ಬೆಂಗಳೂರು: ಮೇಕೆದಾಟು ಯೋಜನೆ (Mekedatu Yojane) ಅನುಷ್ಠಾನಕ್ಕೆ ಒತ್ತಾಯಿಸಿ ನಡೆಯುತ್ತಿರುವ ಕಾಂಗ್ರೆಸ್ ಪಾದಯಾತ್ರೆಯ ಮೊದಲ ದಿನದ ಕೊನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivakumar) ಗೆ ಕೋವಿಡ್ ಟೆಸ್ಟ್ ನೀಡಿ ಎಂದು ಕೇಳಿದ ಅಧಿಕಾರಿ ವಿರುದ್ಧ ಡಿಕೆಶಿ ಗರಂ ಆಗಿ, ಕೋವಿಡ್ ಟೆಸ್ಟ್ ಕೊಡಲ್ಲ ಬೇಕಾದ್ರೆ ಕೇಸ್ ಹಾಕಿ, ತಿಹಾರ್ ಜೈಲು ನೋಡಿದ್ದಾಯ್ತು ಈಗ ರಾಮನಗರ ಜೈಲು ನೋಡನ ಎಂದರು.
ಮೊದಲ ದಿನದ ಪಾದಯಾತ್ರೆಯನ್ನು ದೊಡ್ಡಾಲಹಳ್ಳಿಯ ಅಂತ್ಯ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ಎಡಿಸಿ ಬಂದು ಕೋವಿಡ್ ಟೆಸ್ಟ್ (Covid Test) ನೀಡಲು ಮನವಿ ಮಾಡಿದರು. ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivakumar) ಈ ರೀತಿ ನಡುವಳಿಕೆಯನ್ನ ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಂದ ನಿರೀಕ್ಷೆ ಮಾಡಿರಲಿಲ್ಲ. ನಿಮ್ಮನ್ನು ಕಳುಹಿಸಿದ್ದು ಯಾರು? ಬ್ಲಡಿ ಫೆಲೋಸ್ ನನಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಹೋಗಿ ಆರೋಗ್ಯ ಸಚಿವರಿಗೆ ಹೇಳಿ ನನ್ನ ಹತ್ರ ಆಟ ಬೇಡ, ಯಾರಾದ್ರೂ ಬಚ್ಚಗಳತ್ರ ಆಟ ಆಡಲಿ. ವಿಮಾನ ನಿಲ್ದಾಣ (Airport) ದಲ್ಲಿ ಬೇರೆ ಕಡೆಯಿಂದ ಬಂದ ಪ್ರಯಾಣಿಕರನನ್ನ ಟೆಸ್ಟ್ ಮಾಡಿಸಿ ಎಂದು ಕೆಂಡಾಮಂಡಲವಾದರು.
ಇದನ್ನೂ ಓದಿ- ಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ : 'ಹೌದು ಹುಲಿಯಾ' ಎಂದು ಸಿದ್ದರಾಮಯ್ಯಗೆ ಅಭಿಮಾನಿಗಳ ಸ್ವಾಗತ
ಏನ್ ಟೆಸ್ಟ್ ಮಾಡದು? ಏನನ್ನ ಟೆಸ್ಟ್ ಮಾಡದು? ಬೇಕಾದರೆ ಅವನು ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ಏಕವಚನದಲ್ಲಿ ಮಾತನಾಡಿದರು. ನೀವು ನನ್ನ ಆರೋಗ್ಯ ಕಾಳಜಿಯ ಮೆರೆಗೆ ಬಂದ್ದಿದೀರ, ಆದರೆ ನಾನು ಯಾವುದೇ ಪರೀಕ್ಷೆ ಕೊಡಲ್ಲ. ನಾನು ಫಿಟ್ ಆಗಿದ್ದೇನೆ. ಹದಿನೈದು ಕಿಲೋಮೀಟರ್ ನಡೆದಿದ್ದೇನೆ. ಎಲ್ಲಾದ್ರೂ ಜಗ್ಗಿದೀನ ಎಂದು ಕೋವಿಡ್ ಟೆಸ್ಟ್ (Covid Test) ಮಾಡಲು ಬಂದವರನ್ನೇ ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ, ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿರುವ ಸರ್ಕಾರದ ವಿರುದ್ಧವೂ ಖಾರವಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ನನಗೆ ದೇಶದ ಕಾನೂನು ಗೊತ್ತು, ಗೃಹ ಸಚಿವರಿಗೋ, ಆರೋಗ್ಯ ಸಚಿವರಿಗೋ ಅಥವಾ ಮುಖ್ಯಮಂತ್ರಿಗೋ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗಿರಬಹುದು ಅವರು ಟೆಸ್ಟ್ ಮಾಡಿಸಿಕೊಳ್ಳಲಿ, ನಾನು ಮಾಡಿಸಲ್ಲ ಎಂದು ಹೇಳಿದರು.
ಇದನ್ನೂ ಓದಿ- ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ!: ನದಿಗೆ ಇಳಿಯುವಾಗ ಜಾರಿಬಿದ್ದ ಡಿಕೆಶಿ ಟ್ರೋಲ್ ಮಾಡಿದ ಬಿಜೆಪಿ
ಈ ವೇಳೆ ಕರೋನಾ ವೇಳೆಯಲ್ಲಿ ತಾವು ಸಂತ್ರಸ್ತರಿಗೆ ನೆರವಾಗಿರುವ ಬಗ್ಗೆಯೂ ಮಾಹಿತಿ ಹಂಚಿಕೊಂಡ ಡಿ.ಕೆ. ಶಿವಕುಮಾರ್, ಕೋವಿಡ್-19 ನಿಂದ ಸಾವುಗಳಾದಗ ಸಂಸದ ಡಿ ಕೆ ಸುರೇಶ್ ಪಿಪಿಇ ಕಿಟ್ ಧರಿಸಿ ಮೃತ ದೇಹಗಳನ್ನು ಹೂಳಿದ್ದಾರೆ, ಎಷ್ಟೋ ಕೋವಿಡ್ ಪೀಡಿತ ಕುಟುಂಬಗಳಿಗೆ ಧನ ಸಹಾಯವನ್ನೂ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಆಕ್ಸಿಜನ್ ಸೇವೆಯನ್ನೂ ನೀಡಿತ್ತು ಎಂದು ತಿಳಿಸಿದರು.
ಗಮನಾರ್ಹವಾಗಿ, 'ನೀರಿಗಾಗಿ ನಡಿಗೆ' (Walk for Water) ಮೇಕೆದಾಟು ಯೋಜನೆ ಶೀಘ್ರ ಕಾಮಗಾರಿ ಆರಂಭಕ್ಕೆ ಒತ್ತಾಯಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿದೆ. ನಿನ್ನೆ ಮೊದಲ ದಿನದ ಪಾದಯಾತ್ರೆ ಸಾತನೂರಿನಲ್ಲಿ ಅಂತ್ಯವಾಗಿದ್ದು ಇಂದು ಕನಕಪುರದ ಕಡೆ ಮುಂದುವರೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.