Russia Ukraine war : ರಾಜ್ಯದ 281 ವಿದ್ಯಾರ್ಥಿಗಳ ರಕ್ಷಣೆಗೆ ಸರ್ಕಾರದ ಪ್ಲಾನ್ ಏನು?

ಎಷ್ಟು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಇದ್ದಾರೆ ಎಂಬ ಸ್ಪಷ್ಟ ಮಾಹಿತಿ ಸರ್ಕಾರಕ್ಕೆ ಲಭ್ಯವಿಲ್ಲ. ಆದರೆ, ಈವರೆಗೆ 281 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳಲು ಹೋಗಿದ್ದಾರೆ ಎನ್ನಲಾಗಿದೆ.

Written by - Prashobh Devanahalli | Last Updated : Feb 25, 2022, 02:01 PM IST
  • ಉಕ್ರೇನ್ ವಿರುದ್ಧ ರಷ್ಯಾ ಬಿಕ್ಕಟ್ಟು
  • ಉಕ್ರೇನ್ ನಲ್ಲಿ ಸಿಲುಕಿ ಹಾಕಿಕೊಂಡಿರುವ ಕರ್ನಾಟಕದ 281 ವಿದ್ಯಾರ್ಥಿಗಳು
  • ವಿದ್ಯಾರ್ಥಿಗಳ ರಕ್ಷಣೆಗೆ ನಾಲ್ಕು ಹಂತದ ಯೋಜನೆ
Russia Ukraine war : ರಾಜ್ಯದ 281 ವಿದ್ಯಾರ್ಥಿಗಳ ರಕ್ಷಣೆಗೆ ಸರ್ಕಾರದ ಪ್ಲಾನ್ ಏನು? title=
ಉಕ್ರೇನ್ ವಿರುದ್ಧ ರಷ್ಯಾ ಬಿಕ್ಕಟ್ಟು (file photo)

ಬೆಂಗಳೂರು:  ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ (Russia Ukraine war) ಆರಂಭಿಸಿದ್ದು, ಬಿಕ್ಕಟ್ಟು ಏರ್ಪಟ್ಟಿದೆ. ಇದೀಗ ದೇಶದ ಹಲವಾರು ಮಂದಿ  ಉಕ್ರೇನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಈವರೆಗೆ ಕರ್ನಾಟಕ 281 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ (Karnataka Students in Ukraine). ಅವರನ್ನ ರಕ್ಷಣೆ ಮಾಡಲು ಸರ್ಕಾರ ನಾಲ್ಕು ಹಂತದ ಯೋಜನೆಗಳನ್ನ ಹಾಕಿಕೊಂಡಿದೆ.

ಎಷ್ಟು ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ (Ukraine) ಇದ್ದಾರೆ ಎಂಬ ಸ್ಪಷ್ಟ ಮಾಹಿತಿ ಸರ್ಕಾರಕ್ಕೆ ಲಭ್ಯವಿಲ್ಲ. ಆದರೆ, ಈವರೆಗೆ 281 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳಲು ಹೋಗಿದ್ದಾರೆ ಎನ್ನಲಾಗಿದೆ. ೨೭ ಜಿಲ್ಲೆಗಳ ವಿದ್ಯಾರ್ಥಿಗಳು ಅಲ್ಲಿದ್ದಾರೆ ಎಂಬ ಮಾಹಿತಿ ಇದೆ. ಈ ಪೈಕಿ ಹೆಚ್ಚಿನವರು 19, 20, 21 ವರ್ಷದವರಾಗಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ : ಸಕ್ಕರೆನಾಡಲ್ಲಿ ವಿಚಿತ್ರ ಕಳ್ಳತನ ಪ್ರಕರಣ: ಕಳ್ಳತನಕ್ಕೆ ಬಂದು ಅಡುಗೆ ಮಾಡಿ ತಿಂದ ಆಸಾಮಿ

ಈ ನಡುವೆ ಅಲ್ಲಿ ಸಿಲುಕಿ ಹಾಕಿಕೊಂಡಿರುವವರು, ನಮ್ಮ ಜೊತೆ  ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು  ಉಕ್ರೇನ್ ಯುದ್ಧ ಸಹಾಯವಾಣಿ ನೋಡಲ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದ್ದಾರೆ (Ukraine war helpline). ಈವರೆಗೂ ಯಾವುದೇ ಸಾವು ಸೋವು ಸಂಭವಿಸಿರುವ ಬಗ್ಗೆ ವರದಿ ಅಗಿಲ್ಲ. ವಿದ್ಯಾರ್ಥಿಗಳ ಮಾಹಿತಿ ಉಕ್ರೇನ್ ರಾಯಭಾರಿ ಕಚೇರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ (central government) ಕೊಡೋದು ನಮ್ಮ ಮೊದಲ ಆದ್ಯತೆ ಎಂದು ಅವರು ತಿಳಿಸಿದ್ದಾರೆ. 

ನಾಲ್ಕು ಹಂತದಲ್ಲಿ ಕಾರ್ಯಾಚರಣೆ :

ಮೊದಲಿಗೆ ರಕ್ಷಣೆ
ಎರಡನೇ ಹಂತದಲ್ಲಿ ಸುರಕ್ಷತೆ
ಮೂರನೇ ಹಂತದಲ್ಲಿ ಊಟ, ವಸತಿ ವ್ಯವಸ್ಥೆ
ಕೊನೆಯದಾಗಿ evacuation.

ಇದನ್ನೂ ಓದಿ : Karnataka Politics: ದೆಹಲಿಗೆ ರಾಜ್ಯ ಕಾಂಗ್ರೆಸ್ ನಾಯಕರ ದಂಡು; ಬಣ ರಾಜಕೀಯ ಶಮನಕ್ಕೆ ಹೈಕಮಾಂಡ್ ಸರ್ಕಸ್

ನೋಡಲ್ ಅಧಿಕಾರಿ ಮನೋಜ್ ರಾಜನ್ ಹೇಳುವ ಪ್ರಕಾರ, Embassy ಯಿಂದ ಪ್ರತಿ ಹಂತದ ಮಾಹಿತಿ ಪಡೆಯಲಾಗಿದೆ. ಇದಕ್ಕಾಗಿ ಮೊಬೈಲ್ ಆಪ್ ಅಭಿವೃದ್ಧಿ ಪಡಿಸಲಾಗಿದೆ.  24 ಗಂಟೆಯಲ್ಲಿ ಆಪ್ ಅಭಿವೃದ್ಧಿ ಮಾಡಲಾಗಿದೆ. "Ukraine.Karnataka. tech" ಮೂಲಕ ವಿದ್ಯಾರ್ಥಿಗಳ ಮಾಹಿತಿ ಪಡೆಯಬಹುದಾಗಿದೆ ಎಂದಿದ್ದಾರೆ. ಉಕ್ರೇನ್ ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳು 19 ರಿಂದ  ರಿಂದ 23 ವಯಸ್ಸಿನ ವಿದ್ಯಾರ್ಥಿಗಳಾಗಿದ್ದು, ಪೋಷಕರು ಆತಂಕದಲ್ಲಿದ್ದಾರೆ ಎಂದು,  ನೋಡಲ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News