ನಾಳೆ ಬೆಂಗಳೂರಿಗೆ ನಮೋ : ಮಧ್ಯರಾತ್ರಿಯಿಂದಲೇ ಪೊಲೀಸ್‌ ಸರ್ಪಗಾವಲು

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಮಧ್ಯರಾತ್ರಿ 2 ಗಂಟೆಯಿಂದಲೇ ನಗರದಲ್ಲಿ ಪೊಲೀಸ್‌ ಬಂದೋಬಸ್ತ್ ಇರಲಿದೆ. ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೆ ಇಸ್ರೋ ತಂಡವನ್ನು ಭೇಟಿ ಮಾಡಿ ಪ್ರಧಾನಿ ಶುಭ ಕೋರಲಿದ್ದಾರೆ.

Written by - VISHWANATH HARIHARA | Edited by - Krishna N K | Last Updated : Aug 25, 2023, 05:36 PM IST
  • ನಾಳೆ ಸಿಲಿಕಾನ್‌ ಸಿಟಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ.
  • ಈ ಹಿನ್ನೆಲೆ ಮಧ್ಯರಾತ್ರಿ 2 ಗಂಟೆಯಿಂದಲೇ ನಗರದಲ್ಲಿ ಪೊಲೀಸ್‌ ಬಂದೋಬಸ್ತ್ ಇರಲಿದೆ.
  • ಹೆಚ್ಎಎಲ್‌ನಿಂದ ಪೀಣ್ಯ ಇಸ್ರೋ ಕಚೇರಿವರೆಗೂ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ.
ನಾಳೆ ಬೆಂಗಳೂರಿಗೆ ನಮೋ : ಮಧ್ಯರಾತ್ರಿಯಿಂದಲೇ ಪೊಲೀಸ್‌ ಸರ್ಪಗಾವಲು title=

ಬೆಂಗಳೂರು : ನಾಳೆ ಸಿಲಿಕಾನ್‌ ಸಿಟಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಸೂರ್ಯೋದಯಕ್ಕೂ ಮುನ್ನವೇ ನಮೋ ಆಗಮಿಸಲಿದ್ದು ಈ ಹಿನ್ನೆಲೆ ಮಧ್ಯರಾತ್ರಿ 2 ಗಂಟೆಯಿಂದಲೇ ನಗರದಲ್ಲಿ ಪೊಲೀಸ್‌ ಬಂದೋಬಸ್ತ್ ಇರಲಿದೆ. ಹೆಚ್ಎಎಲ್‌ನಿಂದ ಪೀಣ್ಯ ಇಸ್ರೋ ಕಚೇರಿವರೆಗೂ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ. 

ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್ ನೇತೃತ್ವದಲ್ಲಿ ಹೆಚ್ಚುವರಿ ಆಯುಕ್ತರಾದ ರಮನ್ ಗುಪ್ತಾ ಹಾಗೂ ಸತೀಶ್ ಕುಮಾರ್ ಸೇರಿ ಎಲ್ಲಾ ಡಿಸಿಪಿಗಳು ಬಂದೋಬಸ್ತ್‌ನಲ್ಲಿ ಇರಲಿದ್ದಾರೆ. 50 ಎಸಿಪಿ, 100ಕ್ಕೂ ಹೆಚ್ಚು ಇನ್ಸ್‌ಪೆಕ್ಟರ್‌ಗಳು, 1500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಇದರಲ್ಲಿ ಸಂಚಾರ ಪೊಲೀಸರು ಕೂಡ ಬಂದೋಬಸ್ತ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಸಿವಿಲ್, ಸಂಚಾರಿ, ಕೆಎಸ್ಆರ್‌ಪಿ ಪೊಲೀಸರ ಜೊತೆಗೆ ಡಿ ಸ್ವಾಟ್, ಕ್ವಿಕ್ ರೆಸ್ಪಾನ್ಸ್ ಟೀಮ್ ಕೂಡ ಭದ್ರತೆಯಲ್ಲಿರಲಿದ್ದಾರೆ. 

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದಲ್ಲಿ ಮತ್ತೆ ಮುನ್ನೆಲೆಗೆ ಬಂದ ನೈಸ್ ಅಕ್ರಮ

ಹೆಚ್ಎಎಲ್ ಏರ್ಪೋರ್ಟ್ ನಲ್ಲಿ ವೈಟ್ ಫೀಲ್ಡ್‌ ಡಿಸಿಪಿ ಗಿರೀಶ್‌ ಹಾಗೂ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ್‌ ಬಂದೋಬಸ್ತ್ ನೇತೃತ್ವ ವಹಿಸಿದ್ರೆ. ‌ಪೀಣ್ಯದಲ್ಲಿ ಉತ್ತರ ವಿಭಾಗ ಡಿಸಿಪಿ ಶಿವಪ್ರಕಾಶ್‌ ಹಾಗೂ ಪಶ್ಚಿಮ ವಿಭಾಗ ಲಕ್ಷ್ಮಣ್‌ ನಿಂಬರಗಿ ಬಂದೋಬಸ್ತ್ ನೇತೃತ್ವ ವಹಿಸಲಿದ್ದಾರೆ.

ಇನ್ನೂ ರಸ್ತೆ ಯುದ್ದಕ್ಕೂ ಪ್ರತಿ ಎರಡು ಕಿಲೋ ಮೀಟರ್ ಗೆ ಒಬ್ಬರಂತೆ ಓರ್ವ ಡಿಸಿಪಿ ನೇತೃತ್ವದಲ್ಲಿ ಭದ್ರತೆ ಮಾಡಿಕೊಳ್ಳಲಾಗಿದೆ. ಮಧ್ಯರಾತ್ರಿ ಒಂದು ಗಂಟೆಯಿಂದಲೇ ಭದ್ರತೆಗೆ  ನಿಯೋಜನೆಗೊಂಡಿರೋ ಅಧಿಕಾರಿ ಸಿಬ್ಬಂದಿ ತಮಗೆ ನಿಯೋಜಿಸಿರುವ ಜಾಗದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News