ಸರ್ಕಾರಿ ಕಾರ್ಯಕ್ರಮಗಳಿಗೆ ಮಾಧ್ಯಮದವರ ನಿರ್ಬಂಧ ಖಂಡನೀಯ: ಎಚ್.ಡಿ. ದೇವೇಗೌಡ

ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಹರಣವಾದ ಸಂದರ್ಭದಲ್ಲಿ ಲಕ್ಷಾಂತರ ಆರ್​​ಎಸ್​ಎಸ್​ ಮುಖಂಡರ ಜತೆ ನಾನೂ ಹೋರಾಡಿದ್ದೆ- ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ  

Last Updated : Oct 13, 2019, 04:58 PM IST
ಸರ್ಕಾರಿ ಕಾರ್ಯಕ್ರಮಗಳಿಗೆ ಮಾಧ್ಯಮದವರ ನಿರ್ಬಂಧ ಖಂಡನೀಯ: ಎಚ್.ಡಿ. ದೇವೇಗೌಡ title=
File image

ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಿಗೆ ಮಾಧ್ಯಮದವರನ್ನು ನಿರ್ಬಂಧಿಸಿರುವುದನ್ನು ತಾವು ತೀವ್ರವಾಗಿ ಖಂಡಿಸುತ್ತೇನೆ ಎಂದು ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ

ಸರ್ಕಾರಿ ಕಾರ್ಯಕ್ರಮಗಳಿಗೆ ಮಾಧ್ಯಮದವರಿಗೆ ಹೇರಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಎಚ್.ಡಿ. ದೇವೇಗೌಡ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಅಲ್ಲದೆ ಇಂತಹ ನಿರ್ಬಂಧಗಳು ಮುಂದುವರೆದರೆ ನಾನು ನಿಮ್ಮ ಜೊತೆ ಸೇರಿ ಉಗ್ರವಾಗಿ ಪ್ರತಿಭಟನೆ ನಡೆಸುತ್ತೇನೆ. ಮಾಧ್ಯಮದವರ ಜತೆ ನಾನು ಸದಾ ಇರುತ್ತೇನೆ ಎಂದರು.

ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಹರಣವಾದ ಸಂದರ್ಭದಲ್ಲಿ ಲಕ್ಷಾಂತರ ಆರ್​​ಎಸ್​ಎಸ್​ ಮುಖಂಡರ ಜತೆ ನಾನೂ ಹೋರಾಡಿದ್ದೆ. ಸ್ಪೀಕರ್ ನಿರ್ಬಂಧ ಹೇರಿದ್ದಾರೆ ಅಂತಾರೆ. ಈಗ ನೋಡಿದರೆ ಸರ್ಕಾರ ಕಾರ್ಯಕ್ರಮಗಳಿಗೂ ನಿರ್ಬಂಧ ಹೇರಿದ್ದಾರೆ ಅಂತೀರಿ. ಯಾರನ್ನ ನಂಬೋದು ಹೇಳಿ ಎಂದು ಪ್ರಶ್ನಿಸಿದ ದೇವೇಗೌಡರು, ಮಾಧ್ಯಮದವರ ನಿರ್ಬಂಧದಕ್ಕೆ  ಸ್ಪೀಕರ್​ ಹೊಣೆಗಾರರಲ್ಲ. ಮುಖ್ಯಮಂತ್ರಿಗಳು ಹಾಗೂ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರು ಸೆರೆವಾಸ ಅನುಭವಿಸಿದ್ದರು. ಇದನ್ನು ಬಿಜೆಪಿಯವರು ಗಮನದಲ್ಲಿಟ್ಟುಕೊಳ್ಳಬೇಕು. ಆಗಿನ ಹೋರಾಟದಲ್ಲಿ ಯಡಿಯೂರಪ್ಪ ಅವರು ಜೈಲಿಗೆ ಬಂದಿದ್ದರೋ, ಇಲ್ಲವೋ ಗೊತ್ತಿಲ್ಲ. ಆದರೆ ಬಿಜೆಪಿ ಹಿರಿಯ ನಾಯಕರಾದ ಅಡ್ವಾಣಿ, ವಾಜಪೇಯಿ, ಎ.ಕೆ. ಸುಬ್ಬಯ್ಯ ಅವರನ್ನೂ ಬೆಂಗಳೂರಿನ ಜೈಲಿಗೆ ಹಾಕಲಾಗಿತ್ತು ಎಂದು ದೇವೇಗೌಡರು ನೆನಪಿಸಿಕೊಂಡರು.
 

Trending News