ಬೆಂಗಳೂರು : ರಾಜ್ಯದಲ್ಲಿ ಅನ್ ಲಾಕ್ 2.O ಅಡಿಯಲ್ಲಿ ಸೋಮವಾರದಿಂದ ರಾಜ್ಯ ಸಾರಿಗೆ ಬಸ್‌ಗಳ ಸಂಚಾರ ಆರಂಭವಾಗುವ ಸಾಧ್ಯತೆಯಿದೆ.
ಅದ್ರಂತೆ, 50 ಪರ್ಸೆಂಟ್ ಭರ್ತಿ ಆಧಾರದಲ್ಲಿ ಬಸ್‌ಗಳ ಓಡಾಟ ಶುರುವಾಗಲಿದ್ದು, ಚಾಲಕ, ನಿರ್ವಹಕರಿಗೆ ಮಾಸ್ಕ್ ಕಡ್ಡಾಯ(Mask Mandatory) ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಕೊರೊನಾ(Corona) ಹರಡದಂತೆ ಹೊಸ ಯೋಜನೆ ರೂಪಿಸಲಾಗ್ತಿದ್ದು, ಕ್ಯಾಶ್‌ಲೆಸ್ ವ್ಯವಹಾರಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ.
ಇದನ್ನೂ ಓದಿ : Karnataka Congress : ಮಕ್ಕಳಿಗೆ 'ಟ್ಯಾಬ್ಲೆಟ್' ಗೆಲ್ಲುವ ಸುವರ್ಣ ಅವಕಾಶ ನೀಡಿದ ಕಾಂಗ್ರೆಸ್..!
ಹೌದು, ಪ್ರಯಾಣಿಕರು ಕ್ಯಾಶ್‌ಲೆಸ್(Cashless) ವ್ಯವಹಾರ ನಡೆಸಲು ವ್ಯವಸ್ಥೆ ಮಾಡಲಾಗ್ತಿದ್ದು, ಗೂಗಲ್ ಪೇ, ಕ್ಯೂರ್ ಕೋಡ್ ಮತ್ತು ಫೋನ್ ಪೇ ಮೂಲಕ ಟಿಕೆಟ್ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತೆ. ಈ ಸೇವೆ ಶೀಘ್ರದಲ್ಲೇ ಜಾರಿ ತರಲಾಗುತ್ತೆ ಎಂದು ಬಿಎಂಟಿಸಿ ಎಂಡಿ ಸಿ. ಶಿಖಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : BS Yediyurappa : ಅರುಣ್ ಸಿಂಗ್ ಬಂದುಹೋದ ಮೇಲೆ 'ಜಾಲಿ ಮೂಡ್' ನಲ್ಲಿ ಸಿಎಂ ಬಿಎಸ್‌ವೈ
ಬೆಂಗಳೂರಿನಲ್ಲಿ ಜೂನ್ 21ರ ನಂತರವೂ ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ(Night Curfew) ಮುಂದುವರೆಯಲಿದೆ ಎಂದು ಬಿಬಿಎಂಪಿ ಹೇಳಿದೆ. ಜೂನ್.21ರಿಂದ ಅನ್'ಲಾಕ್ 2.0 ಆರಂಭವಾಗಲಿದ್ದು, ಈ ಹಂತದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಶೇ.50ರಷ್ಟು ಪ್ರಯಾಣಿಕರೊಂದಿಗೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ನಡುವಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ಮುಂದುವರೆಯಲಿದೆ ಎಂದು ಬಿಬಿಎಂಪಿ ತಿಳಿಸಿದೆ.
ಇದನ್ನೂ ಓದಿ : DK Shivakumar : 'ಬಿಜೆಪಿಯದ್ದು ಯುದ್ಧಕಾಂಡ ಜನ ಸಾಮಾನ್ಯರದ್ದು ಕರ್ಮಕಾಂಡ'
ಕೊರೊನಾ 3ನೇ ಅಲೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎರಡನೇ ಅಲೆ ಸಂದರ್ಭದಲ್ಲಿ ಮಾಡಲಾದ ವಾರ್ ರೂಮ್ ಗಳು, ಆಸ್ಪತ್ರೆ, ಆಕ್ಸಿಜನ್(Oxygen), ಟ್ರಯಾಜಿಂಗ್ ಕೇಂದ್ರ, ಕೋವಿಡ್ ಆರೈಕೆ ಕೇಂದ್ರ. ವೈದ್ಯಕೀಯ ಸಿಬ್ಬಂದಿ ಸೇರಿದಂತೆ ವಿವಿಧ ವ್ಯವಸ್ಥೆಗಳು ಮುಂದುವರೆಯಲಿವೆ. ಮೂರನೇ ಅಲೆ ಸಲುವಾಗಿ ಕೆಲವು ಆಸ್ಪತ್ರೆಗಳಲ್ಲಿ ಮತ್ತಷ್ಟು ಐಸಿಯು ಹಾಸಿಗೆಗಳನ್ನು ನಿರ್ಮಿಸುವ ಸಿದ್ಧತೆಗಳು ನಡೆಯುತ್ತಿವೆ. ಕೆಲವು ಕಾರ್ಪೊರೇಟ್ ಸಂಸ್ಥೆಗಳ ಸಹಯೋಗದಲ್ಲಿ ಐಸಿಯು ಹಾಸಿಗೆಗಳ ವ್ಯವಸ್ಥೆಗೆ ಮಾಡುವ ಕುರಿತು ಮಾತುಕತೆಗಳೂ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : Karnataka Unlock 2.O : ಜೂ.21 ರ ಬಳಿಕವೂ ಬೆಂಗಳೂರಿನಲ್ಲಿ ವೀಕೆಂಡ್, ನೈಟ್ ಕರ್ಪ್ಯೂ ಮುಂದುವರಿಕೆ!
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ(Gourav Gupta) ಅವರು, ಮೊದಲ ಹಂತದಲ್ಲಿ ಕೈಗಾರಿಕೆಗಳು ಮತ್ತು ಉತ್ಪಾದನಾ ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಇದೀಗ ಜೂ.21ರಂದು ಎರಡನೇ ಹಂತದ ಲಾಕ್ಡೌನ್ ಸಡಿಲಿಕೆಯಾಗಲಿದ್ದು, ವಾಣಿಜ್ಯ ಉದ್ಯಮಗಳು ಮತ್ತು ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಸಿಗಲಿದೆ. ಕ್ರಮೇಣ ಪರಿಸ್ಥಿತಿ ಆಧರಿಸಿ ಉಳಿದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : KS Eshwarappa : 'ತಾಲೂಕು-ಜಿಲ್ಲಾ ಪಂಚಾಯತ್' ಚುನಾವಣೆ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಸಚಿವ ಈಶ್ವರಪ್ಪ
ಜನರು ಕೋವಿಡ್(Covid-19) ನಿಯಮಗಳನ್ನು ಉಲ್ಲಂಘಿಸಿದರೆ, ಎಲ್ಲೆಂದರಲ್ಲಿ ಬೇಕಾಬಿಟ್ಟಿ ಓಡಾಡಿದರೆ ನಿರೀಕ್ಷೆಗಿಂತ ಮುಂಚಿತವಾಗಿಯೇ ಮೂರನೇ ಅಲೆ ಬರುವ ಸಾಧ್ಯತೆಗಳಿವೆ. ಆದ್ದರಿಂದ ಎಚ್ಚರಿಕೆ ಹಾಗೂ ಜವಾಬ್ದಾರಿಯನ್ನು ಅರಿತು ಸಾರ್ವಜನಿಕರು ನಡೆದುಕೊಳ್ಳಬೇಕೆಂದು ಎಚ್ಚರಿಕೆ ನೀಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.