ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ನಿನ್ನೆ(ಏ.29) ಪುಣೆಯಲ್ಲಿ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಬಂಧಿಸಲಾಗಿತ್ತು. ಪರೀಕ್ಷಾ ಅಕ್ರಮಕ್ಕೆ ಸಾಥ್ ನೀಡಿರುವ ಆರೋಪದ ಮೇರೆಗೆ ಕಳೆದ 18 ದಿನಗಳಿಂದ ನಾಪತ್ತೆಯಾಗಿದ್ದ ಜ್ಞಾನಜ್ಯೋತಿ ಶಾಲೆಯ ಒಡತಿ ಹಾಗೂ ಬಿಜೆಪಿ ನಾಯಕಿ ದಿವ್ಯಾಳನ್ನು ಮಹಾರಾಷ್ಟ್ರದ ಪುಣೆ ಬಳಿ ಸಿಐಡಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದ ರೂವಾರಿ ದಿವ್ಯಾರನ್ನು ಸಿಐಡಿ ಪೊಲೀಸರು ಶುಕ್ರವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಆಕೆಯನ್ನು ನ್ಯಾಯಾಲಯವು 11 ದಿನಗಳ ಕಾಲ ಸಿಐಡಿ ಕಸ್ಟಡಿಗೆ ಒಪ್ಪಿಸಿತ್ತು. ಕಳೆದ ರಾತ್ರಿ ಮಹಿಳಾ ನಿಲಯದಲ್ಲೇ ಕಾಲ ಕಳೆದಿರೋ ದಿವ್ಯಾ ಹಾಗರಗಿ ತಡರಾತ್ರಿವರಗೆ ನಿದ್ರೆ ಬರದೆ ಪರದಾಡಿದ್ದಾರೆ.
ಇದನ್ನೂ ಓದಿ: PSI ನೇಮಕಾತಿ ಹಗರಣ: ಸಂಜೆ 4ಗಂಟೆಯೊಳಗೆ ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರು
ಎಸಿ ಕೋಣೆಯಲ್ಲಿ ಮಲಗುತ್ತಿದ್ದವರಿಗೆ ಪ್ಯಾನ್ ಕೆಳಗೆ ಮಲಗಬೇಕಾದ ಸ್ಥಿತಿ ಬಂದೊಂದಗಿದೆ. ನಿನ್ನೆ ಮಧ್ಯಾಹ್ನ ಊಟವನ್ನು ಕೂಡ ದಿವ್ಯಾ ನಿರಾಕರಿಸಿದ್ದರು. ರಾತ್ರಿ ಸ್ವಲ್ಪ ಊಟ ಮಾಡಿರೋ ದಿವ್ಯಾ ಹಾಗರಗಿ ನಿದ್ರೆ ಇಲ್ಲದ ರಾತ್ರಿ ಕಳೆದಿದ್ದಾರೆ. ಕೋಟಿ ಕೋಟಿ ಹಣ ಇದ್ರೂ ಅಕ್ರಮದ ಜಾಲಕ್ಕೆ ಸಿಲಕಿರೋ ಬಗ್ಗೆ ದಿವ್ಯಾ ಪಶ್ಚಾತಾಪ ವ್ಯಕ್ತಪಡಿಸಿದ್ದಾರಂತೆ.
ಕಲಬುರಗಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ದಿವ್ಯಾರಿಗೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ. ಪಿತ್ರಾರ್ಜಿತವಾಗಿ ಬಂದಿರೋ ಕೋಟ್ಯಂತರ ರೂ. ಆಸ್ತಿ ಇದ್ದರೂ ಅಕ್ರಮದಲ್ಲಿ ಭಾಗಿಯಾಗಿ ಬಂಧನವಾಗಿರುವುದಕ್ಕೆ ದಿವ್ಯಾ ಪಶ್ಚಾತಾಪ ಪಟ್ಟಿದ್ದಾರೆ. ತಾವು ಮಾಡಿರುವುದು ದೊಡ್ಡ ತಪ್ಪು ಎಂಬುದು ದಿವ್ಯಾರಿಗೆ ಮನದಟ್ಟಾಗಿದೆ. ಹೀಗಾಗಿಯೇ ಅವರು ತಮ್ಮನ್ನು ಭೇಟಿಯಾದವರ ಮುಂದೆ ಪಶ್ಚಾತಾಪದ ಮಾತನ್ನಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: PSI ನೇಮಕಾತಿ ಹಗರಣ: ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಬಂಧನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.