Malemahadeshwara Betta: ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಸಂಭ್ರಮ

ಮಲೆಮಹದೇಶ್ವರ ಬೆಟ್ಟದ ದೇಗುಲದಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು ದೇಗುಲದ ಪ್ರಾಂಗಣ, ಗರ್ಭಗುಡಿಗೆ ಹಣ್ಣು-ತರಕಾರಿ ಅಲಂಕಾರ ಮಾಡಿರುವುದು ಗಮನ ಸೆಳೆಯುತ್ತಿದೆ. ಮುಸುಕಿನ ಜೋಳ, ಕಬ್ಬು, ಸೇಬು ಸೇರಿದಂತೆ ವಿವಿಧ ಹಣ್ಣು-ತರಕಾಗಳಿಂದ ಮಲೆಮಹದೇಶ್ವರ ದೇವಾಲಯ ಕಂಗೊಳಿಸುತ್ತಿದೆ.‌

Written by - Zee Kannada News Desk | Last Updated : Mar 1, 2022, 12:37 PM IST
  • ಮಹಾಶಿವರಾತ್ರಿ ವಿಶೇಷ
  • ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ
  • ೇಗುಲದ ಪ್ರಾಂಗಣ, ಗರ್ಭಗುಡಿಗೆ ಹಣ್ಣು-ತರಕಾರಿ ಅಲಂಕಾರ
Malemahadeshwara Betta: ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಸಂಭ್ರಮ  title=
Male Mahadeshwara madappa betta

ಚಾಮರಾಜನಗರ: ಜಿಲ್ಲೆಯಲ್ಲಿ ಮಹಾಶಿವರಾತ್ರಿ ಆಚರಣೆಯು ಕಳೆಗಟ್ಟಿದ್ದು ವಿವಿಧ ದೇವಾಲಯಗಳಿಗೆ ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬರುತ್ತಿದೆ, ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಂತೂ ಭಕ್ತಸಾಗರವೇ ಜಮಾಯಿಸಿದೆ.

ಮಲೆಮಹದೇಶ್ವರ ಬೆಟ್ಟದ (Male Mahadeshwara Betta) ದೇಗುಲದಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು ದೇಗುಲದ ಪ್ರಾಂಗಣ, ಗರ್ಭಗುಡಿಗೆ ಹಣ್ಣು-ತರಕಾರಿ ಅಲಂಕಾರ ಮಾಡಿರುವುದು ಗಮನ ಸೆಳೆಯುತ್ತಿದೆ. ಮುಸುಕಿನ ಜೋಳ, ಕಬ್ಬು, ಸೇಬು ಸೇರಿದಂತೆ ವಿವಿಧ ಹಣ್ಣು-ತರಕಾಗಳಿಂದ ಮಲೆಮಹದೇಶ್ವರ ದೇವಾಲಯ ಕಂಗೊಳಿಸುತ್ತಿದೆ.‌

ಇದನ್ನೂ ಓದಿ- Mahashivratri: ಮಹಾಶಿವರಾತ್ರಿಯಂದು ಶಿವನ ಆರಾಧನೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ

ಇಂದು ಮಲೆ ಮಹದೇಶ್ವರನಿಗೆ (Mahadeshwara) ಎಣ್ಣೆಮಜ್ಜನ ಸೇವೆ, ವಿಶೇಷ ಸೇವೆ ನಡೆದಿದ್ದು ಸಂಜೆ ಹೊತ್ತಿಗೆ ಉತ್ಸವಗಳು ಜರುಗಲಿವೆ. ಬುಧವಾರ ಅಮಾವಾಸ್ಯೆ ವಿಶೇಷ ಪೂಜೆ ನೆರವೇರಲಿದೆ.

ಇದನ್ನೂ ಓದಿ- Mahashivaratri: ಮಹಾಶಿವರಾತ್ರಿಯಂದು ಗ್ರಹಗಳ ಅದ್ಭುತ ಸಂಗಮ! ಈ ಮುಹೂರ್ತಗಳಲ್ಲಿ ಪೂಜೆ ಮಾಡುವುದರಿಂದ ಸಿಗುತ್ತೆ ಶಿವನ ಕೃಪೆ

ಗುರುವಾರ ಬೆಳಿಗ್ಗೆ 8.10 ರಿಂದ 8.45 ಕ್ಕೆ ಸಲ್ಲುವ ಶುಭ ಮುಹೂರ್ತದಲ್ಲಿ ಮಾದೇಶ್ವರ ಸ್ವಾಮಿಯ ಮಹಾ ರಥೋತ್ಸವ ನೆರವೇರಲಿದೆ. ಅದೇ ದಿನ ರಾತ್ರಿ ಅಭಿಷೇಕ ಮುಗಿದ ಬಳಿಕ ನಡೆಯುವ ಕೊಂಡೋತ್ಸದೊಂದಿಗೆ ಈ ಬಾರಿಯ ಶಿವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದ್ದು, ರಥೋತ್ಸವಕ್ಕೆ ಸ್ಥಳೀಯರಿಗಷ್ಟೇ ಪಾಲ್ಗೊಳ್ಳಲು ಅವಕಾಶವಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News