ಪಬ್ಲಿಸಿಟಿ ಆಸೆಗೆ ಬಿದ್ದು ಮೂಕಸನ್ನೆಯನ್ನ ಅವಹೇಳನ ಮಾಡಿದ್ದ ರೆಡಿಯೋ ಜಾಕಿ ಸೇರಿ ಇಬ್ಬರ ಬಂಧನ

ರೋಹನ್ ಕಾರಿಯಪ್ಪ ಮತ್ತು ಶರವಣ ಭಟ್ಟಾಚಾರ್ಯ. ಮೂಗ ಸನ್ನೆಯನ್ನ ತುಂಬಾ ಕೀಳು ಮಟ್ಟದಲ್ಲಿ ಅವಹೇಳನ ಮಾಡಿ ರೀಲ್ಸ್ ಮಾಡಿದ್ರು. ಹಿಂದಿಯನ್ನ ರೋಹನ್ ರಾಜಕೀಯಬಗ್ಗೆ ಮಾತನಾಡಿದ್ರೆ ಶರವಣ ಅದನ್ನ ಮೂಕ ಸನ್ನೆಯಲ್ಲಿ ಅವಹೇಳನ ಮಾಡಿದ್ದ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Jul 26, 2024, 06:59 PM IST
    • ಪ್ರಚಾರ ಪಡ್ಕೋಬೇಕು ಅಂತ ಏನ್ ಬೇಕಾದ್ರು ಮಾಡ್ತಾರೆ.
    • ವೈರಲ್ ಆಗೋಕೆ ಇರೋ ಒಂದೇ ಒಂದು ವೇದಿಕೆ ಅಂದ್ರೆ ಅದು ಇನ್ಸ್ಟಾಗ್ರಾಮ್.
    • ಜನಪ್ರಿಯತೆ ಗಳಿಸೋಕೆ ಒಂದು ಸಮುದಾಯವನ್ನ ಅವಹೇಳನ
ಪಬ್ಲಿಸಿಟಿ ಆಸೆಗೆ ಬಿದ್ದು ಮೂಕಸನ್ನೆಯನ್ನ ಅವಹೇಳನ ಮಾಡಿದ್ದ ರೆಡಿಯೋ ಜಾಕಿ ಸೇರಿ ಇಬ್ಬರ ಬಂಧನ title=

ಬೆಂಗಳೂರು : ಇತ್ತೀಚಿನ ಯುವ ಪೀಳಿಗ ರಾತ್ರೋ ರಾತ್ರಿ ಸೆಲೆಬ್ರಿಟಿ ಆಗ್ಬೇಕು.. ಪ್ರಚಾರ ಪಡ್ಕೋಬೇಕು ಅಂತ ಏನ್ ಬೇಕಾದ್ರು ಮಾಡ್ತಾರೆ. ಅಂದಹಾಗೆ ಇವ್ರಿಗೆಲ್ಲ ವೈರಲ್ ಆಗೋಕೆ ಇರೋ ಒಂದೇ ಒಂದು ವೇದಿಕೆ ಅಂದ್ರೆ ಅದು ಇನ್ಸ್ಟಾಗ್ರಾಮ್. ಇನ್ನೂ ಇನ್ಸ್ಟಾಗ್ರಾಮ್ ಅವರವರ ವೈಯಕ್ತಿಕ ಏನ್ ಬೇಕಾದರು ಮಾಡಿಕೊಳ್ಳಲಿ ಅದಕ್ಕೆ ಯಾರ ತಂಟೆ ತಗರಾರು ಇಲ್ಲ. ಆದ್ರೆ ತಮ್ಮ ಬೇಳೆ ಬೇಯಿಸಿಕೊಳ್ಳೋಕೆ, ತಾವು ವೈರಲ್ ಆಗಿ ಜನಪ್ರಿಯತೆ ಗಳಿಸೋಕೆ ಒಂದು ಸಮುದಾಯವನ್ನ ಅವಹೇಳನ ಮಾಡಿದ್ರೆ ಹೇಗೆ ಅಲ್ವಾ... 

ಈ ರೀತಿ ಅವಹೇಳನ ಮಾಡಿರೋದು ಯಾರೋ ಅವಿದ್ಯಾವಂತರಲ್ಲ. ಬದಲಿಗೆ ರೇಡಿಯೋದಲ್ಲಿ ಕೆಲಸ ಮಾಡೋ ವಿದ್ಯಾವಂತ ಯುವಕ ಮತ್ತು ಆತನ ಸ್ನೇಹಿತ. ರಾಜಕಾರಣಿಗಳನ್ನ ಅಣಕಿಸೋ ಬರದಲ್ಲಿ ಮಾತು ಬಾರದ ಮೂಗರು ಬಳಸೋ ಸನ್ನೆಯನ್ನ ಇವ್ರು ತಮ್ಮ ಜನಪ್ರಿಯತೆಗೆ ಬಳಸಿಕೊಂಡು ಜೈಲು ಸೇರಿದ್ದಾರೆ. 

ಇದನ್ನೂ ಓದಿ:ರಾಜ್ಯದ 1,199 ಗ್ರಾಮ ಪಂಚಾಯತಿಗಳಲ್ಲಿ ಕೊಳಚೆ ನೀರಿಗೆ ಮುಕ್ತಿ ನೀಡುವುದಕ್ಕಾಗಿ ಪೈಲಟ್ ಯೋಜನೆ ಜಾರಿ!

ಅಂದಹಾಗೆ ಇವ್ರ ಹೆಸ್ರು. ರೋಹನ್ ಕಾರಿಯಪ್ಪ ಮತ್ತು ಶರವಣ ಭಟ್ಟಾಚಾರ್ಯ. ಮೂಗ ಸನ್ನೆಯನ್ನ ತುಂಬಾ ಕೀಳು ಮಟ್ಟದಲ್ಲಿ ಅವಹೇಳನ ಮಾಡಿ ರೀಲ್ಸ್ ಮಾಡಿದ್ರು. ಹಿಂದಿಯನ್ನ ರೋಹನ್ ರಾಜಕೀಯಬಗ್ಗೆ ಮಾತನಾಡಿದ್ರೆ ಶರವಣ ಅದನ್ನ ಮೂಕ ಸನ್ನೆಯಲ್ಲಿ ಅವಹೇಳನ ಮಾಡಿದ್ದ. ಇನ್ನೂ ದುರಂತ ಅಂದ್ರೆ ಈ ಶರವಣ ಮೂಕ ಸನ್ನೆಯನ್ನ ಕಲಿತವನಾಗಿದ್ದಾನೆ. 

ತಾನು ಮಾಡ್ತಿರೋದು ತಪ್ಪು ಅಂತ ಗೊತ್ತಿದ್ರು ಈ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ‌ಹಲವು ಸಂಘಟನೆಗಳು ದೆಹಲಿಯಲ್ಲಿ ದೂರು ನೀಡಿದ್ರು. ಇವ್ರು ಬೆಂಗಳೂರಿನವರು ಅಂತ ಗೊತ್ತಾಗಿ ಕಮಿಷನರ್ ಗೆ ದೂರು ಸಲ್ಲಿಲಾಗುತ್ತು. ಈ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. 

ಇದನ್ನೂ ಓದಿ:ಬೆಳೆ ಸಮೀಕ್ಷೆ’ ರೈತರಿಗೆ ಒಂದು ಸುವರ್ಣಾವಕಾಶ

ಇತ್ತ ಇವ್ರ ಮೇಲೆ ವಿಕಲಾಚೇತನರು ಸಿಡಿದೇಳ್ತಿದ್ದಂತೆ ವಿಡಿಯೋ ಡಿಲಿಟ್ ಮಾಡಿ ಅಪಾಲಜಿ ವಿಡಿಯೋ ಕೂಡ ಹಾಕಿದ್ರಂತೆ. ಅದೇನೆ ಇರ್ಲಿ ಮಾತು ಬಾರದವರ ಭಾಷೆಯನ್ನ ಗೇಲಿ ಮಾಡಿ ಅದನ್ನ ಅಪಹಾಸ್ಯ ಮಾಡೋದು ಮೂರ್ಖತನವೇ ಸರಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News