MP Renukacharya : ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ ಪ್ರಕರಣ : ಸ್ನೇಹಿತನ ವಿಚಾರಣೆಗೆ ಮುಂದಾದ ಪೊಲೀಸರು

Renukacharya brother son missing : ಬಿಜೆಪಿ ಶಾಸಕ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆಯಾಗಿದ್ದಾರೆ. ಭಾನುವಾರದಿಂದ ಚಂದ್ರಶೇಖರ್‌ ನಾಪತ್ತೆ ಆಗಿದ್ದು, ವಿನಯ್ ಗುರೂಜಿ ಭೇಟಿಯಾಗಲು ಭಾನುವಾರ ತೆರಳಿದ್ದರು. 

Written by - Chetana Devarmani | Last Updated : Nov 2, 2022, 11:28 AM IST
  • ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ ರೇಣುಕಾಚಾರ್ಯ
  • ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ ಪ್ರಕರಣ
  • ಸ್ನೇಹಿತನ ವಿಚಾರಣೆಗೆ ಮುಂದಾದ ಪೊಲೀಸರು
MP Renukacharya : ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ ಪ್ರಕರಣ : ಸ್ನೇಹಿತನ ವಿಚಾರಣೆಗೆ ಮುಂದಾದ ಪೊಲೀಸರು title=
ಎಂ. ಪಿ ರೇಣುಕಾಚಾರ್ಯ

ದಾವಣಗೆರೆ : ಬಿಜೆಪಿ ಶಾಸಕ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆಯಾಗಿದ್ದಾರೆ. ರೇಣುಕಾಚಾರ್ಯ ಸಹೋದರ ಎಂ.ಪಿ. ರಮೇಶ್ ಅವರ ಹಿರಿಯ ಪುತ್ರ ಎಂ.ಆರ್. ಚಂದ್ರಶೇಖರ್ ನಾಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಭಾನುವಾರದಿಂದ ಚಂದ್ರಶೇಖರ್‌ ನಾಪತ್ತೆ ಆಗಿದ್ದು, ವಿನಯ್ ಗುರೂಜಿ ಭೇಟಿಯಾಗಲು ಭಾನುವಾರ ತೆರಳಿದ್ದರು. ವಿನಯ್ ಗುರೂಜಿ ಭೇಟಿಯಾದ ನಂತರ ವಾಪಸ್ ಶಿವಮೊಗ್ಗಕ್ಕೆ ಆಗಮಿಸಿದ್ದರು. ಶಿವಮೊಗ್ಗದಿಂದ ಹೊನ್ನಾಳಿವರೆಗೆ ಬಂದ ನಂತರ ಚಂದ್ರಶೇಖರ್‌ ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ : Tamilnadu Rain: ಚೆನ್ನೈನಲ್ಲಿ 30 ವರ್ಷಗಳ ದಾಖಲೆ ಮುರಿದ ಮಳೆ

ಶಿವಮೊಗ್ಗದ ಗೌರಿಗದ್ದೆಗೆ ಹೋಗಿದ್ದ ಚಂದ್ರಶೇಖರ್ ಅವರ ಮೊಬೈಲ್  ಅಂದು ರಾತ್ರಿ 11.30 ರಿಂದ ಸ್ವಿಚ್ ಆಫ್ ಆಗಿದೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಸ್ನೇಹಿತ ಕಿರಣ್ ಎಂಬುವರ ಜೊತೆ ಚಂದ್ರಶೇಖರ್‌ ತೆರಳಿದ್ದರು. ವಿನಯ್‌ ಗುರೂಜಿ ಆಶೀರ್ವಾದ ಪಡೆದು ಶಿವಮೊಗ್ಗದಿಂದ ವಾಪಸ್ ಆಗಿ ನ್ಯಾಮತಿ ವರೆಗೂ ಬಂದಿದ್ದಾರೆ. ನಂತರ ನಾಪತ್ತೆಯಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ಶಿವಮೊಗ್ಗದ ಮೂಲಕ ಹಾದು ಹೋದ ದೃಶ್ಯಗಳು ದೊರೆತಿವೆ. 

ನಾಪತ್ತೆಯಾಗಿರುವ ರೇಣುಕಾಚಾರ್ಯ ಸಹೋದರನ ಪುತ್ರನ ಕಾರಿನ ದೃಶ್ಯಗಳು ಪತ್ತೆಯಾಗಿದೆ. ಹೊನ್ನಾಳಿಯ ಸುರಹೊನ್ನೆ ರಸ್ತೆಯ ಪೆಟ್ರೋಲ್ ಬಂಕ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೋಮವಾರ ರಾತ್ರಿ 11.47 ಸುಮಾರು ಸುರಹೊನ್ನೆ ರಸ್ತೆಯಿಂದ ಹೊನ್ನಾಳಿ ಕಡೆಗೆ ತೆರಳಿದ ದೃಶ್ಯಗಳು ಸಿಕ್ಕಿವೆ. ಆದರೆ ಹೊನ್ನಾಳಿಗೆ ಕಾರು ಬಂದಿಲ್ಲ ಎಂದು ಕುಟುಂಬದವರು ಹೇಳುತ್ತಿದ್ದಾರೆ. ಕಾರು ಪಾಸಾಗಿರುವ ದೃಶ್ಯ ಪೆಟ್ರೋಲ್ ಬಂಕ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯಾವ ಕಡೆಗೆ ತೆರಳಿದ್ದಾನೆ ಎಂಬ ಬಗ್ಗೆ‌ ಗೊಂದಲ.

ಇದನ್ನೂ ಓದಿ : Car Accident: ದಕ್ಷಿಣ ಭಾರತದ ಖ್ಯಾತ ನಟಿ ಕಾರು ಅಪಘಾತ: ಗಂಭೀರ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ

ಇದೀಗ ಚಂದ್ರಶೇಖರ್‌ ಅವರ ಸ್ನೇಹಿತನ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ. ಶಿವಮೊಗ್ಗದ ಕಿರಣ್ ಎಂಬುವವರ ಜೊತೆ ಚಂದ್ರಶೇಖರ್‌ ತೆರಳಿದ್ದರು. ಈ ಹಿನ್ನೆಲೆ ಕಿರಣ್‌ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ. ಕಿರಣ್‌ ಅವರ ವಿಚಾರಣೆಗಾಗಿ ಹೊನ್ನಾಳಿ ಪೊಲೀಸರ ತಂಡ ಶಿವಮೊಗ್ಗಕ್ಕೆ ತೆರಳಿದೆ. ಕೊನೆಯದಾಗಿ ಆತನ‌ ಜೊತೆಯಲ್ಲಿದ್ದಾಗಲೆ ನಾಪತ್ತೆಯಾದ ಕಾರಣ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News