ಮೈಸೂರು: ರಾಜಮಾತೆ ಪ್ರಮೋದಾ ದೇವಿಯವರಿಗೆ ಮಾತೃವಿಯೋಗವಾಗಿದ್ದು, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟ ಚಿನ್ನಮ್ಮಣ್ಣಿ(98) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಕಳೆದ ಕೆಲ ದಿನಗಳಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಚಿನ್ನಮ್ಮಣ್ಣಿಯವರು ವಿಜಯದಶಮಿ ದಿನದಂದೇ ಅಸುನೀಗಿದ್ದಾರೆ.
ಇದರಿಂದಾಗಿ ದಸರಾ ಸಂಭ್ರಮದಲ್ಲಿರುವ ಮೈಸೂರು ಅರಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ನಿಧನದಿಂದಾಗಿ ಖಾಸಗಿ ದರ್ಬಾರ್ ಸಂಭ್ರಮದ ಮೇಲೆ ಸೂತಕದ ನೆರಳು ಬೀಳುವ ಸಾಧ್ಯತೆ ಇದೇ ಎನ್ನಲಾಗಿದೆ.
ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರ ಮಾತೃಶ್ರೀ ಪುಟ್ಟಚಿನ್ನಮ್ಮಣ್ಣಿ ನಿಧನದ ಸುದ್ದಿ ಕೇಳಿ ದುಃಖ ಉಂಟಾಗಿದೆ. ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ತಾಯಿ ಚಾಮುಂಡೇಶ್ವರಿ ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
Iam deeply saddened to hear about the death of Smt. Putta Chinnammani, mother of Pramoda Devi Wadiyar, Maharani of Mysuru Royal Family.
May her soul rest in peace.
May goddess Chamundeshwari give all strength to Pramoda Devi and her family to bear the loss. #RIP
— CM of Karnataka (@CMofKarnataka) October 19, 2018