ಹೌದಪ್ಪಾ... ನನಗೆ ಬಾಡಿಕೆ ಕಟ್ಟಲು ಯೋಗ್ಯತೆಯಿಲ್ಲ; ಕೊಪ್ಪಳಕ್ಕೆ ಹೋಗಿ ಕೇಳಿ! ಯಶ್ ತಿರುಗೇಟು

ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಚುನಾವಣಾ ಪ್ರಚಾರ ನಡೆಸುತ್ತಿರುವ ಯಶ್ ಮನೆ ಬಾಡಿಗೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿಗೆ ರಾಕಿಂಗ್ ಸ್ಟಾರ್ ತಿರುಗೇಟು.  

Last Updated : Apr 9, 2019, 12:59 PM IST
ಹೌದಪ್ಪಾ... ನನಗೆ ಬಾಡಿಕೆ ಕಟ್ಟಲು ಯೋಗ್ಯತೆಯಿಲ್ಲ; ಕೊಪ್ಪಳಕ್ಕೆ ಹೋಗಿ ಕೇಳಿ! ಯಶ್ ತಿರುಗೇಟು title=
File Image

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಚುನಾವಣಾ ಪ್ರಚಾರದ ವೇಳೆ ಉಭಯ ನಾಯಕರ ಏಟು-ತಿರುಗೇಟು ಜೋರಾಗಿಯೇ ಇದೆ.

ನಾಗಮಂಗಲದ ಬೆಳ್ಳೂರಿನಲ್ಲಿ ನಿನ್ನೆ ಚುನಾವಣಾ ಪ್ರಚಾರದ ವೇಳೆ ಯಶ್ ಮನೆ ಬಾಡಿಗೆ ವಿಚಾರ ಪ್ರಸ್ತಾಪಿಸಿದ್ದ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಮಗನೋ ಕಿರಿ ಮಗನೋ ಗೊತ್ತಿಲ್ಲ. ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡದೇ ಇದ್ದವರು ಇಂದು ನನ್ನ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ಧಾಳಿ ನಡೆಸಿದ್ದರು.

ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಉಮ್ಮಡಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸುವ ಸಂದರ್ಭದಲ್ಲಿ ನಿಖಿಲ್ ಹೇಳಿಕೆಗೆ ತಿರುಗೇಟು ನೀಡಿರುವ ರಾಕಿಂಗ್ ಸ್ಟಾರ್ ಯಶ್, 'ಹೌದಪ್ಪಾ... ನನಗೆ ಬಾಡಿಕೆ ಕಟ್ಟುವ ಯೋಗ್ಯತೆಯಲ್ಲಾ ಅಂತಾನೆ ಅನ್ಕೋಳಿ... ಆದರೆ ರಾಜ್ಯದಲ್ಲಿ ಸಾಕಷ್ಟು ರೈತರಿದ್ದಾರೆ. ಇಲ್ಲಿ ಮಾತ್ರವಲ್ಲ ಉತ್ತರ ಕರ್ನಾಟಕದಲ್ಲೂ ಬಹಳಷ್ಟು ರೈತರಿದ್ದಾರೆ. ನಾನು ಏನು ಮಾಡಿದ್ದೇನೆ ಎಂಬುದನ್ನು ಕೊಪ್ಪಳ ಅಂತಾ ಒಂದು ಊರಿದೆಯಲ್ಲ ಅಲ್ಲಿ ಹೋಗಿ ಕೇಳಿ ಎಂದಿದ್ದಾರೆ.
 

Trending News