ಗ್ರಾಮ ಪಂಚಾಯತಿ ಚುನಾವಣೆ ಬಳಿಕ ‘ಹೊಸ ರೇಶನ್‌ ಕಾರ್ಡ್’

ಗ್ರಾಮ ಪಂಚಾಯತಿ‌ ಚುನಾವಣೆ ಮುಗಿದ ಬಳಿಕ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲು ಕ್ರಮ

Last Updated : Dec 9, 2020, 03:58 PM IST
  • ಗ್ರಾಮ ಪಂಚಾಯತಿ‌ ಚುನಾವಣೆ ಮುಗಿದ ಬಳಿಕ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲು ಕ್ರಮ
  • ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಭರವಸೆ
  • ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ವರ್ಷ ಸಲ್ಲಿಸಲಾಗಿದ್ದ 1.88 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಪ್ರತಿ ಮನೆಗಳಿಗೆ ಹೋಗಿ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ. ಹೀಗಾಗಿ ತಾತ್ಕಾಲಿಕವಾಗಿ ತಡೆ
ಗ್ರಾಮ ಪಂಚಾಯತಿ ಚುನಾವಣೆ ಬಳಿಕ ‘ಹೊಸ ರೇಶನ್‌ ಕಾರ್ಡ್’ title=

ಬೆಂಗಳೂರು: ಗ್ರಾಮ ಪಂಚಾಯತಿ‌ ಚುನಾವಣೆ ಮುಗಿದ ಬಳಿಕ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲು ಕ್ರಮ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು.

 ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರಾದ ಧರ್ಮಸೇನ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ವರ್ಷ ಸಲ್ಲಿಸಲಾಗಿದ್ದ 1.88 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ಪ್ರತಿ ಮನೆಗಳಿಗೆ ಹೋಗಿ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ. ಹೀಗಾಗಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಗ್ರಾಮ ಪಂಚಾಯತಿ‌ ಚುನಾವಣೆ(Grama Panchayat, Elections) ಮುಗಿದ ಬಳಿಕ ಬಾಕಿ ಉಳಿದ ಅರ್ಜಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು.

'ಕುಮಾರಸ್ವಾಮಿಯದ್ದು ಪುಟಗೋಸಿ ರಾಜಕಾರಣ'

ಇದೇ ವೇಳೆ ಕಾಂತರಾಜು ಅವುರ, ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸುವ ಮೂಲಕ ಹೊಸ ಕುಟುಂಬಗಳಿಗೆ ಪರಿತರ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಗ್ರಾಮ ಪಂಚಾಯತಿ ಚುನಾವಣೆ ಮುಗಿದ ಕೂಡಲೇ ಎರಡ್ಮೂರು ತಿಂಗಳಲ್ಲಿ ಕಳೆದ ವರ್ಷ ಸಲ್ಲಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡುತ್ತೇವೆ. ನಂತರ ತಕ್ಷಣವೇ ಹೊಸ ಅರ್ಜಿಗಳನ್ನು ಆಹ್ವಾನಿಸಲು ಇಲಾಖೆ ಕ್ರಮಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಶಿಕ್ಷಣ ಇಲಾಖೆಯಿಂದ ಶಾಲಾ ಮಕ್ಕಳಿಗೆ 'ಸಿಹಿ ಸುದ್ದಿ'..!

 

Trending News