ಬೆಂಗಳೂರು: ಪೂರ್ವ ಮುಂಗಾರು ಮಳೆ ರಾಜ್ಯದಲ್ಲಿ ಚುರುಕುಗೊಂಡಿದ್ದು, ಸಿಲಿನಾಕ್ ಸಿಟಿಯಲ್ಲೂ ನಿನ್ನೆಯಿಂದ ಗುಡುಗು ಸಹಿತ ಮಳೆಯಾಗ್ತಿದೆ.ಸಂಜೆ ವೇಳೆಗೆ ಮಳೆ ಸುರಿಯುತ್ತಿರೋದ್ರಿಂದ ಕಚೇರಿಯಿಂದ ಮನೆಗೆ ತೆರಳ್ತಿರೋ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿಯಾಗಿದೆ.ಇನ್ನೊಂದಷ್ಟು ಜನರಿಗೆ ಬಿಸಿಲಿನ ಬೇಗೆಯಿಂದ ತಂಪಾಗಿದೆ.
ಇದನ್ನೂ ಓದಿ: Kantara Teaser: ಕಾಂತಾರ ಟೀಸರ್ ರಿಲೀಸ್! ದೆವ್ವದ ಕಥೆ ಹೇಳಲು ಬರುತ್ತಿದ್ದರಾ ರಿಷಬ್ ಶೆಟ್ಟಿ?
ಇನ್ನೆಷ್ಟು ದಿನ ಈ ಮಳೆ ಅಂತ ನೋಡೋದಾದ್ರೆ, ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನಗರದಲ್ಲಿ ನಾಳೆ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಇನ್ನು ಇಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದ್ದು, ಮುಂದಿನ ಐದು ದಿನ ಮಳೆಯಾಗಲಿದೆ.
ಕರಾವಳಿಯಲ್ಲಿ ನಾಳೆಯೂ ಗುಡುಗು-ಸಿಡಿಲಿನೊಂದಿಗೆ ಮಳೆಯಾಗಲಿದ್ದು, ಎಪ್ರಿಲ್ 16, 17, 18 ರಂದು ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಮಳೆಯಾಗಲಿದೆ.ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಸಹಿತ ಕೆಲ ಜಿಲ್ಲೆಗಳಲ್ಲಿ 5 ದಿನ ಮಳೆಯಾಗಲಿದೆ.ದಕ್ಷಿಣ ಒಳನಾಡಿನಲ್ಲಿ ಇಂದು, ನಾಳೆ ಎಲ್ಲಾ ಜಿಲ್ಲೆಗಳಿಗೆ ಗುಡುಗು ಸಿಡಿಲಿನೊಂದಿಗೆ ಮಳೆಯಾಗಲಿದೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.