ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಿನ್ನೆ ಬರ್ಭರ ಹತ್ಯೆಗೀಡಾದ ಯುವತಿ ತಂದೆ ಮತ್ತು ಕುಟುಂಬದವರು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಅವರಲ್ಲಿ ಹೀಗೆ ದಯನೀಯ ಮೊರೆ ಇಟ್ಟರು.
ಕಾಲೇಜು ಕ್ಯಾಂಪಸ್ ಅಲ್ಲಿ ಯುವತಿ ನೇಹಾ ಕಗ್ಗೊಲೆ ವಿಷಯ ತಿಳಿದು ಶುಕ್ರವಾರ ರಾತ್ರಿಯೇ ಕರ್ಪೋರೇಟರ್ ನಿರಂಜನ್ ಹಿರೇಮಠ ಅವರ ಮನೆಗೆ ತೆರಳಿದ್ದ ಕೇಂದ್ರ ಸಚಿವರೆದುರು ಕುಟುಂಬ ವರ್ಗ ದುಃಖ ತೋಡಿಕೊಂಡಿತು.
ಹಿಂದೂ ಹೆಣ್ಣು ಮಕ್ಕಳ ಹತ್ಯೆಗೆ ಕೊನೆಗಣಿಸಿ: ಕಾಲೇಜು ಕ್ಯಾಂಪಸ್ ಅಲ್ಲೇ ಹೀಗೆ ಹತ್ಯೆ ನಡೆದರೆ ಹಿಂದೂ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡೋದಾದರೂ ಹೇಗೆ? ಸರ್ಕಾರದವರು ಇಂಥ ನೀಚರಿಗೆ ಕಠಿಣ ಶಿಕ್ಷೆ ಕೊಡಲಿ. ಹಿಂದೂ ಹೆಣ್ಣುಮಕ್ಕಳ ಹತ್ಯೆ ಇಲ್ಲಿಗೇ ಕೊನೆಗಾಣಿಸಿ ಎಂದು ಹತ್ಯೆಗೀಡಾದ ನೇಹಾ ಸೋದರತ್ತೆ ಸಚಿವ ಜೋಶಿ ಅವರಲ್ಲಿ ಕಣ್ಣೀರಿಡುತ್ತಲೇ ಬೇಡಿಕೊಂಡರು.
ಹಿಂದೂ ಯುವತಿಯರೇ ಟಾರ್ಗೆಟ್ - ಇದಕ್ಕೆ ತಕ್ಕ ಶಾಸ್ತಿ ಆಗಲೇಬೇಕು: ಅಂದ ಚೆಂದದ ಹಿಂದೂ ವಿದ್ಯಾರ್ಥಿ-ಯುವತಿಯರೇ ಟಾರ್ಗೆಟ್ ಆಗುತ್ತಿದ್ದಾರೆ. ನಾನು ಕಾರ್ಪೋರೇಟ್ ಇದ್ದೀನಿ. ನನ್ನ ಮಗಳಿಗೇ ಹೀಗಾದರೆ ಸಾಮಾನ್ಯರ ಮಕ್ಕಳ ಗತಿ ಏನು? ಹಾಗಾಗಿ ಇದಕ್ಕೊಂದು ತಕ್ಕ ಶಾಸ್ತಿ ಆಗಲೇಬೇಕು ಎಂದು ನೇಹಾಳ ತಂದೆ ನಿರಂಜನ್ ಹಿರೇಮಠ ಅವರು ಪ್ರಹ್ಲಾದ ಜೋಶಿ ಅವರಲ್ಲಿ ಒತ್ತಾಯಿಸಿದರು.
ಇದನ್ನೂ ಓದಿ- ಮಂಡ್ಯ ಜನಸಾಗರಕ್ಕೆ ಶ್ರೀರಾಮನವಮಿ ಶುಭಾಶಯ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಿವಪೂಜೆ ಆಗದೆ ಹನಿ ನೀರು ಕುಡಿಯುತ್ತಿರಲಿಲ್ಲ: ನಿತ್ಯ ಬೆಳಗ್ಗೆ ಶಿವಪೂಜೆ ಮಾಡದೇ ಒಂದು ಹನಿ ನೀರು ಕುಡಿಯುತ್ತಿರಲಿಲ್ಲ. ಅಂಥ ಸಂಸ್ಕಾರವಂತ ಮಗಳು ಆಕೆ. ಲವ್ ಗಿವ್ ಅಂತಾ ಹೋದವಳಲ್ಲ ಎಂದು ತಂದೆ ಮತ್ತು ಸೋದರತ್ತೆ ಕಣ್ಣೀರಿಟ್ಟರು.
ಒಂದು ತಂಡವೇ ಇದ್ದಂತಿದೆ: ಲವ್ ಪ್ರಪೋಸಲ್ ಒಪ್ಪಲಿಲ್ಲ ಎಂದಾಕ್ಷಣ ಹೀಗೆ ಕಟುಕರಂತೆ ಕೊಲೆ ಮಾಡುವುದೇ? ಹಿಂದೂ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡುವ ಒಂದು ತಂಡವೇ ರೆಡಿಯಾಗಿದೆ ಅನಿಸುತ್ತಿದೆ ಎಂದರು ಕಾಂಗ್ರೇಸ್ ಕಾರ್ಪೋರೇಟರ್ ನಿರಂಜನ್.
ಮಾದರಿ ಆಗಬೇಕು ಶಿಕ್ಷೆ: ತಮ್ಮ ಮಗಳ ಹತ್ಯೆ ಪ್ರಕರಣದಲ್ಲಿ ಕೊಡುವ ಶಿಕ್ಷೆ ಕ್ರೂರ ಮನಸ್ಥಿತಿಯುಳ್ಳವರಿಗೆ ಪಾಠವಾಗಬೇಕು. ಒಂದು ಮಾದರಿ ಶಿಕ್ಷೆಯಾಗಬೇಕು. ಹೇಗಾದರೂ ಮಾಡಿ ಇಂಥ ನೀಚರನ್ನು ಮಟ್ಟ ಹಾಕಬೇಕು ಸರ್. ಇಲ್ಲದಿದ್ರೆ ನಮಗೆ ಉಳಿಗಾಲವಿಲ್ಲ ಎಂದು ಕಾಂಗ್ರೇಸ್ ಕಾರ್ಪೋರೇಟರ್ ನಿರಂಜನ್ ಅವರು ಕೇಂದ್ರ ಸಚಿವರಲ್ಲಿ ನಿವೇದಿಸಿಕೊಂಡರು.
ಹೋರಾಟ ಮಾಡೋಣ ಧೃತಿಗೆಡಬೇಡಿ: ಲವ್ ಫೇಲ್ ಆದವರು ಸಮಾಜದಲ್ಲಿ ಇದನ್ನೊಂದು ಹತ್ಯೆಯನ್ನು ಒಂದು ಅಸ್ತ್ರವಾಗಿಸಿಕೊಳ್ಳುವ ಆತಂಕ ಎದುರಾಗಿದೆ. ಧೃತಿಗೆಡಬೇಡಿ. ಇದರ ವಿರುದ್ಧ ಹೋರಾಟ ಮಾಡೋಣ ಎಂದು ಸಚಿವ ಪ್ರಹ್ಲಾದ ಜೋಶಿ ಅವರು ನೇಹಾಳ ಕುಟುಂಬಕ್ಕೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ತೆಂಗಿನಕಾಯಿ ಮತ್ತಿತರರು ಮುಖಂಡರು ಇದ್ದರು.
ಇದನ್ನೂ ಓದಿ- ಮಂಡ್ಯ ಜನಸಾಗರಕ್ಕೆ ಶ್ರೀರಾಮನವಮಿ ಶುಭಾಶಯ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.