ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರ್ತಾರೆ ಅಂತ ಅವರ ಲೆಕ್ಕಾಚಾರ ಇದೆ ಆದರೆ 2024 ಕ್ಕೆ ಭಾರತದಲ್ಲಿ ಮೋದಿ ಸರ್ಕಾರ ಇರಲ್ಲ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರ್ತಾರೆ ಅಂತ ಅವರು ಲೆಕ್ಕಾಚಾರ ಇಟ್ಟುಕೊಂಡಿದ್ದಾರೆ. ಆದರೆ, ನಮ್ಮ ಲೆಕ್ಕಾಚಾರದ ಪ್ರಕಾರ 2024 ಕ್ಕೆ ಮೋದಿ ಸರ್ಕಾರ ದೇಶದಲ್ಲಿ ಇರಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಅವರ ಲೆಕ್ಕಾಚಾರ ಉಲ್ಟಾ ಆಗೋ ಸಾಧ್ಯತೆಗಳಿವೆ. ನೋಡೋಣ ಯಾರ ಲೆಕ್ಕಾಚಾರ ನಿಜ ಆಗತ್ತೆ ಭವಿಷ್ಯ ನುಡಿದರು.
ಇದನ್ನೂ ಓದಿ: ಸದಸ್ಯನಿಂದ ಗ್ರಾಪಂ ಕಚೇರಿಗೆ ಬೀಗ..! ಪಂಚಾಯಿತಿ ಆಡಳಿತದ ಅವ್ಯವಹಾರ ಖಂಡಿಸಿ ಆಕ್ರೋಶ
ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಕೆಲವರು ಬರ್ತೀದಾರೆ, ನಮಗೇನೂ ಭಯ ಇಲ್ಲ. ಬಿಜೆಪಿ ಬಿಟ್ಟು ಯಾಕೆ ಬರ್ತೀದಾರೆ ಅಂತ ಅವರನ್ನೆ ಕೇಳಿ, ಲೋಕಸಭೆ ಚುನಾವಣೆಗೆ ಸಿದ್ದತೆ ನಡೆದಿದಿದ್ದು ಭಾರತೀಯ ಜನತಾ ಪಕ್ಷದಕರ್ಮಕಾಂಡ ಜನರಿಗೆ ಮುಟ್ಟಿಸುತ್ತೇವೆ ಎಂದರು
ಹೈಕಮಾಂಡ್ ಲೋಕಸಭೆ ಚುನಾವಣೆಗಾಗಿ ಸರ್ವೆ ಮಾಡ್ತೀದಾರೆ, ಕಾಂಗ್ರೆಸ್ ಪಕ್ಷದ ಹಣ 700 ಕೋಟಿ ಇದೆ ಆದ್ರೆ ಬಿಜೆಪಿ ಸರ್ಕಾರದ ಹಣ 8500 ಸಾವಿರ ಕೋಟಿ ದಾಟಿದೆ. ಇದರಲ್ಲೇ ಗೊತ್ತಾಗುತ್ತದೆ ಯಾರದ್ದು ಸಾಹುಕಾರರ ಪಕ್ಷ ಅನ್ನೋದು. ನಾನು IT ರಿಪೋರ್ಟ್ ಓದಿದೀನಿ ಎಲ್ಲೂ ಕಾಂಗ್ರೆಸ್ ನಾಯಕರು ಅಂತಾ ಉಲ್ಲೇಖ ಇಲ್ಲ, ಇಷ್ಟು ವರ್ಷದಿಂದ ಅವರೇ ತನಿಖೆಯನ್ನು ಜೇಬಲ್ಲಿ ಇಟ್ಕೊಂಡು ಓಡಾಡತೀದಾರೆ ಇಷ್ಟು ವರ್ಷದಲ್ಲಿ ಯಾರಿಗಾದರೂ ಸಜಾ ಆಗಿದೆಯಾ ಎಂದು ಸಚಿವ ಲಾಡ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ:ರಾಜ್ಯದ ರಸ್ತೆ ಸಾರಿಗೆ ನಿಗಮಗಳಿಗೆ 5600 ಬಸ್ ಖರೀದಿ : ಸಿಎಂ ಸೂಚನೆ
ನಮ್ಮ ಪಕ್ಷದಲ್ಲಿ ಯಾವದೂ ಅಸಮಾಧಾನ ಇಲ್ಲ, ಬಣಗಳು ಇಲ್ಲ ಎಂದ ಲಾಡ್ ಜಾರಕಿಹೊಳಿ, ಡಿಕೆಶಿವಕುಮಾರ್ ಭಿನ್ನಮತ ವಿಚಾರ ಆ ತರಹ ನನಗೇನೂ ಅನಸ್ತಾ ಇಲ್ಲ ಯಾವುದೇ ಅನುದಾನದೂ ಕೊರತೆಯೂ ಇಲ್ಲ ಹಿಂದಿ ಮಾತಾಡೋ ಪ್ರದೇಶದಲ್ಲಿ ನಮ್ಮ ಮೈತ್ರಿ ಹೆಚ್ಚು ಸ್ಥಾನ ಗಳಿಸಲಿದೆ ಎಂದರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.