ಸಂಚಾರ ನಿಯಮ ಉಲ್ಲಂಘನೆ: ಅನಾವಶ್ಯಕವಾಗಿ ವಾಹನ ತಡೆಯದಂತೆ ಡಿಜಿ & ಐಜಿಪಿ ಸೂಚನೆ

ಕೇವಲ ‘ಡ್ರಿಂಕ್ ಆ್ಯಂಡ್ ಡ್ರೈವ್’ ಮಾಡುವವರನ್ನು ಪರಿಶೀಲಿಸಬಹುದು ಎಂದು ನಗರ ಪೊಲೀಸ್ ಆಯುಕ್ತರು ಹಾಗೂ ಸಂಚಾರ ವಿಭಾಗದ ಜಂಟಿ ಆಯುಕ್ತರಿಗೆ ಟ್ಯಾಗ್ ಮಾಡಿ ಪ್ರವೀಣ್ ಸೂದ್ ಸೂಚಿಸಿದ್ದಾರೆ.

Written by - VISHWANATH HARIHARA | Edited by - Puttaraj K Alur | Last Updated : Jun 27, 2022, 03:35 PM IST
  • ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರ ದಂಡ ವಸೂಲಿ ಕಾರ್ಯದಿಂದ ಟ್ರಾಫಿಕ್ ಜಾಮ್
  • ಎಲ್ಲೆಂದರಲ್ಲಿ ದಾಖಲೆ ಪರಿಶೀಲನೆ ನೆಪದಲ್ಲಿ ಗಾಡಿಗಳನ್ನು ನಿಲ್ಲಿಸುವಂತಿಲ್ಲ
  • ಡ್ರಿಂಕ್‌ ಆ್ಯಂಡ್ ಡ್ರೈವ್ & ರೂಲ್ಸ್ ಬ್ರೇಕ್ ಮಾಡುವ ವಾಹನಗಳಿಗೆ ಮಾತ್ರ ದಂಡ ಹಾಕಿ ಎಂದು ಮನವಿ
ಸಂಚಾರ ನಿಯಮ ಉಲ್ಲಂಘನೆ: ಅನಾವಶ್ಯಕವಾಗಿ ವಾಹನ ತಡೆಯದಂತೆ ಡಿಜಿ & ಐಜಿಪಿ ಸೂಚನೆ  title=
ಸಂಚಾರ ನಿಯಮ ಉಲ್ಲಂಘನೆ

ಬೆಂಗಳೂರು: ನಗರದಲ್ಲಿ ಇನ್ಮುಂದೆ ವಾಹನಗಳ ದಾಖಲಾತಿ ಪರಿಶೀಲನೆ ಹೆಸರಿನಲ್ಲಿ ಪೊಲೀಸರು ಎಲ್ಲೆಂದರಲ್ಲಿ ವಾಹನ ಸವಾರರನ್ನು ತಡೆದು ನಿಲ್ಲಿಸದಂತೆ ರಾಜ್ಯ ಪೊಲೀಸ್ ಇಲಾಖೆಯ ಡಿಜಿ & ಐಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಹೆಣ್ಣು‌ಮಗು ಎಂಬ ಕಾರಣಕ್ಕೆ ಕತ್ತು ಹಿಸುಕಿ ಕೊಲ್ಲಲು ಮುಂದಾದ ತಂದೆ

ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರ ದಂಡ ವಸೂಲಿ ಕಾರ್ಯದಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ.  ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ತಡೆದು ಪರಿಶೀಲನೆ ನಡೆಸುವ ಪೊಲೀಸರ ಕ್ರಮವನ್ನು ಟ್ವಿಟರ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದರು. ಈ ಹಿಂದೆ ಸಂಚಾರ ವಿಭಾಗದ ಎಸಿಪಿಯಾಗಿದ್ದ ಪ್ರವೀಣ್ ಸೂದ್, ದಾಖಲೆಗಳ ಪರಿಶೀಲನೆ ಹೆಸರಿನಲ್ಲಿ ಅನಾವಶ್ಯಕವಾಗಿ ವಾಹನಗಳನ್ನು ತಡೆದು ನಿಲ್ಲಿಸುವುದಕ್ಕೆ ಬ್ರೇಕ್ ಹಾಕಿದ್ದರು. ಈಗ ಡಿಜಿ & ಐಜಿಪಿಯಾಗಿರುವ ಅವರಿಂದ ಮತ್ತೊಮ್ಮೆ ಅದೇ ನಿಯಮ ನಿರೀಕ್ಷಿಸಬಹುದೇ ಎಂದು ತಮ್ಮ ಟ್ವೀಟ್‍ನಲ್ಲಿ ಉಲ್ಲೇಖಿಸಿದ್ದರು.

ಇದನ್ನೂ ಓದಿ: 16 ಐಪಿಎಸ್ ಅಧಿಕಾರಿಗಳ ವರ್ಗಾವಣೆ.. ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಈ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಡಿಜಿ & ಐಜಿಪಿ ಪ್ರವೀಣ್ ಸೂದ್, ‘ಸಂಚಾರ ನಿಯಮಗಳನ್ನ ಉಲ್ಲಂಘಿಸಿದ ವಾಹನಗಳನ್ನು ದಾಖಲಾತಿ ಪರಿಶೀಲನೆ ಹೆಸರಿನಲ್ಲಿ ಅನಾವಶ್ಯಕ  ತಡೆಯದಂತೆ’ ಸೂಚಿಸಿದ್ದಾರೆ. ಡ್ರಿಂಕ್‌ ಆ್ಯಂಡ್ ಡ್ರೈವ್ & ರೂಲ್ಸ್ ಬ್ರೇಕ್ ಮಾಡುವ ವಾಹನಗಳಿಗೆ ಮಾತ್ರ ದಂಡ ಹಾಕಿ ಎಂದು ಎಂದು ನಗರ ಪೊಲೀಸ್ ಆಯುಕ್ತರು ಹಾಗೂ ಸಂಚಾರ ವಿಭಾಗದ ಜಂಟಿ ಆಯುಕ್ತರಿಗೆ ಟ್ಯಾಗ್ ಮಾಡುವ ಮೂಲಕ ಸೂಚಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News