ಕರ್ನಾಟಕದ ಐದು ಎಕ್ಸ್​ಪ್ರೆಸ್ ರೈಲುಗಳ ಎಸಿ ಕೋಚ್ ದರ ಕಡಿತ!

 ಬೆಂಗಳೂರಿನ ಯಶವಂತಪುರ-ಹುಬ್ಬಳ್ಳಿ ನಡುವೆ ವಾರಕ್ಕೊಮ್ಮೆ ಸಂಚರಿಸುವ ರೈಲಿನ ಎಸಿ ದರವನ್ನು 735 ರೂ.ಗಳಿಂದ 590 ರೂ.ಗಳಿಗೆ ಇಳಿಸಿದೆ. 

Last Updated : Aug 12, 2018, 05:20 PM IST
ಕರ್ನಾಟಕದ ಐದು ಎಕ್ಸ್​ಪ್ರೆಸ್ ರೈಲುಗಳ ಎಸಿ ಕೋಚ್ ದರ ಕಡಿತ! title=

ಬೆಂಗಳೂರು: ಪ್ರಯಾಣಿಕರನ್ನು ಹವಾನಿಯಂತ್ರಿತ ಭೋಗಿಗಳಲ್ಲಿ ಪ್ರಯಾಣಿಸಲು ಆಕರ್ಷಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಇತ್ತೀಚೆಗಷ್ಟೇ ಕರ್ನಾಟಕದ ಐದು ಎಕ್ಸ್​ಪ್ರೆಸ್ ರೈಲುಗಳ ಎಸಿ ಭೋಗಿಗಳ ಟಿಕೆಟ್‌ ದರವನ್ನು ಕಡಿಮೆ ಮಾಡಿದೆ. 

ಕರ್ನಾಟಕದ ಬೆಂಗಳೂರು, ಗದಗ್​, ಮೈಸೂರಿನಿಂದ ಸಂಚರಿಸುವ ಮೂರು ಎಕ್ಸ್​ಪ್ರೆಸ್​ ರೈಲುಗಳ ಎಸಿ ಭೋಗಿಗಳ ಟಿಕೆಟ್​ ದರವನ್ನು ಕಡಿತಗೊಳಿಸಲಾಗಿದೆ. "ಬೆಂಗಳೂರು ಮಾರ್ಗವಾಗಿ ಮೈಸೂರು ಮತ್ತು ಚೆನ್ನೈ ನಡುವೆ ಸಂಚರಿಸುವ ಶತಾಬ್ದಿ ಎಕ್ಸ್​ಪ್ರೆಸ್​ ರೈಲಿನ ಎಸಿ ಛೇರ್ ಕಾರ್ ಟಿಕೆಟ್ ದರ ಕಡಿಮೆ ಮಾಡಿರುವುದರಿಂದ ಬಸ್ ಅಥವಾ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಿಂತ ಹೆಚ್ಚು ಮಂದಿ ಶತಾಬ್ದಿಯಲ್ಲಿ ಪ್ರಯಾಣಿಸಿದ್ದಾರೆ" ಎಂದು ನೈರುತ್ವ ರೈಲ್ವೆ ವಕ್ತಾರ ತಿಳಿಸಿದ್ದಾರೆ. 

ರೈಲ್ವೇಸ್ ನೂತನ ಕ್ರಮ, ಪ್ರಯಾಣಿಕರಿಗೆ ವೈಟಿಂಗ್ ಲಿಸ್ಟ್ ನಿಂದ ಪರಿಹಾರ

ಶತಾಬ್ದಿ ರೈಲಿನ ಟಿಕೆಟ್ ದರ ಕಡಿಮೆ ಮಾಡಿದ್ದರಿಂದ ಅಧಿಕವಾದ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರಿನ ಯಶವಂತಪುರ-ಹುಬ್ಬಳ್ಳಿ ನಡುವೆ ವಾರಕ್ಕೊಮ್ಮೆ ಸಂಚರಿಸುವ ರೈಲಿನ ಎಸಿ ದರವನ್ನು 735 ರೂ.ಗಳಿಂದ 590 ರೂ.ಗಳಿಗೆ ಇಳಿಸಿದೆ. ಗದಗ್-ಮುಂಬೈ ಎಕ್ಸ್​ಪ್ರೆಸ್ ರೈಲಿನ ಎಸಿ ಟಿಕೆಟ್ ದರವನ್ನು ಮಹಾರಾಷ್ಟ್ರದ ಸೋಲಾಪುರದವರೆಗೆ 495 ರೂ.ಗಳಿಂದ 435 ರೂ.ಗಳಿಗೆ ಇಳಿಸಲಾಗಿದ್ದು, ನವೆಂಬರ್ 11 ರಿಂದ ಈ ಟಿಕೆಟ್ ದರ ಅನ್ವಯವಾಗಲಿದೆ. 

ಮೈಸೂರು ವಿಭಾಗದ 32 ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ಸೌಲಭ್ಯ

ಅಂತೆಯೇ, ಮೈಸೂರು-ಶಿರಡಿ ವೀಕ್ಲಿ ಎಕ್ಸ್​ಪ್ರೆಸ್ ರೈಲಿನ ಮೈಸೂರು ಮತ್ತು ಬೆಂಗಳೂರು ನಡುವಿನ ಎಸಿ ಟಿಕೆಟ್ ಶುಲ್ಕ 495 ರೂ.ಗಳಿಗೆ ಬದಲಾಗಿ 260ರೂ. ಆಗಲಿದ್ದು, ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ. 

ಬೆಂಗಳೂರು ಮತ್ತು ಹುಬ್ಬಳ್ಳಿ ನಡುವೆ ಸಂಚರಿಸುವ ಯಶವಂತಪುರ-ಬಿಕನೇರ್ ಎಕ್ಸ್​ಪ್ರೆಸ್​ ರೈಲಿನ 3ಎಸಿ ಬೋಗಿಯ ಟಿಕೆಟ್ ದರವನ್ನು 735 ರೂ.ಗಳಿಂದ 590 ರೂ.ಗಳಿಗೆ ಇಳಿಸಲಾಗಿದೆ. ಈ ಟಿಕೆಟ್ ದರ ನವೆಂಬರ್ 30 ರಿಂದ ಅನ್ವಯವಾಗಲಿದೆ. 

ಸೆಪ್ಟೆಂಬರ್ 1 ರಿಂದ ಈ ಸೇವೆಗೆ ಶುಲ್ಕ ವಿಧಿಸಲಿದೆ ರೈಲ್ವೆ ಇಲಾಖೆ

ಅಲ್ಲದೆ, ಯಶವಂತಪುರ-ಸಿಕಂದರಾಬಾದ್ ಎಕ್ಸ್​ಪ್ರೆಸ್​ ರೈಲಿನ 3ಎಸಿ ಬೋಗಿಯ ಟಿಕೆಟ್ ದರದಲ್ಲಿಯೂ ಬದಲಾವಣೆಯಾಗಿದ್ದು, 345 ರೂ.ಗಳಿಂದ 305 ರೂ.ಗಳಿಗೆ ಇಳಿಸಲಾಗಿದೆ. ಈ ದರ ನವೆಂಬರ್ 22 ರಿಂದ ಜಾರಿಗೆ ಬರಲಿದೆ. 

ಪ್ರಯಾಣಿಕರನ್ನು ಆಕರ್ಷಿಸುವ ದೃಷ್ಟಿಯಿಂದ ಇತರ ವಿಭಾಗಿಯ ರೈಲ್ವೆಗಳೂ ಸಹ ನೈಋತ್ಯ ರೈಲ್ವೆಯಂತೆ ಎಸಿ ಟಿಕೆಟ್ ದರ ಪರಿಷ್ಕರಣೆಗೆ ಭಾರತಿಯ ರೈಲ್ವೆ ನಿರ್ದೇಶಿಸಿದೆ. 

Trending News