ಸಿದ್ದರಾಮಯ್ಯನವರೇ ನನ್ನ ಜೀವನ ತೆರೆದ ಪುಸ್ತಕವಿದ್ದಂತೆ: ಸಚಿವ ಹೆಬ್ಬಾರ್

ಬಿಜೆಪಿ ನಾಯಕರ ಮನಃಸ್ಥಿತಿಯೇ ಹೀಗಿದೆ. ಮಂತ್ರಿ ಶಿವರಾಮ್ ಹೆಬ್ಬಾರ್ ಉಳಿದ ಭ್ರಷ್ಟ ನಾಯಕರೊಂದಿಗೆ ಸೇರಿ ಹಣ ಸಂಪಾದಿಸುವುದು ಸುಲಭವಾಗುವಂತೆ ಬಿಜೆಪಿಗೆ ಹೋದರು ಎಂದು ಸಿದ್ದರಾಮಯ್ಯ ಆರೋಪಿಸಿದ್ದರು.

Written by - Zee Kannada News Desk | Last Updated : May 13, 2022, 05:10 PM IST
  • ನಮ್ಮ ಸರ್ಕಾರ & ಕಾರ್ಮಿಕ ಇಲಾಖೆ ಸಂಕಷ್ಟದಲ್ಲಿದ್ದವರಿಗೆ ಪ್ರಮಾಣಿಕವಾಗಿ ಸಹಾಯ ಮಾಡಿದೆ
  • ಪೂರ್ಣ ಮಾಹಿತಿ ಪಡೆಯದೇ ಹತಾಶೆಯಿಂದ ಗಾಳಿಯಲ್ಲಿ ಗುಂಡು ಹೊಡೆಯೋ ಪ್ರಯತ್ನ ನಿಮಗೆ ಶೋಭೆ ತರುವುದಿಲ್ಲ
  • ಸಿದ್ದರಾಮಯ್ಯನವರೇ ನನ್ನ ಜೀವನ ತೆರೆದ ಪುಸ್ತಕವಿದ್ದಂತೆ ಎಂದ ಸಚಿವ ಶಿವರಾಮ್ ಹೆಬ್ಬಾರ್
ಸಿದ್ದರಾಮಯ್ಯನವರೇ ನನ್ನ ಜೀವನ ತೆರೆದ ಪುಸ್ತಕವಿದ್ದಂತೆ: ಸಚಿವ ಹೆಬ್ಬಾರ್  title=
ಸಿದ್ದರಾಮಯ್ಯಗೆ ಶಿವರಾಮ್ ಹೆಬ್ಬಾರ್ ತಿರುಗೇಟು

ಬೆಂಗಳೂರು: ವಲಸೆ ಕಾರ್ಮಿಕರಿಗೆ ವಿತರಿಸಿದ ಕೋವಿಡ್ ಕಿಟ್ ಹಂಚಿಕೆ ಅವ್ಯವಹಾರ ಪ್ರಕರಣ ಸಂಬಂಧ ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.

‘ನಮ್ಮ ಸರ್ಕಾರ & ಕಾರ್ಮಿಕ ಇಲಾಖೆ, ಕೋವಿಡ್ ಮೊದಲ ಲಾಕಡೌನ್‍ನಲ್ಲಿ ಸಂಕಷ್ಟದಲ್ಲಿದ್ದ ಎಲ್ಲ ವರ್ಗದ ಕಾರ್ಮಿಕರಿಗೆ ಸಹಾಯವಾಣಿ, ಕಾರ್ಮಿಕ ಸಂಘ-ಸಂಸ್ಥೆಗಳು ಹಾಗೂ ಎಲ್ಲ ಸರ್ಕಾರಿ ಇಲಾಖೆಗಳ ಸಹಕಾರದೊಂದಿಗೆ ಸಿದ್ದ ಆಹಾರ ಪೊಟ್ಟಣಗಳನ್ನು ಒದಗಿಸುವ ದಕ್ಷ, ಪ್ರಾಮಾಣಿಕ ಕೆಲಸ ಮಾಡಿದೆ & ಹಲವು ರಾಜ್ಯಗಳು ನಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದವು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಮ್ಯಾ ಟ್ವೀಟ್ ವಾರ್‌ಗೆ ಶಾಸಕ ರಿಜ್ವಾನ್ ಅರ್ಷದ್ ಪ್ರತಿಕ್ರಿಯೆ ಏನು ಗೊತ್ತಾ!?

‘ಪೂರ್ಣ ಮಾಹಿತಿ ಪಡೆಯದೇ ಈ ರೀತಿ ಹತಾಶೆಯಿಂದ ಗಾಳಿಯಲ್ಲಿ ಗುಂಡು ಹೊಡೆಯೋ ಪ್ರಯತ್ನ ನಿಮಗೆ ಶೋಭೆ ತರುವುದಿಲ್ಲ’ವೆಂದು ಸಿದ್ದರಾಮಯ್ಯನವರಿಗೆ ಸಚಿವ ಹೆಬ್ಬಾರ್ ಕುಟುಕಿದ್ದಾರೆ. ‘ಸಿದ್ದರಾಮಯ್ಯನವರೇ ನನ್ನ ಜೀವನ ತೆರೆದ ಪುಸ್ತಕವಿದ್ದಂತೆ. ನನ್ನ ನಡೆ ನುಡಿಯನ್ನು ಕೆಲವು ಕಾಲ ಹತ್ತಿರದಿಂದ ನೋಡಿದ ನಿಮ್ಮ ಈ ಕೀಳಭಿರುಚಿಯ ಹೇಳಿಕೆ ನಿಜಕ್ಕೂ ಖೇದಕರ’ವೆಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಮಿಕ ಇಲಾಖೆ ವಿರುದ್ಧ ಲೋಕಾಯುಕ್ತಕ್ಕೆ ದೂರು

ಕೋವಿಡ್-19 ಮೊದಲ ಲಾಕ್‍ಡೌನ್‍ ವೇಳೆ ಬೆಂಗಳೂರಿನಲ್ಲಿ ತಂಗಿದ್ದ ವಲಸೆ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಗಿತ್ತು. ಖಾಸಗಿ ಸಂಸ್ಥೆಗಳಿಂದ ಲಕ್ಷಗಟ್ಟಲೇ ಸಿದ್ಧ ಆಹಾರ ಕಿಟ್‍ಗಳನ್ನು ಖರೀದಿಸಲು ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಹಣ ಗುಳುಂ ಮಾಡಲಾಗಿದೆ ಎಂದು ಸಿದ್ದರಾಮಯ್ಯ ದಾಖಲೆ ಸಮೇತ ಆರೋಪಿಸಿದ್ದರು.

ಇದನ್ನೂ ಓದಿ: 'ಸಂಘ ಪರಿವಾರದ ರಾಜಕೀಯ ಹಿಂದುತ್ವದ ಅಜೆಂಡಾ ಆಗಿದೆ. ಇದನ್ನು ಹಿಂದುಗಳೆಲ್ಲರೂ ಖಂಡಿಸಬೇಕು'-ಸಿದ್ದರಾಮಯ್ಯ

‘ವಲಸಿಗರಿಗೆ ಆಹಾರ ಕಿಟ್‍ಗಳ ವಿತರಣೆಯಲ್ಲಿಯೂ ಬಿಜೆಪಿ ನಾಯಕರು ಹಗರಣ ಮಾಡಿದ್ದಾರೆ. ಬಿಜೆಪಿ ನಾಯಕರ ಮನಃಸ್ಥಿತಿಯೇ ಹೀಗಿದೆ. ಮಂತ್ರಿ ಶಿವರಾಮ್ ಹೆಬ್ಬಾರ್ ಉಳಿದ ಭ್ರಷ್ಟ ನಾಯಕರೊಂದಿಗೆ ಸೇರಿ ಹಣ ಸಂಪಾದಿಸುವುದು ಸುಲಭವಾಗುವಂತೆ ಬಿಜೆಪಿಗೆ ಹೋದರು.  ವಲಸೆ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಕಾರ್ಮಿಕ ಇಲಾಖೆ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಇದು ಬಿಜೆಪಿ ಮಂತ್ರಿಗಳ 40% ಕಮಿಷನ್ ಮತ್ತೊಂದು ಪ್ರಕರಣ’ವೆಂದು ಟೀಕಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News