ಅವಳಿ ನಗರ ಹುಬ್ಬಳ್ಳಿ-ಧಾರವಾಡ ಸೇರಿ ಮೂರು ನಗರಗಳಿಗೆ ಮೆಟ್ರೋ ರೈಲು!

ರಾಜ್ಯದಲ್ಲಿ ಸಾರಿಗೆ ಸಂಪರ್ಕ ಹಾಗೂ ಮಹಾನಗರಗಳ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಹಲವು ಭರಪೂರ ಘೋಷಣೆಗಳನ್ನು ಘೋಷಿಸಿದೆ.

Last Updated : Feb 8, 2019, 05:28 PM IST
ಅವಳಿ ನಗರ ಹುಬ್ಬಳ್ಳಿ-ಧಾರವಾಡ ಸೇರಿ ಮೂರು ನಗರಗಳಿಗೆ ಮೆಟ್ರೋ ರೈಲು! title=

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಸಂಪರ್ಕ ಹಾಗೂ ಮಹಾನಗರಗಳ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಹಲವು ಭರಪೂರ ಘೋಷಣೆಗಳನ್ನು ಘೋಷಿಸಿದೆ.

ಇದರಲ್ಲಿ ಪ್ರಮುಖವಾಗಿ ಬೆಂಗಳೂರು ಹೊರತುಪಡಿಸಿ ಉಳಿದ ರಾಜ್ಯದಲ್ಲಿನ ನಗರಗಳಲ್ಲಿ ಮೆಟ್ರೋ ರೈಲು ಸಾರಿಗೆಯನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಈಗ ರಾಜ್ಯಸರ್ಕಾರ ಕಾರ್ಯಪ್ರವತ್ತರಾಗಿದೆ.ಅದರಲ್ಲಿ ಪ್ರಮುಖವಾಗಿ ಈಗ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ,ಮೈಸೂರು ಮತ್ತು  ಮಂಗಳೂರುಗಳಲ್ಲಿ ಮೆಟ್ರೋ ರೈಲು ಯೋಜನೆ ಬಗ್ಗೆ ಪೂರ್ವ ಕಾರ್ಯ ಸಾಧ್ಯತಾ ವರದಿ ತಯಾರಿಸಲು ಪರಿಶೀಲನೆ ನಡೆಸುವಂತೆ ಸರ್ಕಾರ ಬಜೆಟ್ ನಲ್ಲಿ  ಪ್ರಸ್ತಾಪಿಸಿದೆ.

ಒಂದು ವೇಳೆ ಈ ಯೋಜನೆಯನ್ನು ರಾಜ್ಯ ಸರ್ಕಾರ ಕಾರ್ಯರೂಪಕ್ಕೆ ತಂದಿದ್ದೆ ಆದಲ್ಲಿ ಕರ್ನಾಟಕವು ಟೈರ್-2 ನಗರಗಳಲ್ಲಿ ಮೆಟ್ರೋ ರೈಲ್ ಯೋಜನೆಯನ್ನು ಘೋಷಿಸಿದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

 

Trending News