ಮಾಜಿ ಸಚಿವ ಈಶ್ವರಪ್ಪ ನಿವಾಸಕ್ಕೆ ಪೇಜಾವರ ಶ್ರೀಗಳ ಭೇಟಿ

ಇತ್ತೀಚಿಗೆ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣದ ವಿಚಾರದಲ್ಲಿ ಕೇಳಿ ಆರೋಪ ಬಂದಿರುವ ಹಿನ್ನಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಎಸ್ ಈಶ್ವರಪ್ಪ ಅವರ ನಿವಾಸಕ್ಕೆ ಇಂದು ಪೇಜಾವರ ಶ್ರೀಗಳು ಭೇಟಿ ನೀಡಿ ಧೈರ್ಯವನ್ನು ತುಂಬಿದ್ದಾರೆ.

Written by - Zee Kannada News Desk | Last Updated : Apr 18, 2022, 07:23 PM IST
  • ಈ ಭೇಟಿಯ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಜಗದ್ಗುರುಗಳು ನಮ್ಮ ಮನೆಗೆ ಯಾವಾಗಲೂ ಕೂಡಾ ದೇವರ ರೂಪದಲ್ಲಿ ಬರುತ್ತಲೇ ಇರ್ತಾರೆ.
ಮಾಜಿ ಸಚಿವ ಈಶ್ವರಪ್ಪ ನಿವಾಸಕ್ಕೆ ಪೇಜಾವರ ಶ್ರೀಗಳ ಭೇಟಿ title=

ಶಿವಮೊಗ್ಗ: ಇತ್ತೀಚಿಗೆ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣದ ವಿಚಾರದಲ್ಲಿ ಕೇಳಿ ಆರೋಪ ಬಂದಿರುವ ಹಿನ್ನಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕೆ.ಎಸ್ ಈಶ್ವರಪ್ಪ ಅವರ ನಿವಾಸಕ್ಕೆ ಇಂದು ಪೇಜಾವರ ಶ್ರೀಗಳು ಭೇಟಿ ನೀಡಿ ಧೈರ್ಯವನ್ನು ತುಂಬಿದ್ದಾರೆ.

ಈ ಭೇಟಿಯ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಜಗದ್ಗುರುಗಳು ನಮ್ಮ ಮನೆಗೆ ಯಾವಾಗಲೂ ಕೂಡಾ ದೇವರ ರೂಪದಲ್ಲಿ ಬರುತ್ತಲೇ ಇರ್ತಾರೆ.ಈ ಹಿಂದಿನ ಪೇಜಾವರ ಶ್ರೀಗಳು ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ಇಡೀ ಹಿಂದು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.ಈಗ ಅವರು ನನ್ನ ಮೇಲೆ ಬಂದಿರುವ ಆರೋಪದಿಂದ ಮುಕ್ತವಾಗಿ ಹೊರಗೆ ಬರಬೇಕು ಅಂತಾ ಆಶೀರ್ವಾದ ಮಾಡಿದ್ದಾರೆ.ಆದಷ್ಟು ಬೇಗ ಫಲ ಕೊಡುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಪೀಣ್ಯ ಫ್ಲೈಓವರ್ ಕಳಪೆ ಕಾಮಗಾರಿ : ನಗರದ ಎಲ್ಲಾ ಸೇತುವೆ ಮೌಲ್ಯಮಾಪನಕ್ಕೆ ಕಾಂಗ್ರೆಸ್ ಆಗ್ರಹ

ಇಂದು ಮುಂದುವರೆದು ಮಾತನಾಡಿದ ಅವರು ಹಿಂದುಗಳ ಹನುಮ ಜಯಂತಿ, ರಾಮನ ಉತ್ಸವ ಸಂದರ್ಭದಲ್ಲಿ ಸಮಾಜದ್ರೋಹಿಗಳು ಆಘಾತಕಾರಿ ಕೃತ್ಯ ನಡೆಸುತ್ತಿದ್ದಾರೆ.ಇದನ್ನೆಲ್ಲಾ ನೋಡಿದಾಗ ಎಷ್ಟೊಂದು ಸಹಿಸಿಕೊಂಡು ಇರಬೇಕು ಅಂತಾ ಪೇಜಾವರ ಶ್ರೀಗಳು ನೊಂದು ಹೇಳಿದ್ದಾರೆ.ಇದು ನಮಗೆಲ್ಲಾ ತುಂಬಾ ಆಘಾತ ತರುತ್ತಿದೆ.ಮುಸಲ್ಮಾನ ಬಂಧುಗಳು ಮಾಡುತ್ತಿರುವ ಹಿಂಸಾಚಾರದ ವ್ಯವಸ್ಥೆಯನ್ನು ಅವರು ತಿದ್ದಿಕೊಳ್ಳಬೇಕು.ಈ ಹಿನ್ನಲೆಯಲ್ಲಿ ಈಗ ಮುಸಲ್ಮಾನರು ತಿದ್ದಿಕೊಳ್ಳುತ್ತಾರೆ ಎಂಬ ನಂಬಿಕೆ ನನಗೆ ಇದೆ.ಆದಷ್ಟು ಬೇಗ ಹಿಂದೂಸ್ಥಾನದಲ್ಲಿ ಹಿಂದುಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಪ್ರಯತ್ನ ನಡೆಸಲಿ ಎಂದು ಅವರು ಹೇಳಿದರು.

ಈಗ ತೆಗೆದುಕೊಳ್ಳುತ್ತಿರುವ ಕ್ರಮಗಳು ಸಾಕಾಗುತ್ತಿಲ್ಲ ಅಂತಾ ಸ್ವಾಮೀಜಿಗಳು ಸಹ ಹೇಳಿದ್ದಾರೆ.ನಾನು ಸಹ ಈ ಬಗ್ಗೆ ಸಿಎಂ ಹಾಗು ಗೃಹ ಸಚಿವರ ಗಮನಕ್ಕೆ ತರುತ್ತೇನೆ.ಹಿಂದುಗಳ ಮೇಲೆ ಆಗುತ್ತಿರುವ ಆಕ್ರಮಣಾಕಾರಿ ಕೃತ್ಯದ ವಿರುದ್ದ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ: ಶಿಕ್ಷಕರಿಗಾಗಿ ಖಾಸಗಿ ಶಾಲೆಗಳು ಪರದಾಟ! ಹೊರರಾಜ್ಯಗಳ‌ ಶಿಕ್ಷಕರ ಮೊರೆ ಹೋದ ಆಡಳಿತ ಮಂಡಳಿ?

ರಾಜೀನಾಮೆ ಕೊಟ್ಟ ನಂತರ ಇಂದಿನವರೆಗೆ ಎಲ್ಲಾ ಜಗದ್ಗುರುಗಳು ಬಂದು ಆಶೀರ್ವಾದ ಮಾಡುತ್ತಿದ್ದಾರೆ.ಶ್ರೀಗಳ ಆಶೀರ್ವಾದ ಸಿಗುತ್ತಿರುವುದು ನನ್ನ ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ.ಅವರೆಲ್ಲರ ಅಪೇಕ್ಷೆಯಂತೆ ಈ ಆಪಾದನೆಯಿಂದ ಹೊರಗೆ ಬರುತ್ತೇನೆ.ಹಿಂದು ಧರ್ಮದ, ರಾಜ್ಯದ, ದೇಶದ ಕೆಲಸವನ್ನು ಇನ್ನು ಹೆಚ್ಚು ಜೀವಂತ ಇರುವವರೆಗೂ ಮಾಡ್ತೇನೆ ಎಂದು ಈಶ್ವರಪ್ಪನವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News