ತನಿಖಾಧಿಕಾರಿಗಳ ಮುಂದೆ ಹಾಜರಾಗದೇ ಹೋದರೆ ರೇವಣ್ಣ ಬಂಧನ : ಪರಮೇಶ್ವರ್

Parameshwar On Prajwal Revanna Case : ರೇವಣ್ಣ ಇವತ್ತು ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಒಂದು ವೇಳೆ ರೇವಣ್ಣ ತನಿಖಾಧಿಕಾರಿಗಳ ಮುಂದೆ ಹಾಜರಾಗದೇ ಹೋದಲ್ಲಿ ಅವರನ್ನು ಬಂಧಿಸಬೇಕಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.   

Written by - Ranjitha R K | Last Updated : May 2, 2024, 02:03 PM IST
  • ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟೀಸ್
  • ಗಮನಕ್ಕೆ ಬಂದ ತಕ್ಷಣ ದೂರು
  • ಯಾರನ್ನೂ ರಕ್ಷಣೆ ಮಾಡುವುದಿಲ್ಲ
ತನಿಖಾಧಿಕಾರಿಗಳ ಮುಂದೆ ಹಾಜರಾಗದೇ ಹೋದರೆ ರೇವಣ್ಣ ಬಂಧನ  : ಪರಮೇಶ್ವರ್ title=

ಕಲ್ಬುರ್ಗಿ : Prajwal Revanna Case latest update : ಪ್ರಜ್ವಲ್ ರೇವಣ್ಣ ವಿರುದ್ದದ ಲೈಂಗಿಕ ಕಿರುಕುಳ ಪ್ರಕರಣ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವುದರಿಂದ ಅವರಿಗೆ ಲುಕ್ ಔಟ್ ನೋಟೀಸ್ ನೀಡಲಾಗಿದೆ.ಈ ನಡುವೆ ರೇವಣ್ಣ ಅವರಿಗೆ ತನಿಖೆ ಹಾಜರಾಗುವಂತೆ ಸೂಚಿಸಲಾಗಿದೆ.ರೇವಣ್ಣ ಇವತ್ತು ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಒಂದು ವೇಳೆ ರೇವಣ್ಣ ತನಿಖಾಧಿಕಾರಿಗಳ ಮುಂದೆ ಹಾಜರಾಗದೇ ಹೋದಲ್ಲಿ ಅವರನ್ನು ಬಂಧಿಸಬೇಕಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. 

ಗಮನಕ್ಕೆ ಬಂದ ತಕ್ಷಣ ದೂರು : 
ಪ್ರಜ್ವಲ್ ರೇವಣ್ಣನ ಕೇಸ್ ರಾಷ್ಟ್ರ ಮಟ್ಟದಲ್ಕಿ ಚರ್ಚೆ ಆಗುತ್ತಿದೆ. ಇತರ ರಾಷ್ಟ್ರಗಳಿಗೂ ಈ ವಿಷಯ ತಲುಪಿದೆ.ನೂರಾರು ಜನ ಮಹಿಳೆಯರಿಗೆ ಅನ್ಯಾಯ ಆಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.ಈ ಹಿಂದೆ ನಮ್ಮ ಗಮನಕ್ಕೆ ಈ ವಿಚಾರ ಬಂದಿರಲಿಲ್ಲವೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.ಆದರೆ ಈವರೆಗೆ ಯಾರು ಕೂಡಾ ದೂರು ನೀಡಿರಲಿಲ್ಲ. ಮಹಿಳಾ ಆಯೋಗದ ಗಮನಕ್ಕೆ ಬಂದ ತಕ್ಷಣ ದೂರು ನೀಡಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ. 

ಇದನ್ನೂ ಓದಿ : ಹೆಚ್ಚುತ್ತಿದೆ ಸೂರ್ಯ ಪ್ರಕೋಪ, ಬೀಸುತ್ತಿದೆ ಉಷ್ಣ ಅಲೆ :ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಪ್ರಜ್ವಲ್ ಗೆ ಲುಕ್ ಔಟ್ ನೋಟಿಸ್ : 
ದೂರು ನೀಡಿದ ತಕ್ಷಣ ಎಸ್ ಐ ಟಿ ರಚನೆ ಮಾಡಿ ತನಿಖೆ ಮಾಡಲಾಗುತ್ತಿದೆ.ಆದ್ರೆ ದೂರು ದಾಖಲಾಗುತ್ತಿದ್ದ ಹಾಗೆ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ. ಹೊರ ದೇಶಕ್ಕೆ ಹೋಗುವಾಗ ಅವರಿಗೆ ಡಿಪ್ಲೋಮೇಟಿಕ್ ಪಾಸ್ ಪೋರ್ಟ್ ಅನ್ನು ಕೇಂದ್ರ ಸರ್ಕಾರ ಕೊಟ್ಟಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.41(a) ಸೆಕ್ಷನ್ ಅಡಿಯಲ್ಲಿ ರೇವಣ್ಣಗೆ ನೋಟಿಸ್ ಜಾರಿ ಮಾಡಲಾಗಿದೆ. 41(a) ಯಲ್ಲಿ 24 ಗಂಟೆಯ ಒಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ರೇವಣ್ಣ ಇವತ್ತು ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಒಂದು ವೇಳೆ ಹಾಜರಾಗದೆ‌ ಹೋದರೆ ರೇವಣ್ಣ ಅವರನ್ನ ಬಂಧಿಸಬೇಕಾಗುತ್ತೆ ಎಂದು ಪರಮೇಶ್ವರ್ ಹೇಳಿದ್ದಾರೆ. ಇನ್ನು ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೇರಳಿದ ಹಿನ್ನಲೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಪ್ರಜ್ವಲ್ ಪರ ವಕೀಲರು ಸಮಯ ಕೇಳಿದ್ದಾರೆ
ಆದರೆ ಈ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಸಮಯ ಕೊಡುವುದಕ್ಕೆ ಸಾಧ್ಯ ಇಲ್ಲ. ಹಾಗಾಗಿ ಅರೆಸ್ಟ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲು ಎಸ್ ಐ ಟಿ ಮುಂದಾಗುತ್ತದೆ ಎಂದು ಹೇಳಿದ್ದಾರೆ.

ಯಾರನ್ನೂ ರಕ್ಷಣೆ ಮಾಡುವುದಿಲ್ಲ : 
ಈ ಪ್ರಕರಣವನ್ನು ಸರ್ಕಾರ ಬಹಳ ಗಂಭಿರವಾಗಿ ತೆಗೆದುಕೊಂಡಿದ್ದು, ಯಾರನ್ನೂ  ರಕ್ಷಣೆ ಮಾಡೋದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಇಬ್ಬರು ಮಹಿಳೆಯರು ದೂರು ದಾಖಲು ಮಾಡಿದ್ದಾರೆ. ಸಾವಿರಾರು ಜನ ಮಹಿಳೆಯರು ಈ ವಿಡಿಯೋದಲ್ಲಿ ಇದ್ದಾರೆ. ಹಾಗಾಗಿ ಈ ಕೇಸ್ ಹೇಗೆ ಬೇಕೋ ಹಾಗೆ ಮಾಡಲು ಸಾಧ್ಯವಿಲ್ಲ. ಅವರ ಕುಟುಂಬದ ಬಗ್ಗೆಯೂ ಕೂಡಾ ನಾವು ಆಲೋಚನೆ ಮಾಡಬೇಕಾಗುತ್ತದೆ ಎಂದು ಪರಮೇಶ್ವರ್ ಹೇಳಿದ್ದಾರೆ. 

ಇದನ್ನೂ ಓದಿ : ನರೇಂದ್ರ ಮೋದಿಯವರ ನಿಜಬಣ್ಣ ಬಯಲು : ಸಿಎಂ ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News