ಪ್ರತಾಪ್ ಸಿಂಹ ಚಾಲೆಂಜ್‌ಗೆ ಎಸಿಪಿ ಚಂದನ್‌ ಟಕ್ಕರ್‌..! ರಜೆ ಇದ್ರೂ ಕರ್ತವ್ಯಕ್ಕೆ ಹಾಜರ್‌..

ACP Chandan kumar Pratap simha : ಎಸಿಪಿ ಚಂದನ್‌ ಕುಮಾರ್‌ ವಿರುದ್ದ ಆರೋಪ ಒಂದು ಕೇಳಿ ಬಂದಿದೆ. ಇತ್ತೀಚೆಗೆ ನಾಯಿ ಮಾಂಸ ಬರ್ತಾ ಇದೆ ಅಂತ ಪುನೀತ್ ಕೆರೆಹಳ್ಳಿ ರೈಲ್ವೆ ಸ್ಟೇಷನ್ ಬಳಿ ಪ್ರತಿಭಟನೆ ಮಾಡಿದ್ದ. ಈ ವೇಳೆ ಬಂಧನ ಮಾಡಿದ್ದು ಎಸಿಪಿ  ನಗ್ನ ಮಾಡಿ ಹಲ್ಲೆ ಮಾಡಿದ್ದು, ಅಲ್ಲದೆ ವಿಡಿಯೋ ಮಾಡ್ಕೊಂಡು ವೈರಲ್ ಮಾಡ್ತೀನಿ ಅಂತ ಹೇಳಿದ್ರು ಎಂದು ಕೆರೆಹಳ್ಳಿನೆ ಆರೋಪಿ ಮಾಡಿದ್ದ..

Written by - VISHWANATH HARIHARA | Edited by - Krishna N K | Last Updated : Jul 31, 2024, 09:40 PM IST
    • ಪ್ರತಾಪ್ ಸಿಂಹ ಪೋಸ್ಟ್ ಗೆ ಟಕ್ಕರ್ ಕೊಟ್ಟ ಎಸಿಪಿ ಚಂದನ್ ಕುಮಾರ್
    • ಚಾಲೆಂಜ್ ಸ್ವೀಕರಿಸಿ ರಜೆಯಲ್ಲಿದ್ರೂ ಕೆಲಸಕ್ಕೆ ಹಾಜರಾದ ಎಸಿಪಿ ಚಂದನ್‌
    • ಎಸಿಪಿ ವಿರುದ್ದ ಠಾಣೆ ಮುಂದೆ ಹಿಂದೂ ಕಾರ್ಯಕರ್ತರ ಪ್ರತಿಭಟನೆ
ಪ್ರತಾಪ್ ಸಿಂಹ ಚಾಲೆಂಜ್‌ಗೆ ಎಸಿಪಿ ಚಂದನ್‌ ಟಕ್ಕರ್‌..! ರಜೆ ಇದ್ರೂ ಕರ್ತವ್ಯಕ್ಕೆ ಹಾಜರ್‌.. title=
ACP Chandan

ಬೆಂಗಳೂರು : ಇತ್ತೀಚೆಗೆ ರೈಲಿನಲ್ಲಿ ನಾಯಿ ಮಾಂಸ ಬರ್ತಾ ಇದೆ ಅಂತ ಪುನೀತ್ ಕೆರೆಹಳ್ಳಿ ರೈಲ್ವೆ ಸ್ಟೇಷನ್ ಬಳಿ ಹೋಗಿ ಪ್ರತಿಭಟನೆ ಮಾಡಿ ಅರೆಸ್ಟ್ ಆಗಿದ್ದ. ಅವತ್ತು ರೌಂಡ್ಸ್ ನಲ್ಲಿದ್ದ ಎಸಿಪಿ ಚಂದನ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿನ ನಗ್ನ ಮಾಡಿ ಹಲ್ಲೆ ಮಾಡಿದ್ದಾರೆ ಅಂತ ಆರೋಪ‌ ಮಾಡಿದ್ದ. ಇದೇ ಆರೋಪದಿಂದ ಪ್ರತಾಪ್ ಸಿಂಹ ಎಸಿಪಿಗೆ ನಿಮ್ಮ ಕಚೇರಿಗೆ ಬರ್ತಾ ಇದ್ದೀನಿ ನೀವು ಇರಬೇಕು ಅಂತಾ ಚಾಲೆಂಜ್‌ ಹಾಕಿದ್ದರು. ಸದ್ಯ ಚಾಲೆಂಜ್ ಸ್ವೀಕರಿಸಿದ ಎಸಿಪಿ ರಜೆಯಲ್ಲಿದ್ರೂ ಕೆಲಸಕ್ಕೆ ಹಾಜರಾಗಿ ಟಕ್ಕರ್ ನೀಡಿದ್ದಾರೆ.

ಎಸಿಪಿ ಚಂದನ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೀರೋ ಆಗಿದ್ದವರು. ಯಾಕಂದ್ರೆ ನಟ ದರ್ಶನ್‌ನ ಇದೇ ಎಸಿಪಿ ಚಂದನ್ ಅರೆಸ್ಟ್ ಮಾಡಿದ್ರು. ಈ ಎಸಿಪಿ ವಿರುದ್ದ ಈಗ ಒಂದು ಆರೋಪ ಬಂದಿದೆ. ಇತ್ತೀಚೆಗೆ ನಾಯಿ ಮಾಂಸ ಬರ್ತಾ ಇದೆ ಅಂತ ಪುನೀತ್ ಕೆರೆಹಳ್ಳಿ ರೈಲ್ವೆ ಸ್ಟೇಷನ್ ಬಳಿ ಪ್ರತಿಭಟನೆ ಮಾಡಿದ್ದ. ಈ ವೇಳೆ ಬಂಧನ ಮಾಡಿದ್ದು ಎಸಿಪಿ ಚಂದನ್ ನಗ್ನ ಮಾಡಿ ಹಲ್ಲೆ ಮಾಡಿದ್ದು, ಅಷ್ಟೇ ಅಲ್ಲದೆ ವಿಡಿಯೋ ಮಾಡ್ಕೊಂಡು ವೈರಲ್ ಮಾಡ್ತೀನಿ ಅಂದ್ರು ಅಂತ ಖುದ್ದು ಕೆರೆಹಳ್ಳಿನೆ ಹೇಳಿದ್ದ.

ಇದನ್ನೂ ಓದಿ:ಜೋಳಿಗೆ ಮೂಲಕ ‘ದುಶ್ಚಟಗಳ ಭಿಕ್ಷೆ' ಪಡೆದ ಡಾ.ಮಹಾಂತ ಶಿವಯೋಗಿಗಳು

ಇದ್ರಿಂದ ಆಕ್ರೋಶಗೊಂಡ ಮಾಜಿ ಸಂಸದ ಪ್ರತಾಪ್ ಸಿಂಹ ನಿನ್ನೆ ಎಕ್ಸ್ ನಲ್ಲಿ ಎಸಿಪಿಗೆ ಒಂದು ಪೋಸ್ಟ್ ಹಾಕಿದ್ರು. ನಾನು ನಿಮ್ಮ ಕಚೇರಿಗೆ ಬರ್ತಾ ಇದ್ದೀನಿ ನೀವು ಇರಬೇಕು ಅಂದಿದ್ದ. ಇದನ್ನ ಚಾಲೆಂಜ್ ಆಗಿ ತಗೊಂಡ ಎಸಿಪಿ ಚಂದನ್ ರಜೆ ಇದ್ದರು ಇವತ್ತು ಕೆಲಸಕ್ಕೆ ಹಾಜರಾಗಿದ್ರು. ಇತ್ತ ಎಸಿಪಿ ಕಚೇರಿಗೆ ಬಂದಿದ್ದೇ ಮಾಜಿ ಸಂಸದ ಪ್ರತಾಪ್ ಸಿಂಹ, ಬೆಳ್ತಂಗಡಿ‌ ಶಾಸಕ ಹರೀಶ್ ಪೂಂಜಾ, ಪುನೀತ್ ಕೆರೆಹಳ್ಳಿ ಸೇರಿ ನೂರಾರು‌ ಹಿಂದೂ ಕಾರ್ಯಕರ್ತರು ಬಸವೇಶ್ವರ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ರು. 

ಎಸಿಪಿ ವಿರುದ್ದ ಘೋಷಣೆಗಳನ್ನು ಕೂಗಿದ್ರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದರು. ಇದಾದ ಬಳಿಕ ಡಿಸಿಪಿ ಶೇಖರ್‌ಗೆ ದೂರು ನೀಡಿದ್ದು, ದೂರಿನಲ್ಲಿ ಎಸಿಪಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜೊತೆಗೆ ಅಬ್ದುಲ್ ರಜಾಕ್ ವಿರುದ್ದ ಯಾಕೆ ಎಫ್‌ಐಆರ್ ಮಾಡಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ದೂರು ಸ್ವೀಕರಿಸಿದ ಡಿಸಿಪಿ ಪರಿಶೀಲನೆ ಮಾಡೋದಾಗಿ ಹೇಳಿದ್ದಾರೆ.

ಇದನ್ನೂ ಓದಿ:ಭದ್ರಾವತಿಯಲ್ಲಿ ಭದ್ರೆಯ ರೌದ್ರಾವತಾರ : ಪ್ರವಾಹ ಸೃಷ್ಟಿ, ಮನೆಗಳಿಗೆ ನುಗ್ಗಿದ ನೀರು

ಇನ್ನೂ ಇದೇ ವೇಳೆ ಮಾತನಾಡಿದ ಪುನೀತ್ ಕರೆಹಳ್ಳಿ ಎಸಿಪಿ ಚಂದನ್ ಮೇಲೆ ಹಲ್ಲೆ ಆರೋಪ ಮಾಡಿದ್ರು. ಠಾಣೆಗೆ ನನ್ನ ಎಳೆದೋಯ್ದು ಒಂದು ಕೋಣೆಯಲ್ಲಿ ಹಾಕಿದ್ರು. ಆಗ ಎಸಿಪಿ ಚಂದನ್ ಬಂದು ನನ್ನ ಯಾಕ್ ಮಲಗಿಸಿದ್ದಾರ ಅಂತಾ ಸಿಬ್ಬಂದಿನ‌ ಕೇಳಿ ಲಾಠಿಯಿಂದ ಹಲ್ಲೆ ನಡೆಸಿದ್ರು. ನನ್ನ ಬಟ್ಟೆ ಬಿಚ್ಚಿಸಿ ಸಂಪೂರ್ಣವಾಗಿ ಬೆತ್ತಲು‌ಮಾಡಿ ಈ ವಿಚಾರವನ್ನ ಮಾಧ್ಯಮದ ಮುಂದೆ ಹೇಳಿಕೊಂಡ್ರೆ ನಿನ್ನ ಮರ್ಯಾದೆ ಹೋಗುತ್ತೆ ಅಂತ ಧಮ್ಕಿ ಹಾಕಿದ್ರು. ಇದೇ ಕಾರಣಕ್ಕೆ ನಾನು ಕಮಿಷನರ್ ಗೆ ದೂರು ನೀಡಿದ್ದೇನೆ ಎಂದಿದ್ದಾರೆ..

ಒಟ್ಟಿನಲ್ಲಿ ಇವತ್ತು ಬಸವೇಶ್ವರ ನಗರ ಠಾಣೆ ಬಳಿ ಹೈಡ್ರಾಮಾನೇ ನಡೀತು. ‌ಇತ್ತ ಎಸಿಪಿ ಕೂಡ ಕರ್ತವ್ಯಕ್ಕೆ ಹಾಜರಾಗಿದ್ದು ಪ್ರತಾಪ್ ಸಿಂಹ ಪೋಸ್ಟ್‌ಗೆ ಟಕ್ಕರ್ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News