವಾರ್ಯವಾಗಿ ಚಂದನ ವಾಹಿನಿ ಮೂಲಕ ಪಾಠ ಕಲಿಸುವ ಪ್ರಯತ್ನ ನಡೆಸಬೇಕಾಯಿತು. ಇದೀಗ ರಾಜ್ಯದ ಆರೋಗ್ಯ ಇಲಾಖೆ ಹಾಗೂ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸಿನ ಮೇರೆಗೆ SSLC ಹಾಗೂ ದ್ವಿತೀಯ PUC ತರಗತಿಗಳನ್ನು ಆರಂಭಿಸುತ್ತಿದ್ದೇವೆ. 6, 7, 8 ಮತ್ತು 9ನೇ ತರಗತಿಗಳಿಗೆ 'ವಿದ್ಯಾಗಮ'ದ ಮೂಲಕವೇ ಪಾಠ ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: New Coronavirus Strain: ರಾಜ್ಯದ ಜನತೆಗೆ 'ಖಡಕ್ ಎಚ್ಚರಿಕೆ' ನೀಡಿದ ಸಿಎಂ ಬಿಎಸ್ ವೈ..!

ಮೊದಲ ಹಂತದಲ್ಲಿ SSLC ಹಾಗೂ ದ್ವಿತೀಯ PUC ತರಗತಿಗಳನ್ನು ಆರಂಭಿಸಲು ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಾಗಿದೆ. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಮಾಡುತ್ತೇವೆ. ಈ ತರಗತಿಗಳು ಯಶಸ್ವಿಯಾಗಬೇಕು ಎಂದರೆ ಪೋಷಕರು ಸಹಕಾರ ಮಾಡಬೇಕು. ಆತಂಕ ಇಲ್ಲದೇ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ. ನಿಮ್ಮ ಮಕ್ಕಳನ್ನು ಮನೆಯಲ್ಲಿ ಹೇಗೆ ನೋಡಿಕೊಳ್ಳುತ್ತೀರೋ ನಮ್ಮ ಶಿಕ್ಷಕರು ಹಾಗೆ ನೋಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ ಎಂದು ತಿಳಿಸಿದ್ದಾರೆ.

ಆತಂಕಕಾರಿಯಾದ ನಡೆ :
ಒಂದೆಡೆ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳ ಆರಂಭಕ್ಕೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ ಎಂದು ಹೇಳುತ್ತಿದೆ. ಆದರೆ ಸರ್ಕಾರಿ, ಖಾಸಗಿ, ಅನುದಾನಿತ ಹಾಗೂ ಅನುದಾನಿತರಹಿತ ಶಾಲಾ ಕಾಲೇಜು ಶಿಕ್ಷಕರಿಗೆ ಕೋವಿಡ್ 19 (Covid 19) RTPCR ಟೆಸ್ಟ್ ಮಾಡಿಸುವುದು ಕಡ್ಡಾಯವಲ್ಲ ಎಂದು ತೀರ್ಮಾನ ಮಾಡಿದೆ. ರಾಜ್ಯ ಸರ್ಕಾರದ ಈ ನಡೆ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Schools Reopening in 2021: ಹೊಸ ವರ್ಷದಲ್ಲಿ ಶಾಲಾ-ಕಾಲೇಜು ತೆರೆಯಲು ಸಜ್ಜಾಗಿರುವ ರಾಜ್ಯಗಳಿವು

ಖಾಸಗಿ ಶಾಲೆಗಳ ಒಕ್ಕೂಟ ಸ್ವಾಗತ :
ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳನ್ನು ಪುನರಾರಂಭಿಸುತ್ತಿರುವ ಕ್ರಮವನ್ನು ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟವು ಸ್ಚಾಗತಿಸಿದೆ. ಈಗಾಗಲೇ‌ ರುಪ್ಸಾ ಅಡಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳು ಶಾಲೆ ತೆರೆಯಲು ಸಿದ್ಧತೆ ಮಾಡಿಕೊಂಡಿವೆ. 

ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯದಂತೆ ಶಾಲಾ-ಕಾಲೇಜುಗಳ ಆರಂಭವಾಗುತ್ತಿದ್ದು ರಾಜ್ಯಾದ್ಯಂತ ಸುಮಾರು ‌12,800 ಖಾಸಗಿ ಶಾಲೆಗಳು ಕೂಡ ಪುನರಾರಂಭವಾಗುತ್ತಿವೆ ಎಂದು ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ತಿಳಿಸಿದ್ದಾರೆ.

ಇದನ್ನೂ ಓದಿ: New Year ಸಂಭ್ರಮಾಚರಣೆಗೆ ಕರೋನಾ ಗ್ರಹಣ, ಹಲವೆಡೆ ಸೆಕ್ಷನ್ 144 ಜಾರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News