ತುಮಕೂರು: ರಾಮಕೃಷ್ಣ ವಿವೇಕಾನಂದ ಆಶ್ರಮದ ರಜತಯಾನ ಬೆಳ್ಳಿ ಹಬ್ಬದ ಸಮಾರೋಪ ಕಾರ್ಯಕ್ರಮದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಯುವಶಕ್ತಿ ಆಸ್ಫೋಟನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವೀಡಿಯೊ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು.
ಸುಮಾರು 20 ನಿಮಿಷ ಭಾಷಣ ಮಾಡಿದರು. ಭಾಷಣದಲ್ಲಿ ಯುವಕರು ಮತ್ತು ರಾಮಕೃಷ್ಣ ವಿವೇಕಾನಂದ ಆಶ್ರಮದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕದ ಆಧ್ಯಾತ್ಮಿಕ ಮತ್ತು ಯುವಜನರ ಉತ್ಸವಗಳಲ್ಲಿನ ವಿಲೀನತೆ ಒಂದು ಉದಯೋನ್ಮುಖ ಮಾದರಿ. ಮುಂಬರುವ ದಿನಗಳಲ್ಲಿ ಇದು ದೇಶದಾದ್ಯಂತ ಹರಡಲಿದೆ. ದೇಶ ಸ್ವತಂತ್ರವಾದ ಹಲವು ದಶಕಗಳ ನಂತರ ದೇಶದಾದ್ಯಂತ ಜನರಲ್ಲಿ ಬದ್ಧತೆಯ ಉತ್ಸಾಹವನ್ನು ನಾವು ಕಾಣುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಯುವಕರ ಕೌಶಲ್ಯ ಅಭಿವೃದ್ಧಿಗಾಗಿ ಪ್ರಸ್ತುತ ಕೇಂದ್ರ ಸರ್ಕಾರವು ಹೊಸ ವಿಧಾನವನ್ನು ಅನುಸರಿಸುತ್ತಿದೆ, ಜೊತೆಗೆ ಅವರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಮತ್ತು ಸಾಲ ನೀಡುವ ವ್ಯವಸ್ಥೆಯನ್ನು ಕಳೆದ ನಾಲ್ಕು ವರ್ಷಗಳಿಂದಲೂ ನೀಡುತ್ತಿದೆ. ಪ್ರತಿ ಜಿಲ್ಲೆಯಲ್ಲೂ 'ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು' ತೆರೆಯಲಾಗುತ್ತಿದೆ. ಕಂಪನಿಗಳ ಅವಶ್ಯಕತೆಗೆ ಅನುಗುಣವಾಗಿ ಯುವಕರಿಗೆ ಲಘು ಮತ್ತು ದೀರ್ಘಕಾಲೀನ ತರಬೇತಿಯನ್ನು ಸಹ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
Swami Vivekananda was a firm believer in the power of the youth. Together, we must fulfil his dreams and usher an era of development that is powered by the skills and strengths of young India. https://t.co/u6r6jF8dvo
— Narendra Modi (@narendramodi) March 4, 2018
ಇದಕ್ಕೂ ಮುನ್ನ ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ ಸಿದ್ಧಗಂಗಾ ಸ್ಮಾಮೀಜಿ ಅವರ ಶಿಕ್ಷಣ ಸೇವೆಯನ್ನು ಶ್ಲಾಘಿಸಿದರು. ರಾಮಕೃಷ್ಣ ಪರಮಹಂಸರು ಹಾಗೂ ವಿವೇಕಾನಂದರ ದಾರಿಯಲ್ಲಿ ಸಿದ್ಧಗಂಗಾ ಸ್ವಾಮೀಜಿಯವರು ರಾಷ್ಟ್ರನಿರ್ಮಾಣ ಕೆಲಸದಲ್ಲಿ ತೊಡಗಿದ್ದಾರೆ ಎಂದರು.