/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಅಸಮಾಧಾನ ವ್ಯಕ್ತಪಡಿಸಿದರೆ ಕಠಿಣ ಕ್ರಮ: ಅತೃಪ್ತ ಶಾಸಕರಿಗೆ ಕೆ.ಸಿ.ವೇಣುಗೋಪಾಲ್ ಖಡಕ್ ವಾರ್ನಿಂಗ್

 ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸುವುದಿಲ್ಲ ಎಂದು ಕಾಂಗ್ರೆಸ್ ಹೈಕಮ್ಯಾಂಡ್ ಹೇಳಿದೆ.

Last Updated : Jul 3, 2019, 10:05 AM IST
ಅಸಮಾಧಾನ ವ್ಯಕ್ತಪಡಿಸಿದರೆ ಕಠಿಣ ಕ್ರಮ: ಅತೃಪ್ತ ಶಾಸಕರಿಗೆ ಕೆ.ಸಿ.ವೇಣುಗೋಪಾಲ್ ಖಡಕ್ ವಾರ್ನಿಂಗ್ title=

ನವದೆಹಲಿ: ಪಕ್ಷದ ಅತೃಪ್ತ ಶಾಸಕರು ಅಸಮಾಧಾನ ಹೊರಹಾಕಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಹೈಕಮ್ಯಾಂಡ್ ಎಚ್ಚರಿಕೆ ನೀಡಿದೆ. 

ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಪಕ್ಷದ ಅತೃಪ್ತ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬೆನ್ನಲ್ಲೇ ಎಚ್ಚೆತ್ತಿರುವ ಹೈಕಮ್ಯಾಂಡ್, ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸುವುದಿಲ್ಲ. ಯಾರೇ ಬಂಡಾಯ ಎದ್ದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೆ.ಸಿ. ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಆಡಳಿತ ಪೂರ್ಣಗೊಳಿಸಲಿದೆ ಎಂದು ಹೇಳಿದರಲ್ಲದೆ, ಆನಂದ್ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆ ಹಿಂಪಡೆಯಲಿದ್ದಾರೆ ಎಂದು ವೇಣುಗೋಪಾಲ್ ತಿಳಿಸಿದರು.