/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಕೊಪ್ಪಳ : ಕಲ್ಯಾಣ ಕರ್ನಾಟಕ ಭಾಗ ಹಿಂದಿಗಿಂತಲೂ ಈಗ ಹೆಚ್ಚು ಹಸಿರಾಗಿದ್ದು, ಫಲವತ್ತಾಗಿದೆ. ಈ ಭಾಗದ ಜನ ತಾವು ಹಿಂದುಳಿದವರೆಂಬ ಕೀಳರಿಮೆ ಬಿಡಬೇಕು ಎಂದು ಕೊಪ್ಪಳ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ (BC Patil) ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ (Kalyana Karnataka) ಉತ್ಸವ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಬಿ.ಸಿ. ಪಾಟೀಲ್, ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಎರಡುಬಾರಿ ಧ್ವಜಾರೋಹಣ ನೆರವೇರಿಸುತ್ತವೆ. ಆದರೆ ಈ ಭಾಗದಲ್ಲಿ ವರ್ಷಕ್ಕೆ ಮೂರು ಬಾರಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಬಜೆಟ್‌ನಲ್ಲಿ 1500 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. 

ನಾನು ರೈತರಿಗಾಗಿ ಜೈಲಿಗೆ ಹೋಗಿ ಬಂದಿದ್ದೇನೆ: ಕೃಷಿ ಸಚಿವ ಬಿ.ಸಿ. ಪಾಟೀಲ್

ಕೋವಿಡ್‌ನಿಂದಾಗಿ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿಸಲಾಗದಿದ್ದರೂ ಆತ್ಮಾಭಿಮಾನದಿಂದ ಸರ್ಕಾರ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಗಬ್ಬಕ್ಕೆ ಕಾರ್ಯಕ್ರಮದಲ್ಲಿ ಶುಭಕೋರಿದ ಬಿ.ಸಿ. ಪಾಟೀಲ್, ಕೋವಿಡ್ ಸಂದರ್ಭದಲ್ಲಿ ಪ್ರಧಾನಿಗಳು 1 ಲಕ್ಷ ಕೋಟಿ ರೂಪಾಯಿಗಳನ್ನು  ಕೃಷಿ ಮೂಲಭೂತ ಸೌಕರ್ತಗಳಿಗಾಗಿ ಮೀಸಲಿಟ್ಟಿದ್ದು, ಈ ಪೈಕಿ 10 ಸಾವಿರ ಕೋಟಿ ರೂಪಾಯಿಗಳನ್ನು ಆಹಾರ ಸಂಸ್ಕರಣಾ ಘಟಕಗಳಿಗಾಗಿ ಮೀಸಲಿಡುವ ಮೂಲಕ ರೈತರಿಗೆ ಬೆನ್ನೆಲೆಬಾಗಿ ನಿಂತಿದ್ದಾರೆ ಎಂದರು. 

ಹೆಚ್.ಡಿ.ಕುಮಾರಸ್ವಾಮಿ ಊಸರವಳ್ಳಿಯಂತೆ ಆಗಾಗ ಬಣ್ಣಬದಲಾಯಿಸುತ್ತಾರೆ: ಬಿ.ಸಿ. ಪಾಟೀಲ್

ಕೋವಿಡ್ ಹೊಡೆತದ ನಡುವೆಯೂ ಕೃಷಿ ಕ್ಷೇತ್ರ ಚೇತರಿಕೆ ಕಂಡಿರುವುದು ಸಮಾಧಾನ ತಂದಿದೆ‌. ಕೃಷಿಕರು ತಮ್ಮ ರಂಗದಲ್ಲಿ ಹೊಸಹೊಸ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಗುಲ್ಬರ್ಗಾದಲ್ಲಿನ ಕೃಷಿವಿಜ್ಞಾನ ಕೇಂದ್ರದಲ್ಲಿ ನಡೆದಂತಹ  ವಸ್ತುಪ್ರದರ್ಶನದಲ್ಲಿ ಒಬ್ಬ ಪಪ್ಪಾಯಿ ಬೆಳೆಯುವ ರೈತ ತನ್ನ ಒಂದು ಎಕರೆ ಜಮೀನಿನಲ್ಲಿ 4 ಲಕ್ಷ ರೂಪಾಯಿ ಮೌಲ್ಯದ ಫಸಲು ಬೆಳೆದು ಮಾದರಿಯಾಗಿದ್ದಾನೆ. ರೈತರೇ ರೈತರಿಗೆ (Farmers) ಸ್ಫೂರ್ತಿಯಾಗಬೇಕು. ತಂತ್ರಜ್ಞಾನ ಆಧುನಿಕತೆಯ ಬಳಕೆ ಬಗ್ಗೆ ಫಲಾನುಭವಿ ರೈತರೇ ಇತರೆ ರೈತರಿಗೆ ಪ್ರೇರಣೆಯಾಗಬೇಕು ಎಂದು ಬಿ.ಸಿ. ಪಾಟೀಲ್ ಕರೆ ನೀಡಿದರು.

ಶಾಸಕ ರಾಘವೇಂದ್ರ ಹಿಟ್ನಾಳ್, ಜಿ.ಪಂ. ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ಜಿಲ್ಲಾಧಿಕಾರಿ ವಿಕಾಸ್, ಸಿಇಓ ರಘುನಂದನ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.
 

Section: 
English Title: 
People of welfare Karnataka get back from inferiority status: BC Patil
News Source: 
Home Title: 

ಕಲ್ಯಾಣ ಕರ್ನಾಟಕ ಭಾಗದ ಜನ‌ ಹಿಂದುಳಿದವರೆಂಬ ಕೀಳರಿಮೆಯಿಂದ ಹೊರಬರಲಿ: ಬಿ.ಸಿ.ಪಾಟೀಲ್

ಕಲ್ಯಾಣ ಕರ್ನಾಟಕ ಭಾಗದ ಜನ‌ ಹಿಂದುಳಿದವರೆಂಬ ಕೀಳರಿಮೆಯಿಂದ ಹೊರಬರಲಿ: ಬಿ.ಸಿ.ಪಾಟೀಲ್
Caption: 
File Image
Yes
Is Blog?: 
No
Tags: 
Facebook Instant Article: 
Yes
Highlights: 

ಕೋವಿಡ್‌ನಿಂದಾಗಿ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿಸಲಾಗದಿದ್ದರೂ ಆತ್ಮಾಭಿಮಾನದಿಂದ ಸರ್ಕಾರ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸುತ್ತಿದೆ- ಬಿ.ಸಿ. ಪಾಟೀಲ್ 

ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಎರಡುಬಾರಿ ಧ್ವಜಾರೋಹಣ ನೆರವೇರಿಸುತ್ತವೆ.

ಆದರೆ ಈ ಭಾಗದಲ್ಲಿ ವರ್ಷಕ್ಕೆ ಮೂರು ಬಾರಿ ಧ್ವಜಾರೋಹಣ ನೆರವೇರಿಸಲಾಗುತ್ತದೆ. 

Mobile Title: 
ಕಲ್ಯಾಣ ಕರ್ನಾಟಕ ಭಾಗದ ಜನ‌ ಹಿಂದುಳಿದವರೆಂಬ ಕೀಳರಿಮೆಯಿಂದ ಹೊರಬರಲಿ: ಬಿ.ಸಿ.ಪಾಟೀಲ್
Publish Later: 
Yes
Publish At: 
Thursday, September 17, 2020 - 12:17
Created By: 
Yashaswini V
Updated By: 
Yashaswini V