ಬೆಂಗಳೂರು : ಸುಮಾರು ತಿಂಗಳಿನಿಂದ ಆ ಅಪಾರ್ಟ್ಮೆಂಟ್‌ನಲ್ಲಿ ಹುಡುಗಿಯೊಬ್ಬಳು ಬಾಡಿಗೆ ಇದ್ಲು. ಆದರೀಗ ಮನೆ ಮಾಲೀಕನ ಮಗನ ಮೇಲೆ ಯುವತಿ ಗಂಭೀರ ಆರೋಪ ಮಾಡಿ ದೂರು ದಾಖಲಿಸಿದ್ದಾಳೆ. ಹಾಗಾದ್ರೆ ಯುವತಿ ಹಾಗೂ ಓನರ್ ಮಗನ ನಡುವೆ ಏನಾಯ್ತು ಎಂಬುದನ್ನು ತೋರಿಸ್ತಿವಿ ನೋಡಿ.
ಈ ಪೋಟೋದಲ್ಲಿ ಕಾಣ್ತಿರೋ ಈ ವ್ಯಕ್ತಿ ಹೆಸರು ಮಂಜುನಾಥ ಗೌಡ, ಸಂಜಯ ನಗರದ ಮಾರುತಿ ಬಡಾವಣೆಯ ನಿವಾಸಿ. ತಮ್ಮ ಅಪಾರ್ಟ್ಮೆಂಟ್ ನಲ್ಲಿ ಬಾಡಿಗೆ ಇದ್ದ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಮನಬಂದಂತೆ ಬೈದು ಹಲ್ಲೆ ಮಾಡಿದ್ದಾನೆಂಬ ಆರೋಪದ ಹಿನ್ನೆಲೆ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ:ಸರ್ಕಾರದ ಬೊಕ್ಕಸ ಬರಿದಾಗಿ ಕಳಪೆ ಔಷಧಿ ಖರೀದಿ : ಬಾಣಂತಿಯರ ಸಾವಿಗೆ ಇದೇ ಕಾರಣ
ಹೌದು.. ಈಕೆಯ ಹೆಸರು ಸಂಗೀತಾ ಅಂತಾ.. ಈಕೆಯೇ ಮಂಜುನಾಥ ಗೌಡನ ಮೇಲೆ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ಈಕೆಯ ದೂರಿನ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂಜಯ ನಗರ ಠಾಣೆ ವ್ಯಾಪ್ತಿಯ ಪ್ಲಾನೆಟ್ ವಿಸ್ತಾ ಅಪಾರ್ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಅಪಾರ್ಮೆಂಟ್ ನಲ್ಲಿ ವಾಸವಿದ್ದ ಯುವತಿ ಸಂಗೀತಾ ರಾಯ್ ಡಿಸೆಂಬರ್ 3 ರ ರಾತ್ರಿ 10.30ಕ್ಕೆ ಪಾರ್ಸಲ್ ತೆಗೆದುಕೊಳ್ಳಲು ಗೇಟ್ ಬಳಿ ಹೋಗಿದ್ರು. ಈ ವೇಳೆ ಆರೋಪಿ ಮಂಜುನಾಥ್ ಸಂಗೀತಾಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ಲಾಟ್ ಗೆ ಎಳೆದೊಯ್ಯಲು ಯತ್ನಿಸಿದ್ದಾನಂತೆ.
ಆತ ಕುಡಿದಿದ್ದರಿಂದ ಏನೂ ಮಾತನಾಡದೆ ಸಂಗೀತಾ ಸುಮ್ಮನಾಗಿದ್ದಾಳೆ. ಮತ್ತೆ ಬೈಯುತ್ತಾ ಯುವತಿ ಕಪಾಳಕ್ಕೆ ಹಲ್ಲೆ ಹೊಡೆದಿದ್ದಾನೆ. ಅಲ್ಲದೇ ಮಂಜುನಾಥ್ ಬಿಗಿಯಾಗಿ ಕುತ್ತಿಗೆ ಹಿಡದುಕೊಂಡಿದ್ದಾನೆ. ತಪ್ಪಿಸಿಕೊಳ್ಳಲು ಹೋದಾಗ ಬೆರಳು ಕಚ್ಚಿ ಗಾಯಪಡಿಸಿದ್ದಾನಂತೆ. ತಪ್ಪಿಸಿಕೊಂಡು ಹೋಗುವಾಗ ಮತ್ತೆ ಸಂಗೀತಾಗೆ ಬಲವಾಗಿ ಹೊಡೆದು ಗಲಾಟೆಯಾದ ಬೆಳಗ್ಗೆ ಕಿಟುಕಿಯಲ್ಲಿ ಇಣುಕಿ ನೋಡ್ತಿದ್ದನಂತೆ. ಆಗ ಮನೆ ಒಳಗೆ ಬರ್ತೀನಿ ಅಂದಿದ್ದಾನಂತೆ, ಸಂಗೀತಾ ಒಳಗೆ ಬಿಡದಿದ್ದಕ್ಕೆ ನಿಂದನೆ ಮಾಡಿದ್ದಾನೆಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಅನ್ನಪೂರ್ಣ ಅವರ ಗೆಲುವು 2028ರ ಚುನಾವಣೆಗೆ ಮುನ್ನುಡಿ: ಡಿಸಿಎಂ ಡಿಕೆ ಶಿವಕುಮಾರ್
ಇನ್ನು ಆರೋಪಿ ಮಂಜುನಾಥ ತಂದೆ ಕೆಂಪೇಗೌಡ ಎಂಬುವವರು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು. ಯುವತಿಯ ಕ್ಯಾರೆಕ್ಚರ್ ಸರಿ ಇರ್ಲಿಲ್ಲ.. ಅಲ್ಲದೆ ರಾತ್ರಿ ವೇಳೆ ಯುವಕರನ್ನ ಸೇರಿಸಿಕೊಂಡು ರಸ್ತೆಯಲ್ಲಿ ಗಲಾಟೆ ಮಾಡ್ತಿದ್ಲು. ಮನೆಗೆ ಹುಡುಗರನ್ನ ಕರೆದುಕೊಂಡು ಬರ್ತಿದ್ಲು. ರಾತ್ರಿ 12 ಗಂಟೆ 1 ಗಟೆಯಾದ್ರೂ ಇವರ ಗಲಾಟೆ ನಿಲ್ತಿರ್ಲಿಲ್ಲ. ಏರಿಯಾ ಅಕ್ಕಪಕ್ಕ ಎಲ್ಲರೂ ಅಫಿಷೀಯಲ್ಸ್ ಇರೋದ್ರಿಂದ ಹೀಗೆ ಮಾಡಿದ್ರೆ ನಾವು ಏನ್ ಮಾಡೋದು. ಹಾಗಾಗಿ ಎಲ್ಲರೂ ಬಂದು ಮನೆ ಖಾಲಿ ಮಾಡಿಸಿ ಅಂತಾರೆ.
ಹಾಗಾಗಿ ಮನೆ ಖಾಲಿ ಮಾಡಲು ಹೇಳಿದ್ವಿ. ಮೊನ್ನೆ ಹುಡುಗರನ್ನ ಸೇರಿಸಿ ಲೇಟ್ ನೈಟ್ ರಸ್ತೆಯಲ್ಲಿ ಜೋರಾಗಿ ಮಾತಾಡ್ತಿದ್ರು. ಅದನ್ನ ನನ್ನ ಮಗ ಹೋಗಿ ಕೇಳಿದ್ದಾನೆ. ಅದಕ್ಕೆ ಆಕೆಯ ಜೊತೆ ಹುಡುಗರು ಹಾಗೂ ಆಕೆ ಮಂಜುನ ತಳ್ಳಿದ್ದಾರೆ. ಈ ವೇಳೆ ಆತ ಹೋಗಿ ಬಿದ್ದಿದ್ದಾನೆ. ಹಾಗಾಗಿ ಆಕೆ ಮಾಡ್ತಿರೋ ಆರೋಪ ಎಲ್ಲವೂ ಸುಳ್ಳು. ಮುಂದಿನ ದಿನಗಳಲ್ಲಿ ಆಕೆಯ ವಿರುದ್ಧ ಕಾನೂನು ಹೋರಾಟ ಮಾಡ್ತೀವಿ ಎಂದಿದ್ದಾರೆ ಮಂಜುನಾಥ ತಂದೆ.
ಇದನ್ನೂ ಓದಿ:ಕರ್ನಾಟಕ ರಾಜ್ಯ ಈಗ ಜಿಡಿಪಿ ಪ್ರಗತಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ: ಸಚಿವ ಸಂತೋಷ್ ಲಾಡ್
ಸದ್ಯ ಘಟನೆ ನಡೆದ ಬಳಿಕ ಯುವತಿ ಭಯ ಬಿದ್ದು ಮಾರತಹಳ್ಳಿ ಕಡೆ ಶಿಫ್ಟ್ ಅಗಿದ್ದಾಳೆ. ಪ್ರಕರಣದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸ್ತಿರೋ ಸಂಜಯ ನಗರ ಪೊಲೀಸರು ಯುವತಿ ಹೇಳಿಕೆ ಮತ್ತು ಆರೋಪಿ ಮಂಜುನಾಥ ತಂದೆ ಹೇಳಿಕೆಯನ್ನು ಪೊಲೀಸರ ಪಡೆದುಕೊಂಡರು ತನಿಖೆ ನಡೆಸ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.