ಕೊರಟಗೆರೆ ಬಳಿ ಖಾಸಗಿ ಬಸ್ ಪಲ್ಟಿ; ಐವರು ಸಾವು, 15 ಜನರಿಗೆ ಗಾಯ

ಕೊರಟಗೆರೆಯಿಂದ ತುಮಕೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಜೆಟ್ಟಿ ಅಗ್ರಹಾರದ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪಲ್ಟಿಯಾಗಿದೆ. 

Last Updated : Oct 30, 2019, 01:18 PM IST
ಕೊರಟಗೆರೆ ಬಳಿ ಖಾಸಗಿ ಬಸ್ ಪಲ್ಟಿ; ಐವರು ಸಾವು, 15 ಜನರಿಗೆ ಗಾಯ title=

ತುಮಕೂರು: ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಕನಿಷ್ಠ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು 15 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ  ದುರ್ಘಟನೆ ಕೊರಟಗೆರೆ ಜೆಟ್ಟಿ ಅಗ್ರಹಾರದ ಬಳಿ ಬುಧವಾರ ನಡೆದಿದೆ.

ಕೊರಟಗೆರೆಯಿಂದ ತುಮಕೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಜೆಟ್ಟಿ ಅಗ್ರಹಾರದ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್ ಪಲ್ಟಿಯಾಗಿದೆ. 

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ಪೊಲೀಸರು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.
 
Trending News