ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ 6 ಬಾರಿ ಶಾಸಕರಾಗಿದ್ದ ಕೆ.ಆರ್.ರಮೇಶಕುಮಾರ್ ನೂತನ ವಿಧಾನಸಭಾ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಇನ್ನೊಂದೆಡೆ ಸಂಸದೀಯ ಸಂಪ್ರದಾಯಕ್ಕೆ ಅನುಗುಣವಾಗಿ ಸಭಾಧ್ಯಕ್ಷರು ಸರ್ವಾನುಮತದಿಂದ ಆಯ್ಕೆಯಾಗುವುದು ಸೂಕ್ತವೆಂದು ಅಭಿಪ್ರಾಯ ಪಟ್ಟ ಕಾರಣ ಬಿಜೆಪಿ ಪರವಾಗಿ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಸುರೇಶ ಕುಮಾರ್ ನಾಮಪತ್ರ ವಾಪಸ್ ತೆಗೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ರಮೇಶ ಕುಮಾರ ಅವರು ಸರ್ವಾನುಮತದ ಒಪ್ಪಿಗೆ ಮೂಲಕ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಕೆ.ಆರ್. ರಮೇಶ್ ಕುಮಾರ್ ಅವರು ಈ ಹಿಂದೆಯು ಕೂಡ ರಾಜ್ಯದ ಸ್ಪೀಕರ್ ಆಗಿ (1994-99) ದೇವೇಗೌಡ ಮತ್ತು ಜೆ.ಎಚ್ ಪಟೇಲ್ ರ ಕಾಲಾವಧಿಯಲ್ಲಿ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷವು ಅವರ ಅಪಾರವಾದ ಅನುಭವವನ್ನು ಪರಿಗಣಿಸಿ ಮತ್ತೆ ಈ ಹುದ್ದೆಗೆ ಪ್ರಸ್ತಾಪ ಮಾಡಿತ್ತು.