ಬೆಂಗಳೂರು: ಕೆಲದಿನಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಾಂಗ್ರೇಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನೆಗಳ ಸುರಿಮಳೆ ಗೈದಿದ್ದರು. ಇದು ಗುಜರಾತ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್-ಮೋದಿ ನಡುವೆ ನಡೆಯುತ್ತಿದ್ದ ಪ್ರಶ್ನಾ ಸಮರವಾಗಿತ್ತು. ಇದುವರೆಗೂ ರಾಹುಲ್, ಮೋದಿ ಅವರಿಗೆ ಒಟ್ಟು ಎಂಟು ಪ್ರಶ್ನೆಗಳನ್ನು ಕೇಳಿದ್ದಾರೆ. ಇದೀಗ ಈ ಸರದಿ ರಾಜ್ಯದ್ದು...!
ಕೇಂದ್ರದಲ್ಲಿ ಕಾಂಗ್ರೇಸ್ ಪಡೆ ಬಿಜೆಪಿಯ ಮೇಲೆ ದಾಳಿ ಮಾಡುತ್ತಿದೆ. ಇದೀಗ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ನಲ್ಲಿ ರಾಜ್ಯ ಸರ್ಕಾರದ ಮೇಲೆ ಗದ ಪ್ರಹಾರ ಮಾಡಿದ್ದಾರೆ.
ಪ್ರತಾಪ್ ಸಿಂಹರ ಮೊದಲ ಪ್ರಶ್ನೆ?
ಹೀಗೊಂದು ಪ್ರಶ್ನೆ: ಮೈಸೂರು ಜಿಲ್ಲೆಯ ಕೆ.ಆರ್. ನಗರದ ಬೀದಿ ಬೀದಿಗಳಲ್ಲಿ ಈ ರೀತಿ ಪೋಸ್ಟರ್ ಅಂಟಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವವರು ಯಾರೂ ಇಲ್ಲವೇ? ಈದ್, ಟಿಪ್ಪು ಮೆರವಣಿಗೆಯಂತೆ ಇಂಥ ಪೋಸ್ಟರ್ಗಳಿಗೂ ಅವಕಾಶವಿದೆಯೇ? ಸಿದ್ದರಾಮಯ್ಯನವರ ಆಡಳಿತದಲ್ಲಿ ಮೈಸೂರು ಜಿಲ್ಲೆಯಲ್ಲಿ ಏನಾಗುತ್ತಿದೆ ನೋಡಿ?! pic.twitter.com/tmuxG4XynU
— Pratap Simha (@mepratap) December 6, 2017
ಪ್ರತಾಪ್ ಸಿಂಹರ ಎರಡನೇ ಪ್ರಶ್ನೆ?
ಮತ್ತೊಂದು ಪ್ರಶ್ನೆ: ಕೋಲಾರ ಜಿಲ್ಲಾಪಂಚಾಯಿತಿ ಜೂನಿಯರ್ ಇಂಜಿನಿಯರ್ ವೆಂಕಟೇಶ್ಗೆ ಬಾಟಲಿನಲ್ಲಿ ಹೊಡೆಯಲು ಹೋದ ಸಚಿವರು ಯಾರ ಕ್ಯಾಬಿನೆಟ್ನಲ್ಲಿದ್ದಾರೆ? pic.twitter.com/T9tRMuwxog
— Pratap Simha (@mepratap) December 6, 2017