ಮ್ಯಾಟ್ರಿಮೋನಿ ಮೂಲಕ 259 ಮಹಿಳೆಯರಿಗೆ ಪಂಗನಾಮ ಹಾಕಿದ್ದ ವ್ಯಕ್ತಿಯ ಬಂಧನ..! 

ಮೊಬೈಟ್ ಟವರ್ ಗಳನ್ನ ಆಧರಿಸಿ ಆರೋಪಿಯನ್ನ ಬಂಧಿಸಿದಾಗ ನಿಜಕ್ಕೂ ಪೊಲೀಸರೇ ಶಾಕ್ ಆಗಿದ್ದರು. ಆರೋಪಿ ನರೇಶ್ ವಂಚನೆ ಮಾಡಿದ್ದು ಇದೊಂದೇ ಕುಟುಂಬಕ್ಕಲ್ಲ ಅಲ್ಲ. ಬರೋಬ್ಬರಿ 259 ಕುಟುಂಬಕ್ಕೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ..

Written by - VISHWANATH HARIHARA | Edited by - Krishna N K | Last Updated : Feb 28, 2024, 10:06 PM IST
  • ಮ್ಯಾಟ್ರಿಮೋನಿ ಮೂಲಕ 259 ಮಹಿಳೆಯರಿಗೆ ವಂಚನೆ
  • ಮಹಿಳೆಯರನ್ನ ದೋಚಲು ನಾನಾ ವೇಷ ಧರಿಸುತ್ತಿದ್ದ ವ್ಯಕ್ತಿ
  • ಆರೋಪಿಯನ್ನ ಬಂಧಿಸಿದಾಗ ನಿಜಕ್ಕೂ ಪೊಲೀಸರೇ ಶಾಕ್
ಮ್ಯಾಟ್ರಿಮೋನಿ ಮೂಲಕ 259 ಮಹಿಳೆಯರಿಗೆ ಪಂಗನಾಮ ಹಾಕಿದ್ದ ವ್ಯಕ್ತಿಯ ಬಂಧನ..!  title=

ಬೆಂಗಳೂರು : ಹೆಣ್ಣಿನ ವಿಚಾರದಲ್ಲಿ ಒಬ್ಬ ಮನುಷ್ಯ ಎಷ್ಟು ಜನಕ್ಕೆ ಮೋಸ ಮಾಡಬಹುದು..? ಸಧ್ಯ ನಕಲಿ ಮ್ಯಾಟ್ರಿಮೋನಿ ಮೂಲಕ 259 ಮಹಿಳೆಯರಿಗೆ ವಂಚನೆ ಮಾಡಿದವನ ಕಥೆ ಕೇಳಿದ್ರೆ ನೀವು ಶಾಕ್‌ ಆಗ್ತೀರಾ...  ಬನ್ನಿ ಅಷ್ಟಕ್ಕು ಅವನ ಮೊಟೀವ್ ಏನಿತ್ತು.‌? ಯಾವ ರೀತಿ ವಂಚನೆ ಮಾಡ್ತಿದ್ದ...? ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿದೆ..

ಪವನ್ ಅಗರ್ವಾಲ್ ಎಂದು ನಕಲಿ ಹೆಸರಿಟ್ಟುಕೊಂಡಿದ್ದ ನರೇಶ್ ಪುರಿ ಗೋಸ್ವಾಮಿ ಎಂಬಾತನನ್ನ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಇವನ ವೃತ್ತಿ ಇಂತಹದ್ದೇ ಅಂತೇನಿಲ್ಲ, ಕಷ್ಟಂ ಅಧಿಕಾರಿಯೂ ಆಗ್ತಾನೆ, ಐಪಿಎಸ್ ಆಫೀಸರ್‌ ಸಹ ಆಗ್ತಾನೆ. ನಾನೊಬ್ಬ ಪೊಲೀಟೀಷಿಯನ್ ಅಂದರೂ ಅಚ್ಚರಿಯೇನಿಲ್ಲ.. ಯಸ್ ಮಹಿಳೆಯರನ್ನ ದೋಚಲು ನಾನಾ ವೇಷ ಧರಿಸುವ ಈತನ ಮೂಲ ರಾಜಸ್ಥಾನ.

ಇದನ್ನೂ ಓದಿ: ಚಾಕು ಇರಿದರೂ ಇಬ್ಬರು ಪುಂಡರನ್ನು ಸೆರೆ ಹಿಡಿದ ಪೊಲೀಸ್ ಕಾನ್ಸ್ಟೇಬಲ್..! 

ಬೆಂಗಳೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಒಂದು ದಾಖಲಾಗಿತ್ತು. ಮ್ಯಾಟ್ರಿಮೋನಿಯಲ್ಲಿ ಪರಿಚಯವಾದ ಪವನ್ ಅಗರ್ವಾಲ್ ಎಂಬಾತನನ್ನ ನೋಡಿ ಮದ್ವೆ ಫಿಕ್ಸ್ ಮಾಡಿಕೊಳ್ಳುವ ಸಲುವಾಗಿ ಕುಟುಂಬವೊಂದು ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದಿತ್ತು‌. ಈ ವೇಳೆ ಪವನ್ ಅಗರ್ವಾಲ್ ತಾನು ಸ್ವಲ್ಪ ಬಿಝಿ ಇದೀನಿ ನನ್ನ ಚಿಕ್ಕಪ್ಪ ನಿಮ್ಮನ್ನ ಕರ್ಕೊಂಡು ಬರ್ತಾರೆ ಎಂದು ನಂಬಿಸಿ ವ್ಯಕ್ತಿಯೊಬ್ಬನನ್ನ ಕಳಿಸಿದ್ದ. ಆ ವ್ಯಕ್ತಿ  ಕುಟುಂಬವನ್ನ ಭೇಟಿ ಮಾಡಿದ ಬಳಿಕ ಪರ್ಸ್ ಮರೆತು ಬಂದಿದೇನೆ 10ಸಾವಿರ ಕೊಡಿ ಮನೆಗೆ ಹೋದಾಗ ಕೊಡ್ತಿನಿ ಅಂತ ನಂಬಿಸಿ ಅವರಿಂದ ಹಣ ಪಡೆದು ಸ್ವಿಚ್ ಆಫ್ ಮಾಡಿಕೊಂಡಿದ್ದ. ಇತ್ತ ಪವನ್ ಎಂಬ ನಕಲಿ ವ್ಯಕ್ತಿ ಕೂಡ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಬಳಿಕ ಅಸಲಿಯತ್ತು ಹೊರ ಬಿದ್ದಿತ್ತು.

ವಂಚನೆಗೊಳಗಾದವರು ದೂರನ್ನ ದಾಖಲಿಸಿದ ಬಳಕಿ ಕಾರ್ಯಾಚರಣೆಗಿಳಿದ ರೈಲ್ವೇ ಪೊಲೀಸರು, ಸಿಸಿಟಿವಿ ಹಾಗು ಮೊಬೈಟ್ ಟವರ್ ಗಳನ್ನ ಆಧರಿಸಿ ಆರೋಪಿಯನ್ನ ಬಂಧಿಸಿದಾಗ ನಿಜಕ್ಕೂ ಪೊಲೀಸರೇ ಶಾಕ್ ಆಗಿದ್ದರು. ಆರೋಪಿ ನರೇಶ್ ವಂಚನೆ ಮಾಡಿದ್ದು ಇದೊಂದೇ ಕುಟುಂಬಕ್ಕಲ್ಲ ಅಲ್ಲ. ಬರೋಬ್ಬರಿ 259 ಕುಟುಂಬಕ್ಕೆ. ಯಸ್ ರಾಜಸ್ಥಾನ 56 ಜನ, ಉತ್ತರ ಪ್ರದೇಶ 32, ದೆಹಲಿ 32, ಕರ್ನಾಟಕ 17 ಮಧ್ಯಪ್ರದೇಶ 16, ಮಹಾರಾಷ್ಟ್ರ 13 ಗುಜರಾತ್ 11, ತಮಿಳುನಾಡು 6 ಬಿಹಾರ 05 ಆಂದ್ರ ಪ್ರದೇಶದ 02 ಜನ ಯುವತಿ /ಮಹಿಳೆಯರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಈತ ಮಹಿಳೆ ಹಾಗು ವಿಚ್ಚೇಧಿತರನ್ನೇ ಟಾರ್ಗೇಟ್ ಮಾಡಿ ಸುಲಿಗೆಗೆ ನಿಂತು ಬಿಡ್ತಿದ್ದ.

ಇದನ್ನೂ ಓದಿ:ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಬ್ರಾಂಡ್ ಅಂಬಾಸಿಡರ್ ಆಗಿ ʼಡಾಲಿʼ ಆಯ್ಕೆ

ಅದಕ್ಕೆಂದೇ ತನ್ನ ನಕಲಿ ಡಿಪಿ‌ ಬಳಸಿ ವಿವಾಹಾಕಾಂಕ್ಷಿ ಮಹಿಳೆಯರು ಇರುವ ಅಗರ್ ಸೇನ್ ವೈವಾಹಿಕ್ ಮಂಚ್ ಎಂಬ ವಾಟ್ಸಪ್ ಗ್ರೂಪ್ ಗೆ ಆಡ್ ಮಾಡಿಸಿಕೊಂಡಿದ್ದ .ನಂತರ ಅದರಲ್ಲಿದ್ದ ಮಹಿಳೆಯರ ಬಯೋಡಾಟ ಪಡೆದು ಅವರನ್ನ ಸಂಪರ್ಕಿಸುತಿದ್ದ. ನಂತರ  ಅವರನ್ನ  ಸಂಪೂರ್ಣವಾಗಿ ನಂಬಿಸಿ ಅವರಿಂದ ಏನು ಬೇಕೋ ಅದನ್ನ ಸುಲಿಗೆ ಮಾಡಿ ನಂತರ ಸ್ವಿಚ್ ಆಫ್ ಮಾಡಿಕೊಳ್ತಿದ್ದ. ಅಷ್ಟಲ್ಲದೆ ಈತ ಪೇಪರ್ ನಲ್ಲಿ ಕೂಡ ಬರುವ ಆಡ್ ನ್ನು ನೋಡಿ ಸಂಪರ್ಕ ಮಾಡಿ ಅವರಿಗೂ ಇದೇ ರೀತಿ ವಂಚನೆ ಮಾಡಿದ್ದ.

ಇನ್ನು ಕೆಲ ಮಹಿಳೆಯರಿಗೂ ವಂಚನೆ ಮಾಡಲು ಹೋಗಿದ್ದನಂತೆ ಆದ್ರೆ ಈತನಿಗೆ ಇಂಗ್ಲೀಷ್ ಬರಲ್ಲ ಎಂಬ ಕಾರಣಕ್ಕೆ ರಿಜೆಕ್ಟ್ ಮಾಡಿ ಬಚಾವಾಗಿದ್ದಾರೆ.  ಇನ್ನು ಪ್ರತಿಯೊಬ್ಬ ಮಹಿಳೆಯನ್ನ ಸಂಪರ್ಕ ಮಾಡುವಾಗಲೂ ಆತ ಹೊಸ ಸಿಮ್ ಕಾರ್ಡ್ ಅನ್ನು ಬಳಕೆ ಮಾಡ್ತಿದ್ದ. ಅಂದ ಹಾಗೆ ಈತ ಹುಡುಗೀಯರನ್ನ ಮರಳು ಮಾಡ್ತಿದ್ದಿದ್ದು ರಾತ್ರಿ ವೇಳೆ. ಸದ್ಯ ಇಂತಹ ಕಾಮುಕನಲ್ಲದ ಕಾಮುಕನನ್ನ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಬಹುತೇಕ ಹೆಣ್ಣು ಮಕ್ಕಳು ಮರ್ಯಾದೆಗೆ ಅಂಜಿ ದೂರು ನೀಡಿಲ್ಲ. ಈತನಿಂದ ವಂಚನೆಗೊಳಗಾದ ಮಹಿಳೆಯರು ದೂರು ನೀಡಿದರೆ ಈತನಿಗೆ ಇನ್ನೂ ಹೆಚ್ಚು ಶಿಕ್ಷೆಯಾಗಬಹುದು. ಸದ್ಯ ರೈಲ್ವೇ ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News