DK Shivakumar : ಮಂಗಳೂರು ಕುಕ್ಕರ್ ಬ್ಲಾಸ್ಟ್ : 'ಸರ್ಕಾರ ಮತದಾರರ ಮಾಹಿತಿ ಕಳ್ಳತನ ವಿಚಾರ ಡೈವರ್ಟ್ ಮಾಡುವುದು'

ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ ಭಯೋತ್ಪಾದಕ ಚಟುವಟಿಕೆ ಎಂದು ಸರ್ಕಾರ ಹೇಳಿರುವುದು ಮತದಾರರ ಮಾಹಿತಿ ಕಳ್ಳತನ, ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್ ಮಾಡವ ಪ್ರಯತ್ನ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.

Written by - Prashobh Devanahalli | Last Updated : Dec 15, 2022, 04:53 PM IST
  • ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ
  • ಸರ್ಕಾರ ಹೇಳಿರುವುದು ಮತದಾರರ ಮಾಹಿತಿ ಕಳ್ಳತನ
  • ಷ್ಟಾಚಾರದ ಆರೋಪವನ್ನು ಡೈವರ್ಟ್ ಮಾಡವ ಪ್ರಯತ್ನ
DK Shivakumar : ಮಂಗಳೂರು ಕುಕ್ಕರ್ ಬ್ಲಾಸ್ಟ್ : 'ಸರ್ಕಾರ ಮತದಾರರ ಮಾಹಿತಿ ಕಳ್ಳತನ ವಿಚಾರ ಡೈವರ್ಟ್ ಮಾಡುವುದು' title=

ಬೆಂಗಳೂರು : ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ ಭಯೋತ್ಪಾದಕ ಚಟುವಟಿಕೆ ಎಂದು ಸರ್ಕಾರ ಹೇಳಿರುವುದು ಮತದಾರರ ಮಾಹಿತಿ ಕಳ್ಳತನ, ಭ್ರಷ್ಟಾಚಾರದ ಆರೋಪವನ್ನು ಡೈವರ್ಟ್ ಮಾಡವ ಪ್ರಯತ್ನ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಕುಕ್ಕರ್ ಬ್ಕಾಸ್ಟ್ ಅಂತೆ. ಕುಕ್ಕರ್ ಬ್ಲಾಸ್ಟ್ ಮೂಲಕ ಭ್ರಷ್ಟಾಚಾರ, ಮತದಾರರ ಮಾಹಿತಿ ಕಳ್ಳತನದ ಆರೋಪವನ್ನು ಡೈವರ್ಟ್ ಮಾಡಲು ಹೊರಟಿದ್ದೀರಾ? ಭಯೋತ್ಪಾದಕ‌ ಎಲ್ಲಿಂದ ಬಂದ?. ಡಿಜಿ ಸ್ಫೋಟದ ಬಗ್ಗೆ ಕೂಡಲೇ ಟ್ವೀಟ್ ಮಾಡುತ್ತಾರೆ. ಬಿಜೆಪಿ ಸರ್ಕಾರ ದಿಕ್ಕು ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಇದನ್ನೂ ಓದಿ : ರಾಜ್ಯದ ಉತ್ತರ -ದಕ್ಷಿಣವಾಗಿ ಡಿಕೆಶಿ -ಸಿದ್ದರಾಮಯ್ಯ ಪ್ರತ್ಯೇಕ ಪ್ರವಾಸ

ತನಿಖೆ ಮಾಡದೇ ಭಯೋತ್ಪಾದಕ ದಾಳಿ ಎಂದಿದ್ದಾರೆ. ಅದು ಹೇಗೆ ಸಾಧ್ಯ? ಇಲ್ಲಿ ದಿಲ್ಲಿ, ಮುಂಬೈ, ಜಮ್ಮು ಕಾಶ್ಮೀರ, ಪುಲ್ವಾಮ ತರದ ದಾಳಿ ಆಗಿಲ್ಲ‌. ಆ ತರದ ಉಗ್ರರ ದಾಳಿ ಮಂಗಳೂರಿನಲ್ಲಿ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

ಸಂಕ್ರಾಂತಿ ಸೀಕ್ರೆಟ್ : ವಲಸೆ ಶಾಸಕರು ಮತ್ತೆ ಕಾಂಗ್ರೆಸ್ ಸೇರುತ್ತಾರ?

ಆಪರೇಷನ್ ಕಮಲಕ್ಕೆ ಒಳಗಾದ ಶಾಸಕರು, ಮರಳಿ ಕಾಂಗ್ರೆಸ್ ಸೇರ್ತಾರಾ ಎಂಬ ಪ್ರಶ್ನೆಗೆ ಡಿಕೆಶಿ ಆಶ್ಚರ್ಯಕರ ಹೇಳಿಕೆ ಕೊಟ್ಟರು.

ಸಂಕ್ರಾಂತಿ ಬಳಿಕ ಎಲ್ಲಾ ಗೊತ್ತಾಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದ ಅವರು, ಗುಟ್ಟು, ಗುಟ್ಟಾಗಿಯೇ ಇರುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು. ಆ ಮೂಲಕ ಮರಳಿ ಆಪರೇಷನ್ ಆಗುತ್ತೆ ಎಂಬ ಚರ್ಚೆಗೆ ಪುಷ್ಟಿ ನೀಡುವ ಹೇಳಿಕೆ ನೀಡಿದರು. ನಿಮಗೆ ಎಲ್ಲಾ ಗೊತ್ತಾಗುತ್ತದೆ ಎಂದರು.

ಸಿಎಂ ಸ್ಥಾನಕ್ಕೆ ಕಚ್ಚಾಟ

ಸಿಎಂ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಕಿತ್ತಾಟ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಬಿಜೆಪಿನೂ ಒಪ್ಪಿಕೊಂಡಿದೆ. ಡಬಲ್ ಇಂಜಿನ್ ಸರ್ಕಾರ, ಭಾವನೆ ಹಂಚುವ ಸರ್ಕಾರ ಎನ್ನುವ ಬಿಜೆಪಿ ಪ್ರಜಾಪ್ರಭುತ್ವದಲ್ಲಿ ಜನರ ಮುಂದೆ ಹೋಗಲು ಏಕೆ ಹೆದರುತ್ತಿದ್ದಾರೆ ಎಂಬುದು ನನ್ನ ಪ್ರಶ್ನೆ. ಜಿಲ್ಲಾ ಪಂಚಾಯತ್, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೋಗಲು ನಿಮಗೆ ಏಕೆ ಭಯ?. ಮಂಡ್ಯ ಮತ್ತು ಬೆಳಗಾವಿ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಬೈ ಎಲೆಕ್ಷನ್ ನಲ್ಲಿ ಜನ ಕಾಂಗ್ರೆಸ್ ನ್ನು ಗೆಲ್ಲಿಸಿ ಜನ ನಮಗೆ ಧೈರ್ಯ ತುಂಬಿದ್ದಾರೆ. ಇಂದು ಕೋರ್ಟ್ ಚುನಾವಣೆ ವಿಳಂಬ ಹಿನ್ನೆಲೆ ಸರ್ಕಾರದ ಮೇಲೆ ಐದು ಲಕ್ಷ ದಂಡ ಹಾಕಿದ್ದಾರೆ. ಸಿಎಂ ಬೊಮ್ಮಾಯಿ‌ ಅವರೇ ನಾನು ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದೇನೆ ಎಂದು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಯಾವುದಾದರೂ ಜನರಿಗೆ ಮುಟ್ಟುವ ಕಾರ್ಯಕ್ರಮ ಮಾಡಿದ್ದೀರಾ?. ಮೂರು ವರ್ಷ ಆದರೂ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಲು ಆಗಿಲ್ಲ. ನಮ್ಮ ಕಾಲದ ಒಂದು ಹಗರಣವನ್ನೂ ಬಿಜೆಪಿ ಸರ್ಕಾರಕ್ಕೆ ಹೊರಗೆ ತರಲು ಆಗಿಲ್ಲ. ಭ್ರಷ್ಟಾಚಾರದಿಂದ ಎರಡು ಮಂತ್ರಿಗಳು ತಲೆದಂಡ ಕೊಡಬೇಕಾಯಿತು. ಆದರೆ ಸಿಎಂ ತಕ್ಷಣ ಇಬ್ಬರೂ ಕ್ಲೀನ್ ಆಗಿ ಹೊರಬರುತ್ತಾರೆ ಎಂದು ಹೇಳುತ್ತಾರೆ. ಗುತ್ತಿಗೆದಾರರ ಸಂಘದ ಕೆಂಪಣ್ಣ ವಿಧಾನಸೌಧದಲ್ಲೇ ಕಮಿಷನ್ ಆರೋಪ ಮಾಡಿದರು. ಅದರ ಸಂಬಂಧ ತನಿಖೆ ಮಾಡಲು ಆಗಿಲ್ಲ. ಹೋಗಲಿ ಆರೋಪ ಸುಳ್ಳೆಂದಾದರೆ ಅವರನ್ನು ಬಂಧಿಸಲು ಸಾಧ್ಯವಾಗಿಲ್ಲ. ಆರೋಪ ಮಾಡಿದ ಗುತ್ತಿಗೆದಾರರಿಗೆ ವಿಚಾರಣೆಗಾಗಿ ಒಬ್ಬರಿಗೂ ನೋಟೀಸ್ ಕೊಡಲು ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮತದಾರರ ಹೆಸರನ್ನು ಡಿಲೀಟ್ ಮಾಡಲಾಗುತ್ತಿದೆ. 8,500 ಅಧಿಕಾರಿಗಳಿಗೆ ನೀಡುವ ಬಿಎಲ್ ಓ ಜವಾಬ್ದಾರಿಯನ್ನು ಯಾವುದೋ ಎನ್ ಜಿಒಗೆ ಕೊಟ್ಟಿದ್ದೀರಾ?. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಗಂಗೋತ್ರಿ ಅಂತಿದ್ರಲ್ಲಾ. ಆ ಗಂಗೋತ್ರಿಯನ್ನು ಬಿಚ್ಚಿರಿ ಎಂದು ಸವಾಲು ಹಾಕಿದರು.

ಸರ್ವೆ ಪ್ರಕಾರ ಕಾಂಗ್ರೆಸ್ 136 ಸ್ಥಾನ ಗೆಲ್ಲುತ್ತೆ

ನಮ್ಮ ಸರ್ವೆ ಪ್ರಕಾರ 136 ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿಗೆ 60-65 ಬರಲಿದೆ. ಅವರಿಗೂ ಇದೆ ನಮಗೂ ಇದೆ ಸಂಕ್ರಾಂತಿ ಎಂದು ತಿಳಿಸಿದರು.

ನನಗೂ ಸಿದ್ದರಾಮಯ್ಯ ಯಾವುದಾದರು ಕಿತ್ತಾಟ ಮಾಡಿದ್ದೇವೆ ಎಂದು ಹೇಳಲಿ. ಯಾವುದೇ ಕಿತ್ತಾಟ ಇಲ್ಲ. ಬಿಜೆಪಿಯಲ್ಲೂ ನೂರಾರು ಕಿತ್ತಾಟ ಇದೆ.‌ ನಾನು ಹೇಳಲಿ. ಹೈ ಕಮಾಂಡ್ ಯಾವ ನಾಯಕರನ್ನೂ ಕೂರಿಸಿ ಮಾತನಾಡಿಲ್ಲ. ಹೈ ಕಮಾಂಡ್  ಕೂರಿಸಿ ಪ್ಲಾನ್ ಆಫ್ ಆಕ್ಷನ್ ಮಾಡಿದ್ದೇವೆ. ಅವರು ನಮಗೆ ಮಾರ್ಗದರ್ಶನ ಕೊಡಿಸಿದ್ದಾರೆ. ನಮ್ಮಲ್ಲಿ ವ್ಯಕ್ತಿ ಪೂಜೆ ಇಲ್ಲ‌. ಪಕ್ಷ ಪೂಜೆ ಇದೆ. ನಾವು ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದರು‌.

ನಾನು ಕೋತ್ವಾಲನ ಶಿಷ್ಯ ಎಂಬುದಕ್ಕೆ ಸಾಕ್ಷಿ ಏನಿದೆ?

ರೌಡಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ರೌಡಿಗಳ ಪಕ್ಷ ಸ್ಟಾರ್ಟ್ ಮಾಡಿದ್ದಾರೆ. ಈಗ ಆರೇಷನ್ ರೌಡಿ ಮಾಡುತ್ತಿದ್ದಾರೆ. ನಾನು ಕೊತ್ವಾಲನ ಶಿಷ್ಯನ ಎಂಬುದಕ್ಕೆ ಯಾವ ಸಾಕ್ಷಿ ಇದೆ.  ನಾನು 1985ರಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧೆಗೆ ನಿಂತಿದ್ದೇನೆ. ಅಲ್ಲಿಂದ ನಾನು ಸಕ್ರಿಯ ರಾಜಕೀಯಲ್ಲಿದ್ದೇನೆ. ನನಗೆ ನನ್ನದೇ ಆದ ಇತಿಹಾಸ ಇದೆ. ದೇವರಾಜು ಅರಸು, ಗುಂಡೂರಾವ್, ಬಂಗಾರಪ್ಪ ಅಧಿಕಾರದಲ್ಲಿ ಇದ್ದಾಗ  ಬೇಕಾದಷ್ಟು ಜನ ಬಂದು ಹೋಗ್ತಾ ಇರುತ್ತಾರೆ. ತಪ್ಪೇನಿದೆ ಅದರಲ್ಲಿ? ಎಂದರು.

ನಾವು ನುಡಿದಂತೆ ನಡೆದಿದ್ದೇವೆ. ನಮ್ಮ ರಾಷ್ಟ್ರೀಯ ನಾಯಕರು ಇದ್ದಾರೆ. ರಾಹುಲ್ ಗಾಂಧಿ ಯಾರು ಎಲ್ಲೆಲ್ಲಿ ಬರಬೇಕು ಅಲ್ಲಿ ಬರುತ್ತಾರೆ. ನಮ್ಮ ರಾಜ್ಯದ ನಾಯಕತ್ವವೇ ಸಮರ್ಥರಿದ್ದಾರೆ. ಅವರಿಗೆ ನಾಯಕರ ಕೊರತೆ ಇದೆ. ಅದಕ್ಕಾಗಿ ಮೋದಿ-ಶಾರನ್ನು ರಾಜ್ಯಕ್ಕೆ ಕರೆಸುತ್ತಿದ್ದಾರೆ ಎಂದರು.

ಇದನ್ನೂ ಓದಿ : ಚಾಮರಾಜನಗರದಲ್ಲಿ ಆನೆ, ಕರಡಿ ದಾಳಿಯಿಂದ ಇಬ್ಬರು ರೈತರಿಗೆ ಗಂಭೀರ ಗಾಯ

ನಾನು ಎಷ್ಟು ಕುಸ್ತಿ ಮಾಡಲಿ

ಕುಮಾರಸ್ವಾಮಿ ಜೊತೆ ಎಷ್ಟು ಅಂತಾ ಕುಸ್ತಿ ಮಾಡಲಿ? ಅವಾಗ ಏನೋ ಹುಡುಗ ಇದ್ದೋ ಕುಸ್ತಿ ಮಾಡಿದ್ವಿ ಎಂದು ಸೂಚ್ಯವಾಗಿ ತಿಳಿಸಿದರು. ಇವಾಗ ಕೂದಲು ಎಲ್ಲಾ ಬೆಳ್ಳಗೆ ಆಗಿದೆ, ಈವಾಗ ಕುಸ್ತಿ ಮಾಡೋಕೆ ಆಗುತ್ತಾ..? ಆದರೆ ಅವರ ವಿರುದ್ದ ಸೈದ್ಧಾಂತಿಕವಾಗಿ ಕುಸ್ತಿ ಮಾಡುತ್ತೇನೆ.‌ ವೈಯ್ಯಕ್ತಿಕವಾಗಿ ಕುಸ್ತಿ ಮಾಡಲ್ಲ ಎಂದು ಕುಮಾರಸ್ವಾಮಿ ಬಗ್ಗೆ ಸಾಪ್ಟ್ ಇದ್ದಿರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News