ಬರಗಾಲದಲ್ಲಿ ಗ್ರಾಮೀಣ ಜನರ ಬದುಕಿಗೆ ಆಸರೆಯಾದ ನರೇಗಾ..!

MGNREGA: ಧಾರವಾಡ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಒಟ್ಟು 1.69 ಲಕ್ಷ ಉದ್ಯೋಗ ಚೀಟಿಗಳಿವೆ ಇದರಲ್ಲಿ ಸುಮಾರು 81 ಸಾವಿರ ಉದ್ಯೋಗ ಚೀಟಿಗಳಿದ್ದು, 1.56 ಲಕ್ಷ ಜನ ಕೆಲಸಗಾರರಿದ್ದಾರೆ. ಮತ್ತು 4.03 ಲಕ್ಷ ಕಾಮಗಾರಿಗಳನ್ನು ಗುರುತಿಸಲಾಗಿದೆ ಎಂದು ಸಿಇಓ ಅವರು ತಿಳಿಸಿದರು.

Written by - Manjunath N | Last Updated : Apr 7, 2024, 12:09 AM IST
  • ಜನೇವರಿ 2024 ರಿಂದ ಮಾರ್ಚ 2024 ರ ಅವಧಿಯಲ್ಲಿ ತಿಂಗಳಿಗೆ 2 ಬಾರಿ ಕಟಾವು ಮಾಡಿ 20 ಟನ್ ಇಳುವರಿ ಪಡೆದಿದ್ದಾರೆ
  • ಮಾರುಕಟ್ಟೆಯ ಬೆಲೆ ಪ್ರತಿ ಕೆ.ಜಿಗೆ 12 ರೂ ರಂತೆ 20 ಟನ್‍ಗೆ ಸುಮಾರು 2,40,000 ಆದಾಯ ಪಡೆದಿದ್ದಾರೆ
ಬರಗಾಲದಲ್ಲಿ ಗ್ರಾಮೀಣ ಜನರ ಬದುಕಿಗೆ ಆಸರೆಯಾದ ನರೇಗಾ..! title=

ಧಾರವಾಡ: ಧಾರವಾಡ ಜಿಲ್ಲೆ ಸಂಪೂರ್ಣ ಬರಪಿಡಿತ ಜಿಲ್ಲೆಯಾಗಿದ್ದು, ಗ್ರಾಮೀಣ ಭಾಗದ ಜನರಿಗೆ, ರೈತರಿಗೆ ಬರಗಾಲದ ಈ ಸಂದರ್ಭದಲ್ಲಿ ನರೇಗಾ ಯೋಜನೆ ಅವರ ಬದುಕಿಗೆ ಆಸರೆ ಆಗಿದೆ. ಕೂಲಿ ಕೇಳಿ ಬರುವ ಎಲ್ಲಿರಿಗೂ ಅವರ ಊರಲ್ಲಿಯೇ ಉದ್ಯೋಗ ನೀಡಲಾಗುತ್ತಿದ್ದು, ಕಳೆದ ವರ್ಷದ ಗುರಿಯಲ್ಲಿ ಶೇ. 90 ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಿ ಅಧಿಕಾರಿ ಸ್ವರೂಪ ಟಿ.ಕೆ. ಅವರು ಹೇಳಿದರು.

ಅವರು ಇಂದು ಮಧ್ಯಾಹ್ನ ವಿವಿಧ ಗ್ರಾಮಗಳಲ್ಲಿ ನರೇಗಾ ಕನವರಜನ್ಸ್ ಕಾರ್ಯಕ್ರಮದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳ ವೀಕ್ಷಣೆ ನಂತರ ಮಾದನಬಾವಿ ಪ್ರಗತಿಪರ ರೈತ ದಯಾನಂದ ಹೊಳೆಹಡಗಲಿ ಅವರ ಪಪ್ಪಾಯಿ ತೋಟದಲ್ಲಿ ಅಭಿವೃದ್ಧಿ ಪ್ರವಾಸದಲ್ಲಿ ಪಾಲ್ಗೊಂಡಿದ್ದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ, ಮಾತನಾಡಿದರು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ, ಕೃಷಿಹೊಂಡ, ಕೃಷಿ ಬದು ನಿರ್ಮಾಣದ ಮೂಲಕ ಜಲಸಂರಕ್ಷಣೆ ಹಾಗೂ ರೈತರಿಗೆ ಸಂಪ್ರಾದಾಯಿಕ ಬೆಳೆಗಳ ಬದಲಿಗೆ ಪರ್ಯಾಯವಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಿ, ತೋಟಗಾರಿಕಾ ಬೆಳೆಗಳ ವಿಸ್ತರಣೆಗೆ ಆದ್ಯತೆಯನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:Priyamani : ಸಿಂಪಲ್ ಸೀರೆಯಲ್ಲೂ ಸಕತ್ ಆಗಿ ಸೆಳೆಯುವ ಅಂದಗಾತಿ ಇವಳು : ಫೋಟೋಸ್ ಇಲ್ಲಿವೆ

ಧಾರವಾಡ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಒಟ್ಟು 1.69 ಲಕ್ಷ ಉದ್ಯೋಗ ಚೀಟಿಗಳಿವೆ ಇದರಲ್ಲಿ ಸುಮಾರು 81 ಸಾವಿರ ಉದ್ಯೋಗ ಚೀಟಿಗಳಿದ್ದು, 1.56 ಲಕ್ಷ ಜನ ಕೆಲಸಗಾರರಿದ್ದಾರೆ. ಮತ್ತು 4.03 ಲಕ್ಷ ಕಾಮಗಾರಿಗಳನ್ನು ಗುರುತಿಸಲಾಗಿದೆ ಎಂದು ಸಿಇಓ ಅವರು ತಿಳಿಸಿದರು.

2023-24 ನೇ ಸಾಲಿನ ಆರ್ಥಿಕ ವರ್ಷದಲ್ಲಿ 23.34 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿತ್ತು. ಇದರಲ್ಲಿ ಶೇ. 89.77 ರಷ್ಟು ಗುರಿ ಸಾಧಿಸಲಾಗಿದೆ. ಮತ್ತು ಒಟ್ಟು 449 ಕುಟುಂಬಗಳಲ್ಲಿ 100 ಮಾನವ ದಿನಗಳ ಗುರಿಯನ್ನು ಸಾಧಿಸಿವೆ ಎಂದು ಅವರು ಹೇಳಿದರು.

ವಲಸೆ ಯಾಕ್ರಿ... ನಿಮ್ಮೂರಲ್ಲೇ ಉದ್ಯೋಗ ಖಾತ್ರಿ: ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಜನರಿಗೆ ನಿರಂತರವಾಗಿ ಉದ್ಯೋಗ ಒದಗಿಸಲಾಗುತ್ತಿದೆ. ಕೂಲಿ ಆಧಾರಿತ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು ಹೆಚ್ಚಿನ ಜನರಿಗೆ ಸ್ಥಳಿಯವಾಗಿ ಉದ್ಯೋಗ ನೀಡಲಾಗುತ್ತಿದೆ.

ವಿಶೇಷಚೇತನರು, ಮಹಿಳೆಯರು, ಹಿರಿಯ ನಾಗರೀಕರು, ಮತ್ತು ದುರ್ಬಲ ವರ್ಗದವರಿಗೆ ಆದ್ಯತೆ ಮೇರೆಗೆ ಉದ್ಯೋಗ ಚೀಟಿ ಮತ್ತು ಕೆಲಸ ಪೂರೈಸಲಾತುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಲಸೆ ಪ್ರಮಾಣ ತಗ್ಗಿಸಲು ನರೇಗಾ ಯೋಜನೆಯಡಿ 265 ವಿವಿಧ ವೈಯಕ್ತಿಕ ಮತ್ತು ಸಮುದಾಯ ಆಧಾರಿತ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ ಸಿಇಓ ಅವರು ತಿಳಿಸಿದರು.

ನರೇಗಾ ಕೃಷಿಹೊಂಡ, ಬದು ನಿರ್ಮಾಣ, ಕುರಿದೊಡ್ಡಿ, ದನದ ಕೊಟ್ಟಿಗೆ, ಇಂಗುಗುಂಡಿ, ತೋಟಗಾರಿಕೆ ಬೆಳೆ ವಿಸ್ತರಣೆ ಪೌಷ್ಠಿಕ ತೋಟ, ಎರೆಹುಳ ಗೊಬ್ಬರ ಘಟಕ ಮುಂತಾದ ವೈಯಕ್ತಿಕ ಕಾಮಗಾರಿಗಳನ್ನು ಮತ್ತು ಸಮಗ್ರ ಕೆರೆ ಅಭಿವೃದ್ಧಿ, ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುವುದು, ಸಾರ್ವಜನಿಕ ನಾಲಾ ಹೂಳೆತ್ತುವುದು. ಶಾಲಾ ಕಂಪೌಂಡ, ಶಾಲೆಯ ಆಟದ ಮೈದಾನ, ಸಂಪರ್ಕ ರಸ್ತೆ ಮತ್ತು ಗ್ರಾಮೀಣ ಸಂತೆ ಕಟ್ಟೆ ನಿರ್ಮಾಣದಂತ ಸಮುದಾಯ ಕಾಮಗಾರಿಗಳನ್ನು ಪ್ರೊತ್ಸಾಹಿಸಿ, ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಿಇಓ ಸ್ವರೂಪ ಟಿ.ಕೆ ಅವರು ಹೇಳಿದರು.

ಇದನ್ನೂ ಓದಿ: ಖ್ಯಾತ ನಿರ್ಮಾಪಕ ರಮೇಶ್ ರೆಡ್ಡಿ ಪುತ್ರಿ ವಿವಾಹ ಆರತಕ್ಷತೆಯಲ್ಲಿ ಚಿತ್ರರಂಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿ

ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ ಅವರು ಮಾತನಾಡಿ ಜಿಲ್ಲೆಯಲ್ಲಿ ನರೇಗಾ ಯೋಜನೆ ಉತ್ತಮ ಮಟ್ಟದಲ್ಲಿ ಅನುಷ್ಠಾನಗೊಂಡಿದೆ. ಕರೆ ರಕ್ಷಣೆ, ಜಲರಕ್ಷಣೆ, ಆಹಾರ ಮತ್ತು ಆರ್ಥಿಕ ಬೆಳೆ ಬೆಳೆಯಲು ನರೇಗಾದಲ್ಲಿ ರೈತರಿಗೆ ಹೆಚ್ಚು ಪ್ರೇರಣೆ ನೀಡಲಾಗುತ್ತಿದೆ. ಸಾವಯುವ ಕೃಷಿ, ಹನಿನೀರಾವರಿ, ತುಂತುರು ನೀರಾವರಿಗೆ ಆದ್ಯತೆ ಕೊಡಲಾಗಿದೆ. ರೈತರನ್ನು ಆರ್ಥಿಕವಾಗಿ ಸಬಲರಾಗಲು ಮತ್ತು ಪ್ರತಿ ಅರ್ಹ ವ್ಯಕ್ತಿಗೆ ನರೇಗಾ ಕೂಲಿ ಕೊಡಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಪ್ರಸಕ್ತ ವರ್ಷದ ಕ್ರೀಯಾಯೋಜನೆಯಲ್ಲಿ 328 ಕೆರೆಗಳನ್ನು ಹೂಳೆತ್ತುವ ಮತ್ತು ಅಭಿವೃದ್ಧಿಪಡಿಸುವ ಗುರಿಹೊಂದಲಾಗಿದೆ. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಮಾದರಿಗಳು ನಿರ್ಮಾಣವಾಗಿದೆ ಎಂದು ಉಪಕಾರ್ಯದರ್ಶಿ ವಿಜಯಕುಮಾರ ಆಜೂರ ತಿಳಿಸಿದರು.

ಧಾರವಾಡ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಸ್ವಾಗತಿಸಿದರು. ಪಂಚಾಯತ ರಾಜ್ಯ ವಿಭಾಗದ ಸಹಾಯಕ ನಿರ್ದೇಶಕ ಗಿರೀಶ ಕೋರಿ ವಂದಿಸಿದರು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಧಾರವಾಡ ತಾಲೂಕು ಸಹಾಯಕ ನಿರ್ದೇಶಕ ಚಂದ್ರು ಪೂಜಾರ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಇಂತಿಯಾಜ್, ಮಾದನಬಾವಿ ಗ್ರಾಮಪಂಚಾಯತ ಪಿಡಿಓ ಶೇಖಪ್ಪ ಬೆಟದೂರ, ಡ್ರ್ಯಾಗನ್ ಫ್ರೂಟ್ಸ್ ಬೆಳೆದ ರೈತ ರಘುನಾಥ ಕ್ಯಾಸನೂರ ಮತ್ತು ಅರವಿಂದ ಚವ್ಹಾಣ, ಪಪ್ಪಾಯಿ ಬೆಳೆದ ರೈತ ದಯಾನಂದ ಹೊಳೆಹಡಗಲಿ ಹಾಗೂ ಇತರರಿದ್ದರು.May be an image of agave and grass

ದುಬ್ಬನಮರಡಿ ಗ್ರಾಮದ ರಾಘವೇಂದ್ರ ಕ್ಯಾಸನೂರ ಮತ್ತು ಅರವಿಂದ ಚವ್ಹಾಣ ಅವರ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್:

ಧಾರವಾಡ ತಾಲೂಕಿನ ಹಂಗರಕಿ ಗ್ರಾಮ ಪಂಚಾಯತ ವ್ಯಾಪ್ತಿಯ ದುಬ್ಬನಮರಡಿ ಗ್ರಾಮದ ಫಲಾನುಭವಿಯಾದ ಅರವಿಂದ ಚವ್ಹಾಣರವರು 35 ವರ್ಷ ವಯಸ್ಸಿನವರಾಗಿದ್ದು ಕೃಷಿಯೇ ಅವರ ಜೀವನಾಧಾರವಾಗಿದೆ. ಸತತವಾಗಿ 10 ವರ್ಷಗಳಿಂದ ಅವರು ತಮ್ಮ ಜಮೀನಿನಲ್ಲಿ ಮೆಕ್ಕೆ ಜೋಳದ ಬೇಸಾಯ ಮಾಡಿಕೊಂಡು ಬಂದಿರುತ್ತಾರೆ ಆದರೆ ಇದರಿಂದ ಅವರಿಗೆ ಬರುವ ಆದಾಯದಲ್ಲಿ ಅವರ ಜೀವನ ಸಾಗಿಸುವುದು ತುಂಬಾ ಕಷ್ಟವಾಯಿತು. ತದನಂತರ ಅವರು ಲಾಭದಾಯಕವಾದ ಬೆಳೆ ಬೆಳೆಯುವ ಬಗ್ಗೆ ಚಿಂತಿಸಿ ಒಂದು ದಿನ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ ತೋಟಗಾರಿಕೆ ಬೆಳೆಗಳ ಬಗ್ಗೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಡ್ಯಾಗನ್ ಫ್ರೂಟ್ ಬೆಳೆ ಬೆಳೆಯಲು ಆಸಕ್ತಿ ಹೊಂದಿರುವುದಾಗಿ ತಿಳಿಸಿ ತೋಟಗಾರಿಕೆ ಇಲಾಖೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅರ್ಜಿ ಸಲ್ಲಿಸಿ ಮೇ 2022 ರಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ಒಟ್ಟು 924 ಸಸಿಗಳನ್ನು ನೆಡುವುದರ ಮೂಲಕ 0.3 ಹೆಕ್ಟರ್ ಪ್ರದೇಶದಲ್ಲಿ ಡ್ಯಾಗನ್ ಫ್ರೂಟ್ ಬೆಳೆಯನ್ನು ಬೆಳೆದು 37080 ರೂ ಕೂಲಿ ಮೊತ್ತದ ಸೌಲಭ್ಯ ಪಡೆದಿರುತ್ತಾರೆ.

ಈ ಬೆಳೆಯು ವರ್ಷದಲ್ಲಿ 4 ರಿಂದ 5 ತಿಂಗಳ ವರೆಗೆ ಇಳುವರಿಯನ್ನು ನೀಡುತ್ತಿದ್ದು ಫಲಾನುಭವಿಯು ಇಲ್ಲಿಯವರೆಗೆ ಸುಮಾರು 50 ಕ್ವಿಂಟಾಲ್ ಇಳುವರಿಯನ್ನು ಪಡೆದು ಮಾರುಕಟ್ಟೆ ಬೆಲೆ ಕೆಜಿ ಗೆ 170 ರೂ ರಂತೆ ಸುಮಾರು 8,50000 ರೂ ಆದಾಯ ಪಡೆದಿರುತ್ತಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದಾರೆ

ಮಾದನಭಾವಿ ಗ್ರಾಮಪಂಚಾಯತ ಘನತ್ಯಾಜ್ಯ ವಿಲೇವಾರಿ ಘಟಕ:

ಮಾದನಭಾವಿ ಗ್ರಾಮದ ಘನ ಮತ್ತು ದ್ರವ ತ್ಯಾಜ್ಯವನ್ನು ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ(ಸ್ವಚ್ಛ ಸಂಕೀರ್ಣ ಘಟಕ)ವನ್ನು ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿ, ಕಸವನ್ನು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಒಣಕಸ ಸಂಗ್ರಹಣೆ ಮಾಡಿ ವಿಲೇವಾರಿಯನ್ನು ಮಾಡಲಾಗುತ್ತಿದೆ, ಮತ್ತು ಸದರಿ ಯೋಜನೆಯಡಿಯಲ್ಲಿ ಬಚ್ಚಲು ಗುಂಡಿಗಳನ್ನು (ಸೋಪ್‍ಪಿಟ್) ನಿರ್ಮಾಣ ಮಾಡಿ ಮೂರು ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ.

ಈ ಘಟಕವು ಮೇ 5,2022 ಪ್ರಾರಂಭವಾಗಿದ್ದು, ಮಹಿಳಾ ಚಾಲಕಿಗೆ ಹಾಗೂ ಸಹಾಯಕಿಗೆ ಜನವರಿ 17, 2022 ರಿಂದ ಜನವರಿ 21, 2022 ವರೆಗೆ ತರಬೇತಿ ಪಡೆದಿರುತ್ತದೆ. ಇದರ ಅಧ್ಯಕ್ಷರು ಮಹಾದೇವಿ ಕೊಪ್ಪದ ಇವರು ಜಯಮಾತಾ ಮಹಿಳಾ ಸಂಘದಲ್ಲಿ ಇರುತ್ತಾರೆ. ಉಪಾಧ್ಯಕ್ಷರು ಜಯಶ್ರೀ ಬಾಂಬುರೆ ಇವರು ಕಾವೇರಿ ಸ್ತ್ರೀ ಶಕ್ತಿ ಸಂಘದಲ್ಲಿದ್ದು, ಈ ಘನ ತ್ಯಾಜ್ಯ ಘಟಕ ವಾಹನವು ಮನೆ ಮನೆಗೂ ಹೋಗಿ ಕಸ ಸಂಗ್ರಹಣೆ ಮಾಡುತ್ತದೆ. ಮತ್ತು ಹಸಿಕಸ, ಒಣಕಸವನ್ನು ಘಟಕದಲ್ಲಿ ಬೇರೆ ಬೇರೆ ವಿಂಗಡಣೆ ಮಾಡುತ್ತಾರೆ. ಇದ್ದರಿಂದ ಗ್ರಾಮವು ನೈರ್ಮಲ್ಯ ಆಗಿರುತ್ತದೆ. ದಿನನಿತ್ಯ ಮನೆ ಮನೆಗೆ ಹೋಗಿ ಕಸ ವಿಂಗಡಣೆ ಮಾಡುವುದರಿಂದ ರಸ್ತೆಗಳು, ಚರಂಡಿಗಳು ಸಚ್ಚವಾಗಿರುತ್ತವೆ. ಗ್ರಾಮದಲ್ಲಿ ಸೊಳ್ಳೆಗಳು ಕಡಿಮೆ ಪ್ರಮಾಣದಲ್ಲಿ ಇರುತ್ತವೆ, ಇದರಿಂದ ಗ್ರಾಮವು ನೈರ್ಮಲ್ಯತೆ, ಸ್ವಚ್ಛತೆಯಿಂದ ಕೊಡಿರುತ್ತದೆ.May be an image of 4 people

ಮಾದನಭಾವಿ ಗ್ರಾಮದ ಹುಚ್ಚಪ್ಪಜ್ಜನ ಕೆರೆ ಹೂಳೆತ್ತುವುದು:

ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದ ಹುಚ್ಚಪಜ್ಜನ ಕೆರೆ ಹೂಳೆತ್ತುವ ಕಾಮಗಾರಿಯು ಏಪ್ರೀಲ್ 2024 ಪ್ರಾರಂಭವಾಗಿದ್ದು ಒಟ್ಟು 184 ಕೂಲಿಕಾರರ ಎನ್ ಎಮ್ ಆರ್ ನ್ನು ಸೃಜಿಸಲಾಗಿದ್ದು, ಸದರಿ ಕರೆಯ ಒಟ್ಟು ವೀಸ್ತಿರ್ಣ 10 ಎಕರೆ 22 ಗುಂಟೆ ಇರುತ್ತದೆ. ಕಾಮಗಾರಿಯ ಅಂದಾಜು ಮೊತ್ತ 7 ಲಕ್ಷ ಇದ್ದು 6 ಲಕ್ಷ 30 ಸಾವಿರ ಕೂಲಿ ಮೊತ್ತ 70 ಸಾವಿರ ಕಾಮಗಾರಿ ಮೊತ್ತವಿದೆ.

ಮಾದನಬಾವಿಯಲ್ಲಿ ಅಂದವಾದ ಕೂಸಿನ ಮನೆ:

ಮಾದನಭಾವಿ ಗ್ರಾಮ ಪಂಚಾಯತಿ ಶಿಶುಪಾಲನಾ ಕೇಂದ್ರ ಮಾದನಭಾವಿ ಸೆಪ್ಟೆಂಬರ್ 21, 2022 ರಂದು ಪ್ರಾರಂಭವಾಯಿತ್ತು. ಇದರಲ್ಲಿ 10 ಜನ ಕೆಲಸದವರಿದ್ದು ಅವರಿಗೆ ತರಬೇತಿಯು ಸಹ ಆಗಿರುತ್ತದೆ. ಮಕ್ಕಳನ್ನು ಯಾವ ರೀತಿ ನೋಡಿಕೊಳ್ಳುವುದು ಅವರಿಗೆ ಏನು ಆಹಾರ ನೀಡಬೇಕೆಂದು ಸಹ ತರಬೇತಿ ನೀಡಲಾಗಿರುತ್ತದೆ. 0.6 ತಿಂಗಳಿನಿಂದ 3 ವರ್ಷದ ಒಳಗಿನ ಮಕ್ಕಳನ್ನು ದಾಖಲಾತಿ ಮಾಡಿಕೊಂಡು ನರೇಗಾ ಕೂಲಿಕಾರರು ಕೆಲಸಕ್ಕೆ ಹೋದಾಗ ಶಿಶುಪಾಲನಾ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಬಿಟ್ಟು ಹೋಗಬಹುದು. ಮಕ್ಕಳಿಗೆ ಸರಿಯಾದ ರೀತಿಯಲ್ಲಿ ನೋಡಿಕೊಂಡು ಸರಿಯಾದ ಆಹಾರ ಕ್ರಮವನ್ನು ಅನುಸರಿಸಿ, ಮಕ್ಕಳಿಗೆ ನೀಡಲಾಗುತ್ತದೆ. ಇದರಿಂದ ನರೇಗಾ ಕೂಲಿಕಾರರಿಗೆ ಕೆಲಸ ಮಾಡಲು ತುಂಬಾ ಅನುಕೂಲವಾಗುತ್ತದೆ. ಹಾಗೂ ಅವರಿಗೆ 3 ತಿಂಗಳಿಗೊಮ್ಮೆ 2 ಕೇರ್ ಟೇಕರ್ಸಗಳು ಕಾರ್ಯ ನಿರ್ವಹಿಸಬೇಕು ಮತ್ತು ಅವರಿಗೆ ನರೇಗಾ ಯೋಜನೆಯಡಿ 100 ದಿನಗಳ ಕೂಲಿ ಮೊತ್ತವನ್ನು ಪಾವತಿಸಲಾಗುತ್ತದೆ. ಇದ್ದರಿಂದ ಕೆಲಸಕ್ಕೆ ಹೋಗುವ ಎಲ್ಲಾ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ, ಹಾಗೂ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲಾ ಅವರಿಗೂ ಈ ಕೂಸಿನ ಮನೆ ತುಂಬಾ ಸಹಾಯವಾಗುತ್ತದೆ. ಅದೇ ರೀತಿ ಮಕ್ಕಳಿಗೆ ಆಟದ ಚಟುವಟಿಕೆಗಳನ್ನು ಸಹ ಮಾಡಲಾಗುತ್ತದೆ. ನರೇಗಾ ಕೂಲಿಕಾರರಿಗೆ ಇದು ತುಂಬಾ ಅನುಕೂಲವಾಗಿದೆ.

ಜಿಲ್ಲೆಯಲ್ಲಿ ಒಟ್ಟು 102 ಕೂಸಿನ ಮನೆಗಳನ್ನು ತೆರೆಯಲಾಗಿದ್ದು, ಈ ಎಲ್ಲಾ ಕೂಸಿನ ಮನೆಗಳಿಗೆ ಅನುದಾನ, ಸ್ವಂತ ಕಟ್ಟಡ, ಆಟದ ಸಾಮಾನು, ಅಗತ್ಯ ಪರಿಕರಗಳನ್ನು ಪೂರೈಸಲಾಗಿದೆ.

ಕೂಸಿನ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ತರಬೇತಿ ಹೊಂದಿದ 1020 ಜನ ಮಹಿಳಾ ಕೇರ್‍ಟೆಕರ್ಸಗಳನ್ನು ನೇಮಿಸಲಾಗಿದೆ. 102 ಕೂಸಿನ ಮನೆಗಳಲ್ಲಿ 561 ಬಾಲಕರು ಮತ್ತು 577 ಬಾಲಕಿಯರು ಸೇರಿ ಒಟ್ಟು 1138 ಮಕ್ಕಳು ದಾಖಲಾಗಿದ್ದಾರೆ ಎಂದು ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ. ಅವರು ತಿಳಿಸಿದ್ದಾರೆ.May be an image of 6 people

ಪಪ್ಪಾಯಾ ಬೆಳೆಯಲ್ಲಿ ಲಾಭ ಕಂಡ ರೈತ ದಯಾನಂದ:

ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾದನಭಾವಿ ಗ್ರಾಮದವರಾದ ದಯಾನಂದ ಹೊಳೆಹಡಗಲಿ ರವರು 28 ವರ್ಷ ವಯಸ್ಸಿನವರಾಗಿದ್ದು, ಕೃಷಿಯಲ್ಲಿ ಅಪಾರವಾದ ಆಸಕ್ತಿ ಹೊಂದಿದವರಾಗಿದ್ದಾರೆ. ಅವರು ಮೊದಲು ತಮ್ಮ ಜಮೀನಿನಲ್ಲಿ ಕಬ್ಬಿನ ಬೇಸಾಯ ಮಾಡುತ್ತಿದ್ದರು. ಆದರೆ ವರ್ಷದಿಂದ ವರ್ಷಕ್ಕೆ ಕಬ್ಬಿನ ಬೆಳೆಯ ಇಳುವರಿ ಕಡಿಮೆಯಾಗುತ್ತಾ ಬರುತ್ತಿರುವುದರಿಂದ ಅವರಿಗೆ ಕಬ್ಬಿನ ಕೃಷಿಯಲ್ಲಿ ಆಸಕ್ತಿ ಕಡಿಮೆಯಾಗಿತ್ತು. ಇದರಿಂದಾಗಿ ನಾವು ನಷ್ಟವನ್ನು ಅನುಭವಿಸುತ್ತಿರುವುದರಿಂದ ಹಾಗೂ ಕಬ್ಬಿನ ಬೆಳೆಗೆ ಪರ್ಯಾಯವಾಗಿ ನಾವು ಬೇರೆ ಬೆಳೆಯನ್ನು ಬೆಳೆಯಬೇಕೆಂದು ತೀರ್ಮಾನಿಸಿದರು. ಒಂದು ದಿನ ಫಲಾನುಭವಿಯು ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಭಾಗವಹಿಸಿ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಇರುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ನಂತರ ಪಪ್ಪಾಯ ಬೆಳೆಯನ್ನು ಬೆಳೆಯಲು ಉತ್ಸಾಹಕರಿರುವುದಾಗಿ ತಿಳಿಸಿ, ಪಪ್ಪಾಯಿ ಬೇಸಾಯದ ಬಗ್ಗೆ ಮಾಹಿತಿಯನ್ನು ಪಡೆದಕೊಂಡರು. ಗ್ರಾಮ ಸಭೆಯಲ್ಲಿ ಆಯ್ಕೆಯಾಗಿ ನವೆಂಬರ್ 2023 ರಲ್ಲಿ 0.6 ಹಕ್ಕರ್ ಪ್ರದೇಶದಲ್ಲಿ ಪಪ್ಪಾಯಿ ಬೆಳೆಯನ್ನು ಬೆಳೆದು 37,604 ಕೂಲಿ ಮೊತ್ತದ ಸೌಲಭ್ಯವನ್ನು ಪಡೆದಿರುತ್ತಾರೆ.

ಜನೇವರಿ 2024 ರಿಂದ ಮಾರ್ಚ 2024 ರ ಅವಧಿಯಲ್ಲಿ ತಿಂಗಳಿಗೆ 2 ಬಾರಿ ಕಟಾವು ಮಾಡಿ 20 ಟನ್ ಇಳುವರಿ ಪಡೆದಿದ್ದಾರೆ. ಮಾರುಕಟ್ಟೆಯ ಬೆಲೆ ಪ್ರತಿ ಕೆ.ಜಿಗೆ 12 ರೂ ರಂತೆ 20 ಟನ್‍ಗೆ ಸುಮಾರು 2,40,000 ಆದಾಯ ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News