ನಂದಿ ಬೆಟ್ಟದಲ್ಲಿ ಹೊಸವರ್ಷಾಚರಣೆ ನಿಷೇಧ

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 

Last Updated : Dec 30, 2017, 01:39 PM IST
ನಂದಿ ಬೆಟ್ಟದಲ್ಲಿ ಹೊಸವರ್ಷಾಚರಣೆ ನಿಷೇಧ  title=

ಬೆಂಗಳೂರು: ಹೊಸ ವರ್ಷಕ್ಕೆ ಇನ್ನೇನು ಒಂದೇ ದಿನ ಬಾಕಿ. ಹಾಗಾಗಿ ಎಲ್ಲರೂ ಹೊಸವರ್ಷಾಚರಣೆಗೆ ನಂದಿ ಬೆಟ್ಟಕ್ಕೆ ಹೋಗಬೇಕೆಂದು ಪ್ಲಾನ್ ಮಾಡಿದ್ದರೆ ಅದನ್ನು ಈಗಲೇ ಬದಲಿಸಿಕೊಳ್ಳಿ. ಏಕೆಂದರೆ ಪ್ರವಾಸಿಗರ ತಾಣ ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ನಿಷೇಧ ಹೇರಲಾಗಿದೆ. 

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಚಿಕ್ಕಬಳ್ಳಾಪುರ ಎಸ್ ಪಿ ಕಾರ್ತಿಕ್ ರೆಡ್ಡಿ ಅವರು, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 

ಅಂತೆಯೇ ಇಲ್ಲಿನ ಸುತ್ತಮುತ್ತಲ ವನ್ಯಜೀವಿ ಪರಿಸರಕ್ಕೂ ವರ್ಷಾಚರಣೆಯಿಂದ ಧಕ್ಕೆಯಾಗುವ ಕಾರಣದಿಂದಾಗಿ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಮಾರನೆಯ ದಿನ ಅಂದರೆ ಜನವರಿ 1 ರ ಬೆಳಗ್ಗೆ 6 ಗಂಟೆಯವರೆಗೂ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

Trending News