CD Case : ಕಾನೂನಾತ್ಮಕ ಹೋರಾಟಕ್ಕೆ ನಾನೂ ಸಿದ್ಧ - ರಮೇಶ್ ಜಾರಕಿಹೊಳಿ

ಯಾವ ಕೇಸ್ ಹಾಕುವುದಾದರೂ ಹಾಕಲಿ, ಎದುರಿಸಲು ನಾನು ಸಿದ್ದ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.  ಈ ಬಗ್ಗೆ ವಕೀಲರನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಕೂಡಾ ಅವರು ಹೇಳಿದ್ದಾರೆ. 

Written by - Ranjitha R K | Last Updated : Mar 26, 2021, 01:42 PM IST
  • ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ಮುಂದಾದ ಯುವತಿ
  • ಯಾವ ಕೇಸ್ ಹಾಕುವುದಾದರೂ ಹಾಕಲಿ, ಎದುರಿಸಲು ಸಿದ್ದ - ಜಾರಕಿಹೊಳಿ
  • 'ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ'
CD Case : ಕಾನೂನಾತ್ಮಕ ಹೋರಾಟಕ್ಕೆ ನಾನೂ  ಸಿದ್ಧ - ರಮೇಶ್ ಜಾರಕಿಹೊಳಿ  title=
ಯಾವ ಕೇಸ್ ಹಾಕುವುದಾದರೂ ಹಾಕಲಿ, ಎದುರಿಸಲು ಸಿದ್ದ - ಜಾರಕಿಹೊಳಿ (file photo)

 ಬೆಂಗಳೂರು : ರಮೇಶ್ ಜಾರಕಿಹೊಳಿ (Ramesh Jarakiholi) ಸಿ.ಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಡಿ ಯುವತಿ (CD lady) ವಿಡಿಯೋ ಬಿಡುಗಡೆ ಮಾಡುತ್ತಿದ್ದಾರೆ. ಇಂದು ಕೂಡಾ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ಯುವತಿ, ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ ಯಾವ ಕೇಸ್ ದಾಖಲಿಸುತ್ತಾರೋ ದಾಖಲಿಸಲಿ ಎಂದಿದ್ದಾರೆ. ಕಾನೂನಾತ್ಮಕ ಹೋರಾಟಕ್ಕೆ ನಾನೂ  ಸಿದ್ಧ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. 

ಸಿ. ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುವತಿ ವಿಡಿಯೋ (Video) ಬಿಡುಗಡೆ ಮಾಡಿ ಮಧ್ಯಾಹ್ನ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ರಮೇಶ್ ಜಾರಕಿಹೊಳಿ (Ramesh Jarakiholi) , ಯಾವ ಕೇಸ್ ಹಾಕುವುದಾದರೂ ಹಾಕಲಿ, ಎದುರಿಸಲು ನಾನು ಸಿದ್ದ ಎಂದಿದ್ದಾರೆ.  ಈ ಬಗ್ಗೆ ವಕೀಲರನ್ನು ಭೇಟಿಯಾಗಿ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ ನಿರೀಕ್ಷಣಾ ಜಾಮೀನಿಗೆ (Anticipatory bail) ಅರ್ಜಿ ಸಲ್ಲಿಸುವುದಿಲ್ಲ ಎಂದು ಕೂಡಾ ಅವರು ಹೇಳಿದ್ದಾರೆ. 

ಇದನ್ನೂ ಓದಿ : CD Case : ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ಮುಂದಾದ ಸಿ.ಡಿ ಲೇಡಿ

ಬೆಳಿಗ್ಗೆಯಷ್ಟೇ ವಿಡಿಯೋ ಬಿಡುಗಡೆ ಮಾಡಿರುವ ಯುವತಿ (CD Lady), ತಾನು ಜೀವ ಭಯದಲ್ಲೇ ಬದುಕುತ್ತಿರುವುದಾಗಿ ಹೇಳಿದ್ದಾರೆ. ತನಗೆ ಬೇರೆ ಬೇರೆ ಪಕ್ಷದ ನಾಯಕರು, ಸಂಘಟನೆಗಳು ಮತ್ತು ರಾಜ್ಯದ ಜನತೆ ಬೆಂಬಲ ಸೂಚಿಸುತ್ತಿದ್ದಾರೆ. ಎಲ್ಲರೂ ನೀಡುತ್ತಿರುವ ಬೆಂಬಲದಿಂದಾಗಿ ಇದೀಗ ತನಗೆ ಧೈರ್ಯ ಬಂದಿರುವುದಾಗಿಯೂ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲರ ಮೂಲಕ ರಮೇಶ್ ಜಾರಕಿಹೊಳಿ (Ramesh Jarakiholi) ವಿರುದ್ಧ ದೂರು (Complaint) ದಾಖಲಿಸುವುದಾಗಿ ಯುವತಿ ಹೇಳಿದ್ದಾರೆ. 

ಇದನ್ನೂ ಓದಿ : HD Kumaraswamy: ಸರ್ಕಾರದ ಮುಂದೆ 'ಒಂದೇ ಬೇಡಿಕೆ' ಇಟ್ಟ ಡಿಕೆಶಿ, HDK..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News