ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಏನೆಲ್ಲಾ ಇರುತ್ತೆ ತಿಳಿಯಿರಿ

ಶರನ್ನವರಾತ್ರಿ ಅಂಗವಾಗಿ ಈ ಬಾರಿ ಹೊಸದಾಗಿ ಮತ್ಸ್ಯಮೇಳ, ಸಾಕು ಪ್ರಾಣಿಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.  

Last Updated : Oct 10, 2018, 12:34 PM IST
ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಏನೆಲ್ಲಾ ಇರುತ್ತೆ ತಿಳಿಯಿರಿ title=

ಮೈಸೂರು: ಅರಮನೆ ನಗರದಲ್ಲೀಗ ಸಾಂಸ್ಕೃತಿಕ ಸಂಗಮ, ನವರಾತ್ರಿ ಸಡಗರ. ಅಕ್ಟೋಬರ್ 10 ರಿಂದ 19 ರವರೆಗೆ ನಡೆಯುವ ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ ಪ್ರವಾಸಿಗರು ಅರಮನೆ ನಗರಿಗೆ ಆಗಮಿಸುತ್ತಾರೆ. 

ದಸರಾ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ನಗರಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಶರನ್ನವರಾತ್ರಿ ಅಂಗವಾಗಿ ಈ ಬಾರಿ ಹೊಸದಾಗಿ ಮತ್ಸ್ಯಮೇಳ, ಸಾಕು ಪ್ರಾಣಿಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದಲ್ಲದೆ, ಪಾರಂಪರಿಕ ನಡಿಗೆ, 3ಡಿ ಮ್ಯಾಪಿಂಗ್, ಲ್ಯಾಂಟರ್ನ್ ಉತ್ಸವಗಳು ನಡೆಯಲಿವೆ.

ಕಲಾ ರಸಿಕರಿಗೆ ದಸರಾ ಉತ್ಸವದಲ್ಲಿ ಹತ್ತು ಹಲವು ಕಾರ್ಯಕ್ರಮಗಳಿದ್ದು, ಯಾವ ಕಾರ್ಯಕ್ರಮ ಎಲ್ಲಿ ನಡೆಯಲಿದೆ ಎಂಬುದರ ವಿವರ ಇಲ್ಲಿದೆ.

  • ಚಾಮುಂಡಿ ಬೆಟ್ಟದಲ್ಲಿ ಪೋಲೀಸ್ ಸಹಾಯವಾಣಿ ಕೇಂದ್ರದ ಉದ್ಘಾಟನೆ.
  • ಚಾಮುಂಡೇಶ್ವರಿ ದೇವಾಲಯದ ಎದುರು ದಸರಾ ಕ್ರೀಡಾ ಜ್ಯೋತಿ ಉದ್ಘಾಟನೆ.
  • ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವ.
  • ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ದಸರಾ ಆಹಾರ ಮೇಳ.
  • ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ.
  • ಕಾಡ ಕಚೇರಿ ಅವಾರನದಲ್ಲಿ ಪುಸ್ತಕ ಮಳಿಗೆ.
  • ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಕ್ರೀಡಾಕೂಟ.
  • ಕುಪ್ಪಣ್ಣ ಪಾರ್ಕ್ ನಲ್ಲಿ ಗಾಜಿನ ಮನೆ ಲೋಕಾರ್ಪಣೆ.
  • ವಸ್ತು ಪ್ರದರ್ಶನ ಆವರಣದಲ್ಲಿ ವಸ್ತು ಪ್ರದರ್ಶನ.
  • ಕುಪ್ಪಣ್ಣ ಪಾರ್ಕ್ ನಲ್ಲಿ ದಸರಾ ಫಲಪುಷ್ಪ ಪ್ರದರ್ಶನ.
  • ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು
  • ಮೈಸೂರು ದಸರಾ ಗ್ರವೆಲ್ ಫೆಸ್ಟ್
  • ಅಕ್ಟೋಬರ್ 12 ರಿಂದ ಅಕ್ಟೋಬರ್ 14ರವರೆಗೆ ರೈತ ದಸರಾ 
  • ಅಕ್ಟೋಬರ್ 12 ರಿಂದ ಅಕ್ಟೋಬರ್ 14ರವರೆಗೆ ಜೆಕೆ ಗ್ರೌಂಡ್ಸ್ ನಲ್ಲಿ ದಸರಾ ಮತ್ಸ್ಯಮೇಳ
  • ಅಕ್ಟೋಬರ್ 13ರಂದು ಓಪನ್ ಸ್ಟ್ರೀಟ್ ಫೆಸ್ಟ್
  • ಅಕ್ಟೋಬರ್ 14ರಂದು ಮೈಸೂರು ವಿಶ್ವವಿದ್ಯಾನಿಲಯ ಹಾಕಿ ಮೈದಾನದಲ್ಲಿ ಸಾಕು ಪ್ರಾಣಿಗಳ ಪ್ರದರ್ಶನ
  • ಅಕ್ಟೋಬರ್ 14 ರಿಂದ ಅಕ್ಟೋಬರ್ 18ರವರೆಗೆ ಸಂಜೆ 7 ಗಂಟೆಯಿಂದ ರಾತ್ರಿ 10ರವರೆಗೆ ಟೌನ್ ಹಾಲ್ ನಲ್ಲಿ 3ಡಿ ಮ್ಯಾಪಿಂಗ್ ಕಾರ್ಯಕ್ರಮ ಜರುಗಲಿದೆ.

Trending News