ಸೂಕ್ತ ಕಾರಣವಿಲ್ಲದೆ ಮೆಡಿಕಲ್ ಕ್ಲೈಮ್ ತಿರಸ್ಕರಿಸಿದ್ದ ಎಲ್ಐಸಿಗೆ ದಂಡ

ವೈದ್ಯಕೀಯ ಕ್ಲೇಮ್ ಅನ್ನು ತಿರಸ್ಕರಿಸಿದ ಎಲ್.ಐ.ಸಿ.ಗೆ ದಂಡ ಸೇರಿ ರೂ.1,31,216 ಗಳನ್ನು ಫಿರ್ಯಾದಿಗೆ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಆದೇಶ ಹೊರಡಿಸಿದೆ. 

Written by - Yashaswini V | Last Updated : Oct 12, 2022, 12:58 PM IST
  • ಶ್ರೀದೇವಿ ಅವರು ಅಕ್ಟೋಬರ್ 30, 2008 ರಂದು ಎಸ್.ಡಿ.ಎಮ್. ಆಸ್ಪತ್ರೆಯಲ್ಲಿ ದಾಖಲಾಗಿ ಕಿಬ್ಬೊಟ್ಟೆಯ ಸಮಸ್ಯೆಗಾಗಿ ರೂ.79,216/- ಭರಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರು.
  • ಆ ವೈದ್ಯಕೀಯ ವೆಚ್ಚವನ್ನು ತನಗೆ ಪಾವತಿಸುವಂತೆ ಎಲ್.ಐ.ಸಿ. ಆಫ್ ಇಂಡಿಯಾಗೆ ತಮ್ಮ ಪಾಲಿಸಿ ಆಧಾರದಲ್ಲಿ ಕ್ಲೇಮ್ ಅರ್ಜಿ ಸಲ್ಲಿಸಿದ್ದರು.
  • ಆದರೆ, ಎಲ್.ಐ.ಸಿ. ಯು ಪಾಲಿಸಿದಾರರ (ಶ್ರೀದೇವಿ) ಕ್ಲೇಮ್ ಅನ್ನು ಸೂಕ್ತ ಕಾರಣವಿಲ್ಲದೇ ತಿರಸ್ಕರಿಸಿತ್ತು.
ಸೂಕ್ತ ಕಾರಣವಿಲ್ಲದೆ ಮೆಡಿಕಲ್ ಕ್ಲೈಮ್ ತಿರಸ್ಕರಿಸಿದ್ದ ಎಲ್ಐಸಿಗೆ ದಂಡ title=
Penalty for LIC

ಧಾರವಾಡ: ಸ್ಥಳೀಯ ಎಂ.ಬಿ. ನಗರದ ನಿವಾಸಿಗಳಾದ ಪ್ರಮಥನಾಥ ಮತ್ತು ಶ್ರೀದೇವಿ ಪಾವಟೆ ಎಂಬ ದಂಪತಿಗಳು ತಾವು ಈ ಹಿಂದೆ ಅಕ್ಟೋಬರ್ 30, 2008 ರಂದು 10 ವರ್ಷದ ಅವಧಿಯ ಎಲ್.ಐ.ಸಿ. ಹೆಲ್ತ್ ಪ್ಲಸ್ ಪಾಲಸಿ (ವೈದ್ಯಕೀಯ ವಿಮೆ) ಖರೀದಿಸಿದ್ದರು.  ಶ್ರೀದೇವಿ ಅವರು ಅಕ್ಟೋಬರ್ 30, 2008 ರಂದು  ಎಸ್.ಡಿ.ಎಮ್. ಆಸ್ಪತ್ರೆಯಲ್ಲಿ ದಾಖಲಾಗಿ ಕಿಬ್ಬೊಟ್ಟೆಯ ಸಮಸ್ಯೆಗಾಗಿ ರೂ.79,216/- ಭರಿಸಿ ಶಸ್ತ್ರ ಚಿಕಿತ್ಸೆ ಪಡೆದಿದ್ದು, ಆ ವೈದ್ಯಕೀಯ ವೆಚ್ಚವನ್ನು ತನಗೆ ಪಾವತಿಸುವಂತೆ ಎಲ್.ಐ.ಸಿ. ಆಫ್ ಇಂಡಿಯಾಗೆ ತಮ್ಮ ಪಾಲಿಸಿ ಆಧಾರದಲ್ಲಿ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. 

ಇದನ್ನೂ ಓದಿ- ಇಂದಿನಿಂದ ರಸ್ತೆಗಿಳಿಯುವಂತಿಲ್ಲ ಓಲಾ ಊಬರ್ ಆಟೋ! ನಿಯಮ ಮೀರಿದರೆ ಬೀಳುವುದು ಐದು ಸಾವಿರ ರೂ. ದಂಡ
   
ಆದರೆ, ಎಲ್.ಐ.ಸಿ. ಯು ಪಾಲಿಸಿದಾರರ (ಶ್ರೀದೇವಿ)  ಕ್ಲೇಮ್ ಅನ್ನು ಸೂಕ್ತ ಕಾರಣವಿಲ್ಲದೇ ತಿರಸ್ಕರಿಸಿತ್ತು. ಈ ಕುರಿತಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದ ಪ್ರಮಥನಾಥ ಮತ್ತು ಶ್ರೀದೇವಿ ಪಾವಟೆ ದಂಪತಿಗಳು, ಎಲ್ಐಸಿ ಸೂಕ್ತ ಕಾರಣವಿಲ್ಲದೆ ತಮ್ಮ ಕ್ಲೈಮ್ ಅನ್ನು ತಿರಸ್ಕರಿ ಸೇವಾ ನ್ಯೂನ್ಯತೆ ಎಸಗಿದೆ ಎಂದು ಆರೊಪಿಸಿದ್ದರು.

ಇದನ್ನೂ ಓದಿ- Invest Karnataka: ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮದಿಂದ ಸಾವಿರಾರು ಉದ್ಯೋಗ ಸೃಷ್ಟಿ
   
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಈಶಪ್ಪ. ಕ. ಭೂತೆ ಹಾಗೂ ಸದಸ್ಯರಾದ ಶ್ರೀಮತಿ ವಿ.ಎ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು ಎಲ್.ಐ.ಸಿಯು  ದೂರುದಾರರು ಪಾಲಿಸಿ ಹೊಂದಿದ್ದರೂ, ಅವರಿಗೆ ಸರಿಯಾಗಿ ಸ್ಪಂದಿಸದೆ ಸೇವಾ ನ್ಯೂನ್ಯತೆ ಎಸಗಿದೆ ಎಂದು ಅಭಿಪ್ರಾಯಪಟ್ಟು ದೂರುದಾರರ ವೈದ್ಯಕೀಯ ವೆಚ್ಚ ರೂ.79216 ಗಳನ್ನು ಮತ್ತು ಅವರ ಕ್ಲೇಮ್ ತಿರಸ್ಕರಿಸಿದ ದಿನಾಂಕದಿಂದ ಹಣ ಸಂದಾಯ ಮಾಡುವವರೆಗೆ ಶೇ.8% ಬಡ್ಡಿ ಸಮೇತ ಕೊಡಬೇಕು ಹಾಗೂ ದೂರುದಾರರಿಗೆ ಆಗಿರುವ ಮಾನಸಿಕ ಹಿಂಸೆ, ಅನಾನುಕೂಲತೆಗಾಗಿ ರೂ.50 ಸಾವಿರಗಳ ಪರಿಹಾರದ ಜೊತೆಗೆ ಪ್ರಕರಣದ ಖರ್ಚು ಅಂತಾ ರೂ.10 ಸಾವಿರಗಳನ್ನು ಕೊಡುವಂತೆ ತೀರ್ಪು ನೀಡಿ ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News