PSI Recruitment Scam : PSI ನೇಮಕಾತಿ ಅಕ್ರಮ : ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ CID ಶಾಕ್ ಮೇಲೆ ಶಾಕ್!

ಇಡೀ ರಾಜ್ಯದಲ್ಲಿ ಅಲ್ಲೊಲ ಕಲ್ಲೊಲ ಸೃಷ್ಟಿಸಿರುವ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರೋ ಅಕ್ರಮ ಪ್ರಕರಣ, ದಿನದಿಂದ ದಿನಕ್ಕೆ ಆರೋಪಿಗಳಿಗೆ ಕಾನೂನು ಕುಣಿಕೆ ಬಿಗಿಯಾಗುತ್ತಿದೆ.. ಅಕ್ರಮದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ ಬಂಧನದ ನಂತರ, ನಾನು ಕೇವಲ ಎರಡು ದಿನಗಳಲ್ಲಿ ಬೆಲ್ ಮೇಲೆ ಹೊರಬರುತ್ತೇನೆ..

Written by - Channabasava A Kashinakunti | Last Updated : May 15, 2022, 09:01 PM IST
  • ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರೋ ಇಡೀ ಅಕ್ರಮ ಪ್ರಕರಣ
  • ಅಕ್ರಮ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ ಸಿಐಡಿ ಶಾಕ್ ಮೇಲೆ ಶಾಕ್
  • ರಾಜ್ಯದಲ್ಲಿ ಅಲ್ಲೊಲ ಕಲ್ಲೊಲ ಸೃಷ್ಟಿಸಿರುವ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆ
PSI Recruitment Scam : PSI ನೇಮಕಾತಿ ಅಕ್ರಮ : ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ CID ಶಾಕ್ ಮೇಲೆ ಶಾಕ್! title=

ಬೆಂಗಳೂರು : ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರೋ ಇಡೀ ಅಕ್ರಮ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ಗೆ ಸಿಐಡಿ ಶಾಕ್ ಮೇಲೆ ಶಾಕ್ ನೀಡ್ತಿದ್ದಾರೆ. ಸಿಐಡಿ ಖೆಡ್ಡಾಕ್ಕೆ ಬಿದ್ದಿರೋ ಆರ್‌ಡಿಪಿ ಕೇವಲ 2ನೇ ದಿನದಲ್ಲಿ ಹೊರಬರ್ತೀನಿ, ಗ್ರ್ಯಾಂಡ್ ಆಗಿ ವೆಲ್‌ಕಂ ಮಾಡೋಕೆ ಸಿದ್ಧತೆ ಮಾಡಿಕೊಳ್ಳಿ ಅಂತ ಬೆಂಬಲಿಗರಿಗೆ ಹೇಳಿದ್ದನಂತೆ. ಆದ್ರೆ ತನ್ನೆಲ್ಲಾ ಪ್ಲಾನ್‌ಗಳ ಫ್ಲಾಪ್ ಆಗಿ ಸಿಐಡಿ ಬಲೆಯಲ್ಲಿ ಬಿದ್ದು ವಿಲವಿಲ ಹೊದ್ದಾಡ್ತಿದ್ದಾರೆ. ಇನ್ನು ಇತ್ತ ಸಿಐಡಿ ಕಣ್ತಪ್ಪಿಸಿ ಓಡಾಡ್ತಿರೋ ಶಾಂತಾಬಾಯ್ ಮತ್ತು ರವೀಂದ್ರ ಮೇಳಕುಂದಿಗಾಗಿ ಪೊಲೀಸರು ತಲಾಶ್‌ ನಡೆಸಿದ್ದಾರೆ...

ಇಡೀ ರಾಜ್ಯದಲ್ಲಿ ಅಲ್ಲೊಲ ಕಲ್ಲೊಲ ಸೃಷ್ಟಿಸಿರುವ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರೋ ಅಕ್ರಮ ಪ್ರಕರಣ, ದಿನದಿಂದ ದಿನಕ್ಕೆ ಆರೋಪಿಗಳಿಗೆ ಕಾನೂನು ಕುಣಿಕೆ ಬಿಗಿಯಾಗುತ್ತಿದೆ.. ಅಕ್ರಮದ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ ಬಂಧನದ ನಂತರ, ನಾನು ಕೇವಲ ಎರಡು ದಿನಗಳಲ್ಲಿ ಬೆಲ್ ಮೇಲೆ ಹೊರಬರುತ್ತೇನೆ.. ನನ್ನನ್ನ ವೆಲ್‌ಕಮ್ ಮಾಡಿಕೊಳ್ಳಲು ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಿ ಅಂತಾ ತನ್ನ ಬೆಂಬಲಿಗರಿಗೆ ಸೂಚಿಸಿದ್ದ.. ಆದ್ರೆ ಅಕ್ರಮದಲ್ಲಿ ಆರ್‌ಡಿಪಿ ಕೈವಾಡ ಆಳವಾಗಿದ್ದನ್ನ ಕಂಡ ಸಿಐಡಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ಆರ್‌ಡಿಪಿಗೆ ಬೆಲ್ ನೀಡದಂತೆ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ರು. ಅಕ್ರಮದ ಕೋಟೆಯಲ್ಲಿ ರಾಜನಂತೆ ಮರೆಯುತ್ತಿದ್ದ ಆರ್‌ಡಿ ಪಾಟೀಲ್ ಸ್ವಾಗತಕ್ಕೆ ಅಫಜಲಪುರದಲ್ಲಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗ್ತಿತ್ತು. ಇತ್ತ ಸಿಐಡಿ ಬಿಗಿ ಇನ್ವೇಷ್ಟಿಗೇಶನ್‌ನಿಂದ ಆರ್‌ಡಿಪಿಯ ಸನ್ಮಾನದ ಕನಸ್ಸು ನುಚ್ಚುನೂರಾದ್ರೆ, ಅತ್ತ ಆರ್‌ಡಿಪಿಗೆ ಸನ್ಮಾನ ಇಟ್ಟುಕೊಂಡಿದ್ದವರು ಇದೀಗ ನಾಪತ್ತೆಯಾಗಿದ್ದಾರೆ.‌ ಆರ್‌ಡಿಗೆ ಸನ್ಮಾನ ಮಾಡಿದ್ರೆ ತಾವು ಲಾಕ್ ಆಗಬಹುದೆಂಬ ಭಯದಿಂದ ಆರ್‌ಡಿ ಟಿಮ್ ಕಾಣದಂತೆ ಮಾಯವಾಗಿದ್ದು, ಇದೀಗ ನಾಪತ್ತೆಯಾದವರನ್ನ ವಶಕ್ಕೆ ಪಡೆಯಲು ಸಿಐಡಿ ಮುಂದಾಗಿದೆ.

ಇದನ್ನೂ ಓದಿ : Karnataka Cabinet Expansion : ರಾಜ್ಯ ಸಂಪುಟ ವಿಸ್ತರಣೆ ಯಾವಾಗ? ಯಾಕೆ ಲೇಟ್ ಆಗ್ತಿದೆ?

ಇನ್ನು ಇತ್ತ ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಡಿಲ್‌ರಾಣಿ ದಿವ್ಯಾ ಹಾಗರಗಿ, ಡಿಲ್‌ರಾಜಾ ಮಂಜುನಾಥ ಮೇಳಕುಂದಿ, ಹೆಡ್‌ಮಾಸ್ಟರ್ ಕಾಶಿನಾಥ್‌, ಶಿಕ್ಷಕಿಯರು, ಪೊಲೀಸ್ ಅಧಿಕಾರಿಗಳು ಸೇರಿದಂತೆ 32 ಜನ ಅಕ್ರಮದ ರೂವಾರಿಗಳು ಅಂದರ್ ಆಗಿದ್ದಾರೆ. ಆದ್ರೆ ಕಿಂಗ್‌ಪಿನ್ ಮಂಜುನಾಥ ಮೇಳಕುಂದಿ ಸಹೋದರ ರವೀಂದ್ರ ಮೇಳಕುಂದಿ ಮತ್ತು ಪಿಎಸ್‌ಐ ಅಭ್ಯರ್ಥಿ ಶಾಂತಾಬಾಯ್ ತಿಂಗಳು ಕಳೆದ್ರೂ ಇದುವರೆಗೆ ಸಿಐಡಿ ಬಲೆಗೆ ಬೀಳದೇ ತಲೆಮರೆಸಿಕೊಂಡು ಓಡಾಡ್ತಿದಾರೆ.. ಹೀಗಾಗಿ ಇಬ್ಬರ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಇಬ್ಬರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.. ಒಂದುವೇಳೆ ಶರಣಾಗತಿಯಾಗದಿದ್ರೆ, ಉದ್ಘೋಷಿತ ಅಪರಾಧಿಗಳೆಂದು ಘೋಷಣೆ ಮಾಡಲು ಕೋರ್ಟ್‌ಗೆ ಸಿಐಡಿ ಮನವಿ ಸಲ್ಲಿಸಲು ನಿರ್ಧರಿಸಿದೆ.. ಜೊತೆಗೆ ಶರಣಾಗತಿಯಾಗದ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಇದೆ ಅಂತಾ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ

ಇನ್ನು ಎಂಎಸ್‌ಐ ಡಿಗ್ರಿ ಕಾಲೇಜಿನಲ್ಲಿ ಅಕ್ರಮ ಪ್ರಕರಣ ಸಂಬಂಧ ಹೆಡ್‌ಮಾಸ್ಟರ್ ಕಾಶಿನಾಥ್‌‌ನನ್ನ ಸಿಐಡಿ ಮತ್ತೆ ವಶಕ್ಕೆ ಪಡೆದು ಡ್ರೀಲ್ ಮಾಡುತ್ತಿದ್ದು, ಒಂದು ವೇಳೆ ಶಾಂತಾಬಾಯ್ ಮತ್ತು ರವೀಂದ್ರ ಮೇಳಕುಂದಿ ಸಿಐಡಿ ಖೆಡ್ಡಾಗೆ ಬಿದ್ರೆ, ಇತ್ತ ಡಿಲ್‌ರಾಣಿ ದಿವ್ಯಾಳನ್ನ ಸಹ ಸಿಐಡಿ ಮತ್ತೆ ವಶಕ್ಕೆ ಪಡೆದು ತನಿಖೆ ಮತ್ತಷ್ಟು ಚುರುಕುಗೊಳಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಇದನ್ನೂ ಓದಿ : School Reopen: ನಾಳೆಯಿಂದ ಶಾಲೆಗಳು ಓಪನ್: ತಳಿರು ತೋರಣಗಳಿಂದ ಮಕ್ಕಳ ಸ್ವಾಗತಕ್ಕೆ ಸಿದ್ಧತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News