ನವದೆಹಲಿ: ಪರಿಸರ ಸಂರಕ್ಷಣೆಗಾಗಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ರಾಷ್ಟ್ರಪತಿ ರಾಮ್ ನಾಥ್ ಕೊವಿಂದ್ ಅವರು ಶನಿವಾರದಂದು ಸಾಲು ಮರದ ತಿಮ್ಮಕ್ಕನಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ.ಪ್ರಶಸ್ತಿ ಪ್ರಧಾನ ಮಾಡಿದ ನಂತರ ಸ್ವತಃ ರಾಷ್ಟ್ರಪತಿ ಸಾಲುಮರದ ತಿಮ್ಮಕನವರ ಬಗ್ಗೆ ಟ್ವೀಟ್ ಮೂಲಕ ಬರೆದುಕೊಂಡಿದ್ದಾರೆ.
ಸಮಾಜ ಸೇವೆ ಮಾಡಿದಂತಹ ಶ್ರೀಮತಿ ಸಾಲುಮರದ ತಿಮ್ಮಕ್ಕರವರಿಗೆ ರಾಷ್ಟ್ರಪತಿ ಪದ್ಮಶ್ರೀ ಪುರಸ್ಕಾರವನ್ನು ಪ್ರದಾನ ಮಾಡಿದ್ದಾರೆ. 107 ನೇ ವಯಸ್ಸಿನ ಕರ್ನಾಟಕದ ಶ್ರೀಮತಿ ತಿಮ್ಮಕ್ಕರವರು ಒಬ್ಬ ಪರಿಸರವಾದಿ ಹಾಗೂ ತನ್ನ ಹಳ್ಳಿಯಾದ ಹುಲಿಕಲ್ನಿಂದ ಕುದೂರುವರೆಗಿನ 4 ಕಿ.ಮೀ ಹೆದ್ದಾರಿಯ ಉದ್ದಗಲಕ್ಕೂ ಆಲದ ಮರಗಳನ್ನು ನೆಟ್ಟು ಹೆಸರುವಾಸಿಯಾಗಿದ್ದಾರೆ. pic.twitter.com/42FeKskJpQ
— President of India (@rashtrapatibhvn) March 16, 2019
ಸಾಲುಮರದ ತಿಮ್ಮಕ್ಕ ಮೂಲಕ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು. ಮಕ್ಕಳು ಇಲ್ಲವೆನ್ನುವ ಕಾರಣಕ್ಕೆ ರಸ್ತೆ ಬದಿಯ ಆಲದ ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಬೆಳೆಸಿದರು.ಇದೇ ಕಾರಣಕ್ಕೆ ಅವರು ಸಾಲುಮರದ ತಿಮ್ಮಕ್ಕ ಎಂದು ಖ್ಯಾತಿ ಪಡೆದರು.
President Kovind presents Padma Shri to Smt Saalumarada Thimmakka for Social Work. Aged 107, Smt Thimmakka is an environmentalist from Karnataka and is known for planting banyan trees along a 4 km stretch of highway from her village Hulikal to Kudur pic.twitter.com/90szHsDxWP
— President of India (@rashtrapatibhvn) March 16, 2019
ಈ ಮರಗಳೆಲ್ಲವೂ ಇಂದು ಕುದೂರಿನಿಂದ ಹುಲಿಕಲ್ ನ ರಾಜ್ಯ ಹೆದ್ದಾರಿಯಲ್ಲಿ ಇವೆ,ಈಗ ಇವುಗಳನ್ನು ಬೆಳೆಸುವ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ವಹಿಸಿಕೊಂಡಿದೆ.ಇಂತಹ ಪರಿಸರ ರಕ್ಷಣೆ ಕಾರ್ಯಕ್ಕಾಗಿ ಅವರಿಗೆ ಹಲವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.
ಬಿಬಿಸಿ 2016 ರಲ್ಲಿ ಇವರನ್ನು ಜಗತ್ತಿನ ಅತಿ ಪ್ರಭಾವಿ ಮಹಿಳೆಯರು ಎನ್ನುವ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ ಕೂಡ ಸ್ಥಾನ ಪಡೆದಿದ್ದಾರೆ.